ನವದೆಹಲಿ(ಡಿ.15): ನವದೆಹಲಿ: ದೇಶದ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಶೇ.30ರಷ್ಟು ಮಹಿಳೆಯರು ತಮ್ಮ ಪತಿಯಿಂದಲೇ ದೈಹಿಕ ಮತ್ತು ಲೈಂಗಿಕ ಹಿಂಸೆ ಅನುಭವಿಸಿ ದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಈ ಅಂಶವಿದೆ. ಮಹಿಳೆಯರು ಹೆಚ್ಚು ಹಿಂಸೆ ಅನುಭವಿ ಸುತ್ತಿರುವ ಟಾಪ್ 5 ರಾಜ್ಯಗಳೆಂದರೆ ಕರ್ನಾಟಕ, ಅಸ್ಸಾಂ, ಮಿಜೋರಂ, ತೆಲಂಗಾಣ ಮತ್ತು ಬಿಹಾರ. ಸರ್ಕಾರ, ಸಾಮಾ ಜಿಕ ಹೋರಾಟಗಾರರು, ಸರ್ಕಾರೇತರ ಸಂಘಟನೆಗಳು ಜಂಟಿಯಾಗಿ ಈ ಅಧ್ಯಯನ ಕೈಗೊಂಡಿವೆ.

ಸುಮಾರು 6.1 ಲಕ್ಷ ಕುಟುಂಬಗಳನ್ನು ಸಂದರ್ಶಿಸಿ, ಜನ ಸಂಖ್ಯೆ, ಆರೋಗ್ಯ, ಕುಟುಂಬ ಯೋಜನೆ ಮತ್ತು ಪೌಷ್ಠಿಕಾಂಶ ಸಂಬಂಧಿತ ಮಾಹಿತಿ ಸಂಗ್ರಹಿಸಿ ಈ ಸಮೀಕ್ಷೆ ನಡೆಸಲಾಗಿದೆ. ಕರ್ನಾಟಕದ 18-49 ವರ್ಷ ವಯಸ್ಸಿನ ಶೇ.44.4ರಷ್ಟು ಮಹಿಳೆಯರು ಸಂಗಾತಿ ಯಿಂದಲೇ ಕೌಟುಂಬಿಕ ಹಿಂಸೆ ಅನುವಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕಳೆದ ಸಮೀಕ್ಷೆಯಲ್ಲಿ (2015-16) ರಾಜ್ಯದ ಶೇ.20.6ರಷ್ಟು ಮಹಿಳೆಯರು ಕೌಟುಂಬಿಕ ಹಿಂಸೆ ಅನುಭವಿಸುತ್ತಿ ರುವುದಾಗಿ ಹೇಳಿಕೊಂಡಿದ್ದರು. ಹಾಗೆಯೇ ಅನಕ್ಷರತೆ, ಕುಡಿತವೇ ಈ ಹಿಂಸೆಗೆ ಬಹುತೇಕ ಕಾರಣ ಎಂದು ಸಮೀಕ್ಷಕರು ಅಭಿಪ್ರಾಯಪಟ್ಟಿದ್ದಾ

ಪ್ರಾಥಮಿಕ ಹಂತದಲ್ಲಿ 17 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳ ಸಮೀಕ್ಷಾ ವರದಿ ಬಿಡುಗಡೆಯಾಗಿದೆ