ಕಡಿದಾದ ಕೋಟೆ ಹತ್ತಿದ ಅಜ್ಜಿಯ ಸಾಹಸಕ್ಕೆ ಮೆಚ್ಚುಗೆಗಳ ಸುರಿಮಳೆ| ಮಹಾರಾಷ್ಟ್ರದ ನಾಶಿಕ್‌ ಜಿಲ್ಲೆಯ ಪ್ರಸಿದ್ಧ ಕಡಿದಾದ ಕೋಟೆ| ಸಾಧಿಸುವ ಛಲವೊಂದಿದ್ದರೆ ವಯಸ್ಸು ಸೇರಿದಂತೆ ಯಾವುದೇ ವಿಚಾರಗಳು ಅಡ್ಡಿಯಾಗಲ್ಲ

ಮುಂಬೈ(ಅ.13): ಮಹಾರಾಷ್ಟ್ರದ ನಾಶಿಕ್‌ ಜಿಲ್ಲೆಯ ಪ್ರಸಿದ್ಧ ಕಡಿದಾದ ಕೋಟೆಯೊಂದನ್ನು ಹತ್ತಿರುವ 68 ವರ್ಷದ ವೃದ್ಧೆಯೊಬ್ಬರು ಹೊಸ ಸಾಹಸಕ್ಕೆ ಮೆಚ್ಚುಗೆ ಮತ್ತು ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಹೀಗೆ 80 ಡಿಗ್ರಿ ಕೋನದಲ್ಲಿರುವ ಕಡಿದಾದ ಮೆಟ್ಟಿಲುಗಳನ್ನು ಹತ್ತಿ ಕೋಟೆಯ ಮೇಲ್ಭಾಗಕ್ಕೆ ಏರಿದ ಹಿರಿಯ ಮಹಿಳೆಯನ್ನು ಆಶಾ ಅಂಬಾಡೆ ಎಂದು ಕೆಲ ನೆಟ್ಟಿಗರು ಗುರುತಿಸಿದ್ದಾರೆ.

Scroll to load tweet…

ತನ್ಮೂಲಕ ಸಾಧಿಸುವ ಛಲವೊಂದಿದ್ದರೆ ವಯಸ್ಸು ಸೇರಿದಂತೆ ಯಾವುದೇ ವಿಚಾರಗಳು ಅಡ್ಡಿಯಾಗಲ್ಲ ಎಂಬುದನ್ನು ಈ ವೃದ್ಧೆ ತೋರಿಸಿಕೊಟ್ಟಿದ್ದಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Scroll to load tweet…
Scroll to load tweet…
Scroll to load tweet…

ಸೋಮವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ಈ ವಿಡಿಯೋವನ್ನು ಟ್ವೀಟರ್‌ನಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿ, ತಮ್ಮ ಮೆಚ್ಚುಗೆಯನ್ನು ದಾಖಲಿಸಿದ್ದಾರೆ.