ಬಿಹಾರದಲ್ಲಿ 64% ಕುಟುಂಬಗಳ ಆದಾಯ 10 ಸಾವಿರಕ್ಕಿಂತ ಕಮ್ಮಿ: ಮೀಸಲು ಮಿತಿ ಶೇ.65ಕ್ಕೆ ಹೆಚ್ಚಿಸಲು ನಿತೀಶ್ ಒಲವು
ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ್ದ ಬಿಹಾರದ ಜಾತಿಗಣತಿ ವರದಿಯನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ರಾಜ್ಯದ ಶೇ.64ರಷ್ಟು ಕುಟುಂಬಗಳ ಆದಾಯ ಮಾಸಿಕ 10 ಸಾವಿರ ರು. ಗಿಂತ ಕಡಿಮೆ ಇದೆ ಎಂಬ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ.

ಅಚ್ಚರಿಯ ಅಂಶ
- 34% ಜನರ ಆದಾಯ 76 ಸಾವಿರಕ್ಕಿಂತ ಕಡಿಮೆ
- 29.6% ಜನರ ಆದಾಯ 10 ಸಾವಿರಕ್ಕಿಂತ ಕಮ್ಮಿ
- ಎಸ್‌ಸಿ , ಎಸ್‌ಟಿಯಲ್ಲಿ ಶೇ.42 ಜನರು ಬಡವರು
- ಸಾಮಾನ್ಯ ವರ್ಗದ 25%, ಒಬಿಸಿಯಲ್ಲಿ 33% ಬಡವರು
- ರಾಜ್ಯದ 13.1 ಕೋಟಿ ಜನರಲ್ಲಿ 80% ಹಿಂದುಳಿದವರು ಅಥವಾ ಬಡವರು
ಪಟನಾ: ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ್ದ ಬಿಹಾರದ ಜಾತಿಗಣತಿ ವರದಿಯನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ರಾಜ್ಯದ ಶೇ.64ರಷ್ಟು ಕುಟುಂಬಗಳ ಆದಾಯ ಮಾಸಿಕ 10 ಸಾವಿರ ರು. ಗಿಂತ ಕಡಿಮೆ ಇದೆ ಎಂಬ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ. ಇದರಿಂದಾಗಿ ರಾಜ್ಯದ ಜನ ತೀರಾ ಕಡುಬಡವರಾಗಿದ್ದಾರೆ ಎಂಬುದು ಸಾಬೀತಾದಂತಾಗಿದೆ. ರಾಜ್ಯದಲ್ಲಿ ಶೇ.34ರಷ್ಟು ಕುಟುಂಬಗಳ ಮಾಸಿಕ ಆದಾಯ 6 ಸಾವಿರ ರು.ಗಿಂತ ಕಡಿಮೆ ಇದೆ. ಇನ್ನು ಶೇ.29.61ರಷ್ಟು ಕುಟುಂಬಗಳ ಮಾಸಿಕ ಆದಾಯ 10 ಸಾವಿರ ರು.ಗಿಂತ ಕಡಿಮೆ ಇದೆ ಎಂದು ವರದಿ ಹೇಳಿದೆ. ಇದನ್ನು ಒಟ್ಟಾರೆ ಸೇರಿಸಿದರೆ ಶೇ.64ರಷ್ಟು ಕುಟುಂಬಗಳು ಮಾಸಿಕ ಕೇವಲ 10 ಸಾವಿರ ರು.ನಲ್ಲಿ ಜೀವನ ನಡೆಸುತ್ತಿವೆ ಎಂದು ಗೊತ್ತಾಗುತ್ತದೆ.
ಇದೇ ವೇಳೆ, ಶೇ.28 ರಷ್ಟು ಕುಟುಂಬಗಳು 10 ಸಾವಿರ ರು.ನಿಂದ 50 ಸಾವಿರ ರು.ವರೆಗಿನ ಆದಾಯದಲ್ಲಿ ಜೀವನ ನಿರ್ವಹಣೆ ಮಾಡುತ್ತಿವೆ. ಕೇವಲಶೇ.4ರಷ್ಟು ಕುಟುಂಬಗಳ ಆದಾಯ ಮಾತ್ರ 50 ಸಾವಿರ ರು.ಗಿಂತ ಹೆಚ್ಚಿದೆ ಎಂದು ಜಾತಿ ಗಣತಿ (castw census) ವರದಿ ಹೇಳಿದೆ. ಇನ್ನು ರಾಜ್ಯದ ಕೋಟಿ 13.1 ಜನಸಂಖ್ಯೆಯಲ್ಲಿ ಶೇ.80ರಷ್ಟು ಜನರು ಹಿಂದುಳಿದ ಅಥವಾ ತುಳಿತಕ್ಕೊಳಗಾದ ವರ್ಗಗಳಿಗೆ ಸೇರಿದ್ದಾರೆ ಎಂದೂ ಅದು ಕಳವಳ ವ್ಯಕ್ತಪಡಿಸಿದೆ.
2018ರ ಪಟಾಕಿ ನಿಷೇಧ ಇಡೀ ದೇಶಕ್ಕೆ ಅನ್ವಯ: ಸುಪ್ರೀಂಕೋರ್ಟ್
ಜಾತಿವಾರು ಬಡವರು:
ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲಿ ಶೇ.42ರಷ್ಟು ಜನ ಬಡವರಾಗಿದ್ದಾರೆ. ಪರಿಶಿಷ್ಟ ಜಾತಿಯಲ್ಲಿ ಶೇ.5.76ರಷ್ಟು ಜನ ಮಾತ್ರ 11 ಮತ್ತು 12ನೇ ತರಗತಿ ಓದಿದ್ದಾರೆ. ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.9ರಷ್ಟು ಜನ ಮಾತ್ರ 12ನೇ ತರಗತಿ ಓದಿದ್ದಾರೆ. 2017-18ರ ರಾಷ್ಟ್ರೀಯ ದತ್ತಾಂಶ ಕಚೇರಿ ವರದಿಗೆ ಹೋಲಿಸಿದರೆ ಇದರ ಪ್ರಮಾಣ ಶೇ.6ರಷ್ಟು ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.
ಪರಿಶಿಷ್ಟರಲ್ಲೇ ಒಳವರ್ಗೀಕರಣ ಮಾಡಿದರೆ, ಪರಿಶಿಷ್ಟ ಜಾತಿಯ ಶೇ.42.93ರಷ್ಟು ಕುಟುಂಬಗಳು, ಪರಿಶಿಷ್ಟ ಪಂಗಡದ ಶೇ.42.7ರಷ್ಟು ಕುಟುಂಬಗಳು ಬಡತನವನ್ನು ಹೊಂದಿವೆ. ಇತರ ಹಿಂದುಳಿದ ವರ್ಗಗಳಲ್ಲಿ ಶೇ.33.16 ಹಾಗೂ ತೀವ್ರ ಹಿಂದುಳಿದ ವರ್ಗದಲ್ಲಿ ಶೇ.33.58 ಹಾಗೂ ಇತರೆ ಜಾತಿಗಳಲ್ಲಿ ಶೇ.23.72ರಷ್ಟು ಮತ್ತು ಸಾಮಾನ್ಯ ವರ್ಗದಲ್ಲಿ ಶೇ.25ರಷ್ಟು ಬಡವರಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಿಹಾರ: ಮೀಸಲು ಮಿತಿ ಶೇ.65ಕ್ಕೆ ಹೆಚ್ಚಿಸಲು ನಿತೀಶ್ ಒಲವು
ಪಟನಾ: ರಾಜ್ಯದಲ್ಲಿರುವ ಮೀಸಲಾತಿ ಮಿತಿಯನ್ನು ಈಗಿನ ಶೇ.50ರ ಬದಲು ಶೇ.65ಕ್ಕೆ ಹೆಚ್ಚಿಸುವ ಉದ್ದೇಶವಿದೆ. ಪ್ರಸ್ತುತ ನಡೆಯುತ್ತಿರುವ ಕಲಾಪದಲ್ಲೇ ಇದನ್ನು ಅಂಗೀಕರುಸುವ ಸಾಧ್ಯತೆ ಇದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nithish Kumar) ಮಂಗಳವಾರ ಹೇಳಿದ್ದಾರೆ.
ಸುಪ್ರೀಂ ಕೋರ್ಟು (Supreme Court) ಮೀಸಲು ಶೇ.50 ಮೀರಬಾರದು ಎಂಬ ಆದೇಶಿಸಿದ್ದರೂ, ರಾಜ್ಯದ ಇತ್ತೀಚಿನ ಜಾತಿ ಗಣತಿ ಆಧರಿಸಿ ನಿತೀಶ್ ನೀಡಿರುವ ಹೇಳಿಕೆ ಮಹತ್ವ ಪಡೆದಿದೆ. ಈಗಾಗಲೇ ತಮಿಳುನಾಡು ಸೇರಿ ಕೆಲವು ರಾಜ್ಯಗಳಲ್ಲಿ ಮೀಸಲು ಮಿತಿ ಶೇ.50 ಮೀರಿದೆ.
ಅಪರೂಪದ ವಿದ್ಯಮಾನಕ್ಕೆ ಆಕಾಶವೇ ಕೆಂಪೇರಿತು: ಬಲ್ಗೇರಿಯಾ ಬಾನಲ್ಲಿ ಬಣ್ಣದ ಚಿತ್ತಾರ ಮೂಡಿಸಿದ ನಾರ್ತರ್ನ್ ಲೈಟ್
ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಕೆ ಆಗಿದ್ದ ಜಾತಿ ಗಣತಿಯ ವರದಿ ವಿಧಾನಸಭೆಯಲ್ಲಿ ಮಂಡನೆ ಆಯಿತು. ಬಳಿಕ ಮಾತನಾಡಿದ ನಿತೀಶ್, ಮೀಸಲನ್ನು ಶೇ.50ರ ಬದಲು ಶೇ.65ಕ್ಕೆ ಹೆಚ್ಚಿಸುವ ಉದ್ದೇಶವಿದೆ. ಎಸ್‌ಸಿ ಮೀಸಲನ್ನು ಶೇ.17ರಿಂದ ಶೇ.20ಕ್ಕೆ ಹೆಚ್ಚಳ ಮಾಡಲಾಗುತ್ತದೆ. ಒಬಿಸಿ (ಇತರ ಹಿಂದುಳಿದ ವರ್ಗ) ಹಾಗೂ ಇಬಿಸಿ (ತೀರಾ ಹಿಂದುಳಿದ ವರ್ಗ) ಮೀಸಲನ್ನು ಶೇ.30ರ ಬದಲು ಶೇ.43ಕ್ಕೆ ಹಾಗೂ ಎಸ್‌ಟಿ ಮೀಸಲನ್ನು ಪ್ರಸಕ್ತ ಶೇ.1ರ ಬದಲು ಶೇ.2ಕ್ಕೆ ಹೆಚ್ಚಳ ಮಾಡುವ ಉದ್ದೇಶವಿದೆ ಎಂದರು.
ಇದು ಶೇ.10ರಷ್ಟು ಆರ್ಥಿಕ ಹಿಂದುಳಿದ ವರ್ಗಕ್ಕೆ (ಇಡಬ್ಲ್ಯುಎಸ್) ಮೀಸಲಿಗೆ ಹೊರತಾದ ಅಂಕಿ ಅಂಶವಾಗಿದೆ. ಇದೂ ಸೇರಿದರೆ ಮೀಸಲು ಶೇ.75ಕ್ಕೆ ಏರಲಿದೆ. ಇತ್ತೀಚಿನ ಬಿಹಾರ ಜಾತಿ ಗಣತಿ ವೇಳೆ ಬಿಹಾರದ 13.1 ಕೋಟಿ ಜನರಲ್ಲಿ ಶೇ.36ರಷ್ಟು ಜನರು ಇಬಿಸಿ, ಶೇ.27.1 ಒಬಿಸಿ ಮತ್ತು ಶೇ.19.7 ಎಸ್ಸಿ, ಶೇ.1.7 ಎಸ್ಟಿ, ಶೇ.15.5ರಷ್ಟು ಸಾಮಾನ್ಯ ವರ್ಗದ ಜನರಿದ್ದಾರೆ ಎಂದು ಗೊತ್ತಾಗಿತ್ತು.
ಗಾಜಾ ನಗರ ಪೂರ್ಣ ಸುತ್ತುವರಿದ ಇಸ್ರೇಲ್‌ಗೆ ಕನಿಷ್ಠ 1 ಲಕ್ಷ ಭಾರತೀಯ ಕಟ್ಟಡ ಕಾರ್ಮಿಕರು?