ನವದೆಹಲಿ(ಫೆ.07): 1954ರ ಡ್ರಗ್ಸ್ ಮತ್ತು ಮ್ಯಾಜಿಕ್ ಪರಿಹಾರ ಕಾಯ್ದೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ತರಲು ಚಿಂತಿಸಲಾಗಿದೆ. ಇದಕ್ಕೆ ಸಂಬಂಧಿಸಿ ಸರ್ಕಾರ ಈಗಾಗಲೇ ಕರಡು ಮಸೂದೆ ಪ್ರತಿಯನ್ನೂ ಸಿದ್ಧಪಡಿಸಿದೆ.

ಕೂದಲು ಉದುರುವಿಕೆ, ಕೂದಲ ಬಣ್ಣ ಬದಲಾಯಿಸುವುದು, ತ್ವಚೆ ಬೆಳ್ಳಗಾಗಿಸುವುದು, ಕಿವುಡುತನಕ್ಕೆ, ಹೈಟ್‌ ಹೆಚ್ಚಿಸುವುದು ಮೊದಲಾದವುಗಳಿಗಾಗಿ ಔಷಧೀಯ ಉತ್ಪನ್ನಗಳ ಜಾಹೀರಾತು ನೀಡಿದರೆ 50 ಲಕ್ಷದ ರೂಪಾಯಿವರೆಗೆ ದಂಡ ವಿಧಿಸುವುದು ಹಾಗೂ ಕನಿಷ್ಠ 5 ವರ್ಷ ಜೈಲು ಶಿಕ್ಷೆ ವಿಧಿಸಲು ಅನುಮತಿ ಇರುವಂತೆ ಕರಡು ಪ್ರತಿಯಲ್ಲಿ ನಮೂದಿಸಲಾಗಿದೆ. ಹಾಗೆಯೇ ಬಂಜೆತನ ನಿವಾರಣೆ, ಲೈಂಗಿಕಾಸಕ್ತಿ ಹೆಚ್ಚಿಸುವಂತಹ ವಸ್ತುಗಳ ಕುರಿತು ಜಾಹೀರಾತು ನೀಡುವುದು ಅಪರಾಧ ಎಂದು ಪರಿಗಣಿಸಲ್ಪಡಲಿದೆ.

ಬಿಬಿಎಂಪಿ ರೂಪಿಸಿದ ಜಾಹೀರಾತು ನೀತಿ ಅನುಷ್ಠಾನಕ್ಕೆ ಸೂಚನೆ

ಈಗಿನ ಹೊಸ ಕರಡು ಪ್ರತಿಯ ಪ್ರಕಾರ ಮೇಲೆ ಹೇಳಲಾದ ತಪ್ಪುಗಳನ್ನು ಮೊದಲ ಬಾರಿ ಮಾಡಿದರೆ 10 ಲಕ್ಷ ತನಕ ದಂಡ ಹಾಗೂ, ಎರಡು ವರ್ಷ ಜೈಲು ಶಿಕ್ಷೆ ವಿಧಿಸಲು ಉದ್ದೇಶಿಸಲಾಗಿದೆ. ಇದೇ ತಪ್ಪುಗಳನ್ನು ಪುನಾರಾವರ್ತಿಸಿದಲ್ಲಿ ಜೈಲು ಶಿಕ್ಷೆಯ ಅವಧಿಯನ್ನು 5 ವರ್ಷಕ್ಕೆ ಹೆಚ್ಚಿಸಲು  ಹಾಗೂ ದಂಡವನ್ನು 50 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಬದಲಾಗುತ್ತಿರುವ ಕಾಲ ಹಾಗೂ ತಂತ್ರಜ್ಞಾನದೊಂದಿಗೆ ವೇಗವನ್ನು ಉಳಿಸಿಕೊಳ್ಳಲು ಈ ರೀತಿ ಮಾಡಲು ಚಿಂತಿಸಲಾಗಿದೆ ಎಂದು  ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಪ್ರೇಮಂ ನಟಿ 2 ಕೋಟಿ ರೂ. ಆ್ಯಡ್ ರಿಜೆಕ್ಟ್ ಮಾಡಿದ್ದು ಇದಕ್ಕಂತೆ!

ಈ ಕರಡು ಮಸೂದೆ 45 ದಿನಗಳೊಳಗಾಗಿ ಫಾರ್ವರ್ಡ್ ಮಾಡಲು ನಿರ್ಧರಿಸಲಾಗಿದ್ದು, ಸಾರ್ವಜನಿಕರು ಈ ವಿಚಾರದ ಬಗ್ಗೆ ತಮ್ಮ ಸಲಹೆ, ಪ್ರತಿಕ್ರಿಯೆ, ಆಕ್ಷೇಪಣೆ ವ್ಯಕ್ತಪಡಿಸಬಹುದೆಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಈ ಕಾಯ್ದೆ ಪ್ರಕಾರ ಜಾಹೀರಾತು ನಿರ್ಬಂಧಿಸಲಾದ ರೋಗ, ಅಸ್ವಸ್ಥತೆಗಳ ಪಟ್ಟಿಯಲ್ಲಿ ಇನ್ನಷ್ಟು ರೋಗಗಳ ಹೆಸರು ಸೇರಿಸಲಾಗಿದೆ. ಈ ಲಿಸ್ಟ್‌ನಲ್ಲಿರುವ 78 ರೋಗಗಳಲ್ಲಿ ಯಾವುದಕ್ಕೂ ಔಷಧಗಳ ಜಾಹೀರಾತು ನೀಡುವಂತಿಲ್ಲ.

ಹೆಚ್ಚು ಸಕ್ಕರೆ ಇರುವ ತಂಪು ಪಾನೀಯ ಜಾಹೀರಾತಿಗೆ ನಿಷೇಧ!

ಈ ಮೂಲಕ ಲೈಂಗಿಕಾಸಕ್ತಿ ಹೆಚ್ಚುವ ಉತ್ಪನ್ನಗಳು, ಬಂಜೆತನ ನಿವಾರಣೆ ಕುರಿತಾದ ಔಷಧಗಳ ಜಾಹೀರಾತು ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಧ್ವನಿ, ಬೆಳಕು, ಪೋಸ್ಟರ್, ಲೇಬಲ್, ನೋಟಿಸ್, ಪ್ರಿಂಟ್ ಅಥವಾ ಎಲೆಕ್ಟ್ರಾನಿಕ್ ಮೀಡಿಯಾ, ಇಂಟರ್‌ನೆಟ್, ವೆಬ್‌ಸೈಟ್‌ಗಳ ಮೂಲಕವೂ ಈ ರೀತಿಯ ಜಾಹೀರಾತು ನೀಡುವಂತಿಲ್ಲ ಎಂದು ಮಸೂದೆ ತಿಳಿಸುತ್ತದೆ.