ಅನ್‌ಲಾಕ್‌: ಹೋಟೆಲ್, ಡಾಬಾ ಹೋಗೋರು ಈ ಸುದ್ದಿ ಓದಲೇಬೇಕು

ಅನ್‌ಲಾಕ್ ಇದೆ ಎಂದು ಕೊರೋನಾವನ್ನು ಲೆಕ್ಕಿಸಿದೆ ಎಲ್ಲೊಂದರಲ್ಲಿ ತಿರುಗಾಡುವುದು, ಎಲ್ಲೊಂದರಲ್ಲಿ ಊಟ ಮಾಡುವವರು ಈ ಸುದ್ದಿ ನೋಡಲೇಬೇಕು.

65 employees of famous Sukhdev Dhaba in Murthal test COVID-19 positive

ನವದೆಹಲಿ, (ಸೆ. 04): ಕಳೆದ ನಾಲ್ಕೈದು ತಿಂಗಳು ಬಳಿಕ ಓಪನ್ ಆದ ಡಾಬಾಕ್ಕೆ ಕೊರೋನಾ ವಕ್ಕರಿಸಿದ್ದು, ಸಿಕ್ಕ-ಸಿಕ್ಕವರಿಗೆ ಸೋಂಕು ತಗುಲಿದೆ.

ಹರಿಯಾಣ ದೆಹಲಿ ಹೆದ್ದಾರಿಯಲ್ಲಿರುವ ಫೇಮಸ್ ಸುಖದೇವ್​ ಡಾಬಾದ ಬರೋಬ್ಬರಿ 65 ಸಿಬ್ಬಂದಿಗೆ ಕೊರೋನಾ ಅಟ್ಯಾಕ್ ಆಗಿದೆ.

ಹೌದು.. ಮೊನ್ನೇ ಅಷ್ಟೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನ್‌ಲಾಕ್4.0 ಮಾರ್ಗಸೂಚಿಯಲ್ಲಿ ತಿಳಿಸಿರುವ ಈ ಡಾಬಾವನ್ನು ತೆರೆಯಲಾಗಿತ್ತು. ಆದ್ರೆ, ಸಿಬ್ಬಂದಿಗೆ ಸೋಂಕು ತಗುಲಿದ್ದು, ಇದೀಗ ಈ ಡಾಬಾವನ್ನು ಸೀಲ್‌ಡೌನ್ ಮಾಡಲಾಗಿದೆ.

ಕೊರೋನಾಗೆ ಪರಮೌಷಧ, ಗಂಭೀರ ರೋಗಿಗಳಿಗೂ ಬಳಸಲು ಸೂಚನೆ!

ಸೋನಿಪತ್ ಡೆಪ್ಯೂಟಿ ಕಮಿಷನರ್ ಶ್ಯಾಮ್ ಲಾಅಲ್ ಪೂನಿಯಾ ಪ್ರತಿಕ್ರಿಯಿಸಿದ್ದು, ಅಮ್ರಿಕ್ ಸುಖದೇವ್ ಡಾಬಾದಲ್ಲಿ 65 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಮತ್ತೊಂದು ದೆಹಲಿಯಿಂದ 50 ಕಿ.ಮೀ ದೂರದಲ್ಲಿರುವ ಮೂರ್ಥಾಲ್‌ನಲ್ಲಿರುವ ಡಾಬಾವನ್ನು ಕೂಡ ಬಂದ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಆ ಎರಡು ಡಾಬಾವನ್ನು ಸ್ಯಾನಿಟೈಸ್ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಸೋನಪತ್ ಜಿಲ್ಲಾಡಳಿತವು ಎಲ್ಲಾ ಡಾಬಾಗಳಿಗೆ ತೆರಳಿ ಕೊರೊನಾ ಪರೀಕ್ಷೆ ಮಾಡುತ್ತಿದೆ. ಉಳಿದ ಡಾಬಾಗಳಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಎಂದು ತಿಳಿಸಿದರು.

ದೆಹಲಿ, ಹರಿಯಾಣ ಮತ್ತು ಪಂಜಾಬ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಈ ಮೂರ್ಥಾಲ್‌ ಡಾಬಾ ಫೆವರೆಟ್ ಆಗಿದೆ. 

ಎಲ್ಲವೂ ಓಪನ್ ಆಗಿವೆ. ಬಾಯಿ ರುಚಿ ಕೆಟ್ಟಿದೆ ಅಂತ ಯಾವುದೇ ಮುಂಜಾಗ್ರತೆ ಇಲ್ಲದೆ ಸಿಕ್ಕ-ಸಿಕ್ಕ ಹೋಟೆಲ್, ಡಾಬಾ ಸೇರಿದಂತೆ ಇತರೆ ಕಡೆ ಸುತ್ತಾಡುವವರಿಗೆ ಇದು ಎಚ್ಚರಿಕೆ ಗಂಟೆ.

Latest Videos
Follow Us:
Download App:
  • android
  • ios