ಚೆನ್ನೈ(ಮಾ.26): ವಯಸ್ಸು ಕೇವಲ ಸಂಖ್ಯೆ ಮಾತ್ರ, ಒಬ್ಬ ವ್ಯಕ್ತಿಯು ತನ್ನ ವಯಸ್ಸನ್ನು ಲೆಕ್ಕಿಸದೆ ಏನು ಬೇಕಾದರೂ ಸಾಧಿಸಬಹುದು ಎಂದು ಹೇಳುವುದಕ್ಕೆ ಉದಾಹರಣೆಯಾಗಿ ನಡೆದ ಈ ಘಟನೆ ಈ ಸುದ್ದಿಯಾಗಿದೆ.

ಕೆಲವರು ಈ ನುಡಿಗಟ್ಟುಗಳನ್ನು ನಿಜಮಾಡಿ ಉದಾಹರಣೆಯಾಗಿ ನಿಲ್ಲುತ್ತಾರೆ. 67 ನೇ ವಯಸ್ಸಿನಲ್ಲಿ ಹೆಚ್ಚಿನ ಜನರು ಕುಟುಂಬ ಮತ್ತು ಸ್ನೇಹಿತರೊಂದಿಗೆ ನಿವೃತ್ತಿಯ ನಂತರದ ಚಟುವಟಿಕೆಗಳಲ್ಲಿ ಸಂತೋಷದಿಂದ ತೊಡಗುತ್ತಾರೆ.

ಎನ್ಐಎಫ್‌ಟಿನಲ್ಲಿ ಪ್ರೊಫೆಸರ್ ಹುದ್ದೆ, 70 ಸಾವಿರ ರೂ.ವರೆಗೂ ವೇತನ

ಆದರೆ ನಿವೃತ್ತ ಶಿಕ್ಷಕ ಶಂಕರನಾರಾಯಣನ್ ಶಂಕರಪಾಂಡಿಯನ್ ಅವರು ಎಂಜಿನಿಯರಿಂಗ್ (ಗೇಟ್) ಪರೀಕ್ಷೆಯಲ್ಲಿ ಕಷ್ಟದ ಗೇಟ್ ಪರೀಕ್ಷೆ ಪಾಸ್ ಮಾಡಿದ್ದಾರೆ.

ಮೂವರ ಅಜ್ಜ ಶಂಕರಪಾಂಡಿಯನ್ ತಮಿಳುನಾಡಿನ ಹಿಂದೂ ಕಾಲೇಜಿನಲ್ಲಿ ಶಿಕ್ಷಕರಾಗಿದ್ದರು. ಈ ವರ್ಷ ಅವರು ಗೇಟ್ ಉತ್ತೀರ್ಣರಾದ ಅತ್ಯಂತ ಹಳೆಯ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

ಬೆಂಗಳೂರು ವಿವಿ ಬಿ.ಕಾಂ-ಬಿಎಸ್ಸಿ ಪ್ರಶ್ನೆ ಪತ್ರಿಕೆ ಅದಲು ಬದಲು..!

ಆದರೆ ಶೈಕ್ಷಣಿಕ ಯಶಸ್ಸಿನ ಜರ್ನಿ ಬಹಳಷ್ಟು ಏರಿಳಿತವನ್ನು ಹೊಂದಿದೆ. 67 ವರ್ಷದಲ್ಲಿ ಗೇಟ್ ಪರೀಕ್ಷೆಯನ್ನು ಎಟೆಂಡ್ ಮಾಡಲು ಇವರು ಪರೀಕ್ಷಾ ಕೊಠಡಿಗೆ ಬಂದಾಗ ಪೇರೆಂಟ್ಸ್ ಮಕ್ಕಳಿಗಾಗಿ ಕಾಯುವ ಪ್ರದೇಶದ ಕಡೆಗೆ ಕಳುಹಿಸಲಾಗಿತ್ತು.

"ಪರೀಕ್ಷಾ ಕೇಂದ್ರದ ಸಿಬ್ಬಂದಿ ನಾನು ವಿದ್ಯಾರ್ಥಿಯೊಂದಿಗೆ ಹೋಗುತ್ತಿದ್ದೇನೆ ಎಂದು ಭಾವಿಸಿದ್ದರು. ಆದರೆ ನಾನು ಅಭ್ಯರ್ಥಿ ಎಂದು ಯಾರೂ ಭಾವಿಸಲಿಲ್ಲ ಎಂದು ಅವರು ಹೇಳಿದ್ದಾರೆ.

ಪತ್ರ ಬರೆದು, ಚಿನ್ನದ ಪದಕ ಗೆದ್ದು, ಸ್ವಿಜರ್ಲೆಂಡ್‌ಗೆ ಹೋಗಿ!

ಶಂಕರಪಾಂಡಿಯನ್ 27 ಪತ್ರಿಕೆಗಳಲ್ಲಿ ಎರಡನ್ನು ಆರಿಸಿಕೊಂಡರು ಮತ್ತು ಗಣಿತದಲ್ಲಿ 338 ಮತ್ತು ಕಂಪ್ಯೂಟರ್ ಸೈನ್ಸ್‌ನಲ್ಲಿ 482 ಅಂಕಗಳೊಂದಿಗೆ ಉತ್ತೀರ್ಣರಾದರು.

67ರ ಅವರು 1976 ರಲ್ಲಿ ತಂಜಾವೂರಿನ ಎವಿವಿಎಂ ಶ್ರೀ ಪಿಷ್ಪಮ್ ಕಾಲೇಜಿನಿಂದ ಎಂಎಸ್ಸಿ ಮುಗಿಸಿದ್ದರು. ಗೇಟ್ ನಂತರ ಶಂಕರಪಾಂಡಿಯನ್ ಈಗ ವರ್ಧಿತ ರಿಯಾಲಿಟಿ (ಎಆರ್) ಕ್ಷೇತ್ರದಲ್ಲಿ ಸಂಶೋಧನೆ ನಡೆಸುವ ಗುರಿಯನ್ನು ಹೊಂದಿದ್ದಾರೆ.

ಗೇಟ್ ಸಂಸ್ಥೆಗಳು ಅಭ್ಯರ್ಥಿಗಳ ಮೇಲೆ ವಯಸ್ಸಿನ ನಿರ್ಬಂಧ ಹೇರುವುದಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪ್ರವೇಶ ಪಡೆಯಲು ಬಯಸುವವರಿಗೆ ಮತ್ತು ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ ಉದ್ಯೋಗ ಪಡೆಯಲು ಇದು ಅರ್ಹತಾ ಪರೀಕ್ಷೆಯಾಗಿದೆ.

ಈ ವರ್ಷ ಪರೀಕ್ಷೆಗೆ ನೋಂದಾಯಿಸಿದ ಅತ್ಯಂತ ಹಿರಿಯ ವ್ಯಕ್ತಿ 88 ವರ್ಷದ ವ್ಯಕ್ತಿ. ಆದರೆ, ಅವರು ಪರೀಕ್ಷೆಗೆ ಹಾಜರಾಗಲಿಲ್ಲ.ಅರ್ಹತೆ ಪಡೆದ ಅತ್ಯಂತ ಕಿರಿಯ ಅಭ್ಯರ್ಥಿ ಉತ್ತರ ಪ್ರದೇಶದ ದಯಾಲ್‌ಬಾಗ್ ಶಿಕ್ಷಣ ಸಂಸ್ಥೆಯ 17 ವರ್ಷದ ವಿದ್ಯಾರ್ಥಿ ರಿತಿಕ್ ಶರ್ಮಾ.