ನವದೆಹಲಿ[ಜ.19]: ಮತ್ತೆ ದಿಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಹ್ಯಾಟ್ರಿಕ್‌ ಸಾಧನೆಯ ಕನಸಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಬಿಜೆಪಿ ಮೆಗಾ ಪ್ಲಾನ್‌ವೊಂದನ್ನು ರೂಪಿಸಿದೆ. ಇದಕ್ಕಾಗಿ ಮುಂದಿನ 20 ದಿನಗಳಲ್ಲಿ ಬರೋಬ್ಬರಿ 5000 ರಾರ‍ಯಲಿಗಳನ್ನು ಆಯೋಜಿಸಲು ಯೋಜನೆ ರೂಪಿಸಿದೆ.

ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ದಿನಕ್ಕೆ ಮೂರರಿಂದ ನಾಲ್ಕು ರಾರ‍ಯಲಿಗಳಂತೆ ಒಟ್ಟಾರೆ 250 ರಾರ‍ಯಲಿಗಳನ್ನು ಆಯೋಜಿಸುವುದು. ಈ ಮೂಲಕ 20 ದಿನಗಳಲ್ಲಿ 5000 ರಾರ‍ಯಲಿ ನಡೆಸಿ, ಜನ ಸಾಮಾನ್ಯರನ್ನು ತನ್ನತ್ತ ಸೆಳೆಯುವುದು ಬಿಜೆಪಿಯ ಯೋಜನೆಯಾಗಿದೆ.

ಕೇಜ್ರಿವಾಲ್‌ ವಿರುದ್ಧ ಸ್ಪರ್ಧೆ ಇಲ್ಲ: ನಿರ್ಭಯಾ ತಾಯಿ

ಇದುವರೆಗೂ ಬೃಹತ್‌ ಪ್ರಮಾಣದ ಸಾರ್ವಜನಿಕ ರಾರ‍ಯಲಿಗಳನ್ನು ಆಯೋಜಿಸುತ್ತಿದ್ದ ಬಿಜೆಪಿ, ಇದೀಗ ದಿಲ್ಲಿ ಅಧಿಕಾರದ ಚುಕ್ಕಾಣಿಗಾಗಿ 200ಕ್ಕಿಂತ ಕಮ್ಮಿ ಜನ ಭಾಗವಹಿಸಬಹುದಾದ ಸಣ್ಣ ರಾರ‍ಯಲಿಗಳ ಮೊರೆ ಹೋಗಿದೆ.

ಜನ ಸಾಮಾನ್ಯರ ಜೊತೆ ನೇರ ಸಂವಾದ ಸಾಧ್ಯವಾಗಿಸುವ ನಿಟ್ಟಿನಲ್ಲಿ ದೆಹಲಿ ಬಿಜೆಪಿ ಘಟಕಕ್ಕೆ ಸಣ್ಣ ರಾರ‍ಯಲಿಗಳನ್ನು ಆಯೋಜಿಸುವಂತೆ ಕೇಂದ್ರ ಬಿಜೆಪಿ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಬಿಜೆಪಿ ಮೊದಲ ಪಟ್ಟಿಯಲ್ಲಿ ಕೇಜ್ರಿವಾಲ್ ವಿರುದ್ಧ ಅಭ್ಯರ್ಥಿ ಇಲ್ಲ!