ಕೊರೋನಾ ಬಗ್ಗೆ ಚರ್ಚೆ: ಮೋದಿ ಕರೆದ ಸಭೆಗೆ ಕಾಂಗ್ರೆಸ್, ಅಕಾಲಿ ದಳ ಗೈರು!
* ಕೊರೋನಾ ವಿಚಾರವಾಗಿ ಚರ್ಚಿಸಲು ಸರ್ವಪಕ್ಷ ಕರೆದ ಪ್ರಧಾನಿ ಮೋದಿ
* ಸಭೆಯಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ಮತ್ತು ಬಿಜೆಪಿಯ ಮಾಜಿ ಮಿತ್ರ ಅಕಾಲಿ ದಳ ನಿರ್ಧಾರ
* ಸಭೆಯಲ್ಲಿ ಯಾಕೆ ಭಾಗವಹಿಸುತ್ತಿಲ್ಲ ಎಂಬ ಕಾರಣವನ್ನೂ ತಿಳಿಸಿದ ನಾಯಕರು
ನವದೆಹಲಿ(ಜು.20): ಕೊರೋನಾ ಸದ್ಯ ಇಡೀ ದೇಶದ ಹಾಟ್ ಟಾಪಿಕ್. ಒಂದೆಡೆ ಜನ ಸಾಮಾಣ್ಯರು ಈ ಕಣ್ಣಿಗೆ ಕಾಣದ ವೈರಸ್ ಹಾವಳಿಗೆ ಬೆಚ್ಚಿ ಬಿದ್ದಿದ್ದರೆ, ಅತ್ತ ಸರ್ಕಾರ ಹಾಗೂ ವಿಪಕ್ಷಗಳು ಕೊರೋನಾ ನಿರ್ವಹಣೆ ಬಗ್ಗೆ ಕೆಸರೆರಚಾಟ ಆರಂಭಿಸಿವೆ. ಹೀಗಿರುವಾಗ ಮಂಗಳವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಕೊರೋನಾ ವಿಚಾರವಾಗಿ ಕರೆದ ಸಭೆಯಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ಮತ್ತು ಬಿಜೆಪಿಯ ಮಾಜಿ ಮಿತ್ರ ಅಕಾಲಿ ದಳ ನಿರ್ಧರಿಸಿದೆ.
ಹೌದು ದೇಶದ ಕೊರೋನಾದ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆ ಕರೆದಿದ್ದರು. ಇದಕ್ಕೆ ಇದರಲ್ಲಿ ತಾವು ಬಾಗವಹಿಸುತ್ತಿಲ್ಲ, ಹೀಗೆಂದು ಬಹಿಷ್ಕಾರ ಅಲ್ಲ ಏಕೆಂದರೆ ಕೇಂದ್ರ ಸಭಾಂಗಣದಲ್ಲಿ ಪ್ರಸ್ತುತಿ ನಡೆಯಬೇಕೆಂದು ನಾವು ಬಯಸುತ್ತೇವೆ. ಎಲ್ಲಾ ಸಂಸದರ ಮುಂದೆ ಪ್ರಸ್ತುತಿ ಇರಬೇಕು ಇದರಿಂದ ಅವರು ತಮ್ಮ ಪ್ರದೇಶದ ಜನರಿಗೆ ತಿಳಿಸಬಹುದು ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಅದೇ ಸಮಯದಲ್ಲಿ, ಅಕಾಲಿ ದಳವೂ ಪಿಎಂ ಮೋದಿ ಕರೆ ಕೊರೋನಾ ಕುರಿತಾದ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸಿದೆ. ರೈತರ ಸಮಸ್ಯೆ ಪರಿಹಾರದ ಬಗ್ಗೆ ಸಭೆ ನಡೆಯುವವರೆಗೂ ಪ್ರಧಾನಮಂತ್ರಿಯೊಂದಿಗೆ ಬೇರೆ ಯಾವ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಕಾಲಿ ದಳ ಹೇಳಿದೆ.
ಇನ್ನು ಪ್ರಧಾನಿ ಮೋದಿ ಕರೆದ ಕೊರೋನಾ ಕುರಿತಾದ ಸಭೆಯಲ್ಲಿ ಆರೋಗ್ಯ ಸಚಿವರು ಪ್ರಧಾನಿ ಸಮ್ಮುಖದಲ್ಲಿ ಸಂಕ್ಷಿಪ್ತವಾಗಿ ಮಾತನಾಡಲಿದ್ದಾರೆ. ಪ್ರಧಾನಮಂತ್ರಿ ಕೂಡ ಸಂಕ್ಷಿಪ್ತ ಭಾಷಣ ಮಾಡಬಹುದು.