Asianet Suvarna News Asianet Suvarna News

ಕೆ.ಆ‌ರ್.ಪೇಟೆ: ಬದುಕಿದ್ದರೂ ಸರ್ಕಾರಿ ದಾಖಲೆಯಲ್ಲಿ ಮೃತಪಟ್ಟ ವೃದ್ದೆ, ಪಿಂಚಣಿಗೆ ತೊಂದರೆ

ಕೆ.ಆ‌ರ್. ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಉದ್ದಿನಮಲ್ಲನ ಹೊಸೂರು ಗ್ರಾಮದ ಲಕ್ಷ್ಮಮ್ಮ ಅಂಗವಿಕಲ ವಯೋವೃದ್ಧೆ ಪಿಂಚಿಣಿ ಯೋಜನೆಯಡಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದರು. ಈ ಭಾಗದ ಗ್ರಾಮ ಆಡಳಿತಾಧಿಕಾರಿ ಸರಿಯಾಗಿ ಪರಿಶೀಲನೆ ನಡೆಸದೆ ಲಕ್ಷ್ಮಮ್ಮ ನಿಧನ ರಾಗಿದ್ದಾರೆಂದು ಸುಳ್ಳು ವರದಿ ದಾಖಲಿಸಿ ಕಳೆದ 2023ರ ಸೆ.14ರಿಂದ ಪಿಂಚಿಣಿ ಸ್ಥಗಿತಗೊಳಿಸಿದ್ದಾರೆ. 

83 Years Old Woman Not Get Pension at KR Pate in Mandya grg
Author
First Published May 30, 2024, 11:39 AM IST

ಕೆ.ಆ‌ರ್.ಪೇಟೆ(ಮೇ.30):  ಜೀವಂತವಾಗಿರುವ ವೃದ್ಧೆಯನ್ನು ಸರ್ಕಾರಿ ದಾಖಲೆಗಳಲ್ಲಿ ನಿಧನವಾಗಿದ್ದಾರೆ ಎಂದು ದಾಖಲಿಸಿ ಆಕೆಗೆ ಬರುತ್ತಿದ್ದ ಇಂದಿರಾ ಗಾಂಧಿ ಪಿಂಚಿಣಿ ಹಣವನ್ನು ಸ್ಥಗಿತಗೊಳಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. 

ಕೆ.ಆ‌ರ್. ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಉದ್ದಿನಮಲ್ಲನ ಹೊಸೂರು ಗ್ರಾಮದ ಲಕ್ಷ್ಮಮ್ಮ(83) ಅಂಗವಿಕಲ ವಯೋವೃದ್ಧೆ ಪಿಂಚಿಣಿ ಯೋಜನೆಯಡಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದರು. ಈ ಭಾಗದ ಗ್ರಾಮ ಆಡಳಿತಾಧಿಕಾರಿ ಸರಿಯಾಗಿ ಪರಿಶೀಲನೆ ನಡೆಸದೆ ಲಕ್ಷ್ಮಮ್ಮ ನಿಧನ ರಾಗಿದ್ದಾರೆಂದು ಸುಳ್ಳು ವರದಿ ದಾಖಲಿಸಿ ಕಳೆದ 2023ರ ಸೆ.14ರಿಂದ ಪಿಂಚಿಣಿ ಸ್ಥಗಿತಗೊಳಿಸಿದ್ದಾರೆ. 

ಹಿಂದೂಗಳ ಮನೆಗಳಿಗೆ ನುಗ್ಗಿ ಅನ್ಯಕೋಮಿನ ಯುವಕರಿಂದ ಬೆದರಿಕೆ? ಗಲಾಟೆ ತಡೆಯಲು ಮುಂದಾದವರ ಮೇಲೂ ಹಲ್ಲೆ?

ಅಂದಿನಿಂದ 'ಇಂದಿನವರೆಗೂ ನಾನಿನ್ನೂ ಬದುಕಿದ್ದೇನೆ, ದಯಮಾಡಿ ಪಿಂಚಿಣಿ ಹಣ ಕೊಡಿ ಎಂದು ನಾಡ ಕಚೇರಿ, ತಾಲೂಕು ಕಚೇರಿಗೆ ಅಲೆದಾಡುವ ಸ್ಥಿತಿ ಎದುರಾಗಿದೆ.

Latest Videos
Follow Us:
Download App:
  • android
  • ios