ಪ್ರತಿ ಲಕ್ಷ ಜನರ ಪೈಕಿ ದೇಶದಲ್ಲಿ 7.1 ಮಂದಿಗೆ ಮಾತ್ರ ಸೋಂಕು| ಆರೋಗ್ಯ ಸಚಿವಾಲಯ| ಜಾಗತಿಕ ಸರಾಸರಿ 60| ಅಮೆರಿಕದಲ್ಲಿ 431: ಕೇಂದ್ರ

ನವದೆಹಲಿ(ಮೇ.19): ಭಾರತದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 7.1 ಕೊರೋನಾ ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ. ಆದರೆ ಜಾಗತಿಕವಾಗಿ ಪ್ರತೀ ಲಕ್ಷ ಜನಸಂಖ್ಯೆಗೆ 60 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಶ್ವ ಆರೋಗ್ಯ ಸಂಸ್ಥೆಯ ಪರಿಸ್ಥಿತಿ ವರದಿಯ ಅಂಕಿ-ಅಂಶವನ್ನು ಉಲ್ಲೇಖಿಸಿ, ‘ಭಾರತದಲ್ಲಿ ಪ್ರತೀ ಲಕ್ಷಜನರಲ್ಲಿ 7.1 ಜನರಲ್ಲಿ ಮಾತ್ರ ಕೊರೋನಾ ಕಾಣಿಸಿಕೊಳ್ಳುತ್ತಿದೆ. ಗುಣಮುಖರಾಗುವ ಪ್ರಮಾಣ ಶೇ.38.29ರಷ್ಟಿದೆ. ಆಕ್ರಮಣಕಾರಿ ಮುಂಜಾಗ್ರತಾ ಕ್ರಮಗಳಿಂದ ಈ ಫಲಿತಾಂಶ ವ್ಯಕ್ತವಾಗಿದೆ’ ಎಂದು ಹೇಳಿದೆ.

ದೇಶ ಸೋಂಕು/ಪ್ರತಿ ಲಕ್ಷಕ್ಕೆ

ಸ್ಪೇನ್‌ 494

ಅಮೆರಿಕ 431

ಇಟಲಿ 372

ಬ್ರಿಟನ್‌ 361

ಜರ್ಮನಿ 210

ಫ್ರಾನ್ಸ್‌ 209

ರಷ್ಯಾ 195

ಭಾರತ 7.1

ಟರ್ಕಿ 180

ಇರಾನ್‌ 145

ಬ್ರೆಜಿಲ್‌ 104