ಭಾರತದಲ್ಲಿ ಶೇ.65ರಷ್ಟು ವೃದ್ಧರಿಗೆ ಆರ್ಥಿಕ ಭದ್ರತೆಯಿಲ್ಲ..!
ಶೇ.65ರಷ್ಟು ಹಿರಿಯ ನಾಗರಿಕರಿಗೆ ಆರ್ಥಿಕ ಅಭದ್ರತೆಯಿದ್ದರೆ, ಶೇ.34 ಮಂದಿಯ ಬಳಿ ಮಾತ್ರ ಆರೋಗ್ಯ ವಿಮೆಯಿದೆ. ಹಾಗೆಯೇ ಶೋಷಣೆಗೊಳಗಾ ಗುತ್ತಿರುವ ಪೋಷಕರ ಪೈಕಿ ಶೇ.94 ಮಂದಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಸಮೀಕ್ಷೆ ತಿಳಿಸಿದೆ.
ನವದೆಹಲಿ(ಜೂ.16): ಪ್ರಾಯಕ್ಕೆ ಬರುವವರೆಗೂ ತಮ್ಮ ನ್ನು ಸಾಕಿ ಸಲುಹಿದ ತಂದೆ-ತಾಯಿಯರಿಂದ ಅವರ ಇಳಿವಯಸ್ಸಿನಲ್ಲೂ ಮನೆಗೆಲಸ ಮಾಡು ವಂತೆ ಪುತ್ರ ಮತ್ತು ಸೊಸೆಯರು ಶೋಷಣೆ ಮಾಡುತ್ತಿದ್ದಾರೆ. ಜೊತೆಗೆ ಭಾರತದ ಶೇ.65 ರಷ್ಟು ವೃದ್ಧ ತಂದೆ-ತಾಯಿಯರಿಗೆ ಯಾವುದೇ ಆರ್ಥಿಕ ಆದಾಯವಿಲ್ಲ ಎಂದು 'ಏಜ್ ಇಂಡಿ ಯಾ' ಸಂಸ್ಥೆಯ ಅಧ್ಯಯನ ವರದಿ ಹೇಳಿದೆ.
'ಭಾರತದಲ್ಲಿ ವಯಸ್ಕ ಪ್ರಾಯದವರಿಗಿರುವ ಸವಾಲುಗಳು ಮತ್ತು ಮುನ್ನೆಚ್ಚರಿಕಾ ಕ್ರಮಗಳು' ಎಂಬ ಸಮೀಕ್ಷೆಯನ್ನು ಏಜ್ ಇಂಡಿಯಾ ಎಂಬ ಸಂಸ್ಥೆ ಪ್ರಕಟಿಸಿದ್ದು, ಅದರಲ್ಲಿ ಶೇ.38ರಷ್ಟು ಮಹಿಳಾ ವೃದ್ಧರು ಮತ್ತು ಶೇ.27ರಷ್ಟು ಪುರುಷ ವೃದ್ಧರು ಶೂನ್ಯ ಆದಾಯ ಹೊಂದಿದ್ದಾರೆ. ಶೇ.40ರಷ್ಟು ಅನಕ್ಷರಸ್ಥ ಮತ್ತು ಶೇ.29ರಷ್ಟು ಸಾಕ್ಷರ ವೃದ್ಧ ಪೋಷಕರು ಯಾವುದೇ ಆದಾಯ ಹೊಂದಿಲ್ಲ ಎಂದು ವರದಿ ಹೇಳಿದೆ.
ಕೆ.ಆರ್.ಪೇಟೆ: ಬದುಕಿದ್ದರೂ ಸರ್ಕಾರಿ ದಾಖಲೆಯಲ್ಲಿ ಮೃತಪಟ್ಟ ವೃದ್ದೆ, ಪಿಂಚಣಿಗೆ ತೊಂದರೆ
ಶೇ.61ರಷ್ಟು ವೃದ್ಧರು ಮೊಮ್ಮಕ್ಕಳನ್ನು ಆರೈಕೆ ಮಾಡುವುದೇ ತಮ್ಮ ಕೆಲಸ ಎಂದಿದ್ದರೆ, ಶೇ.35 ರಷ್ಟು ವೃದ್ಧರು ಅಡುಗೆ, ಮನೆಗೆ ಸಾಮಾನು ತರುವ ಕೆಲಸ ತಮ್ಮಂದು ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಶೇ.48 ರಷ್ಟು ವೃದ್ಧರು ಪುತ್ರರಿಂದ ಮತ್ತು ಶೇ.28ರಷ್ಟು ವೃದ್ಧರು ಸೊಸೆಯಂದಿರು ತಮ್ಮನ್ನು ಶೋಷಣೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಶೇ.65ರಷ್ಟು ಹಿರಿಯ ನಾಗರಿಕರಿಗೆ ಆರ್ಥಿಕ ಅಭದ್ರತೆಯಿದ್ದರೆ, ಶೇ.34 ಮಂದಿಯ ಬಳಿ ಮಾತ್ರ ಆರೋಗ್ಯ ವಿಮೆಯಿದೆ. ಹಾಗೆಯೇ ಶೋಷಣೆಗೊಳಗಾ ಗುತ್ತಿರುವ ಪೋಷಕರ ಪೈಕಿ ಶೇ.94 ಮಂದಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಸಮೀಕ್ಷೆ ತಿಳಿಸಿದೆ.