ಬಿಟ್‌ ಕಾಯಿನ್‌ ಹಗರಣ: ಕುಖ್ಯಾತ ಹ್ಯಾಕರ್ ಶ್ರೀಕಿ ಬಂಧನ

ಬಿಟ್‌ ಕಾಯಿನ್‌ ವ್ಯಾಲೆಟ್‌ ದೋಚಿದ ಆರೋಪದ ಪ್ರಕರಣ ಸಂಬಂಧ ಕುಖ್ಯಾತ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಬಂಧಿಸಿದ ವಿಶೇಷ ತನಿಖಾ ತಂಡದ ಅಧಿಕಾರಿಗಳು 
 

Hacker Srikrishna Arrested Of Bit Coin Case in Bengaluru grg

ಬೆಂಗಳೂರು(ಮೇ.08):  ಬಿಟ್‌ ಕಾಯಿನ್‌ ವ್ಯವಹಾರ ನಡೆಸುವ ಖಾಸಗಿ ಕಂಪನಿಯೊಂದರ ಡೇಟಾಬೇಸ್‌ ಹ್ಯಾಕ್‌ ಮಾಡಿ ಬಿಟ್‌ ಕಾಯಿನ್‌ ವ್ಯಾಲೆಟ್‌ ದೋಚಿದ ಆರೋಪದ ಪ್ರಕರಣ ಸಂಬಂಧ ಕುಖ್ಯಾತ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಬಂಧಿಸಿದ್ದಾರೆ.

ಯೂನೋಕಾಯಿನ್ ಟೆಕ್ನಾಲಜೀಸ್ ಪ್ರೈ.ಲಿ.ಗೆ ಸೇರಿದ ಬಿಟ್ ಕಾಯಿನ್ ವ್ಯಾಲೆಟ್‌ಗೆ ಕನ್ನ ಹಾಕಿದ ಆರೋಪದಡಿ ಏಳು ವರ್ಷದ ಹಿಂದೆ ತುಮಕೂರು ನ್ಯೂ ಎಕ್ಸ್‌ಟೆನ್ಷನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣವನ್ನು ಸರ್ಕಾರ ಎಸ್ಐಟಿಗೆ ವಹಿಸಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಎಸ್‌ಐಟಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ಆರೋಪಿ ಶ್ರೀಕಿಗೆ ನೋಟಿಸ್ ಜಾರಿ ಮಾಡಿದ್ದರು. ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಶ್ರೀಕಿಯನ್ನು ಬಂಧಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಬಿಟ್‌ ಕಾಯಿನ್ ಹಗರಣ: ಮತ್ತೊಬ್ಬ ಇನ್ಸ್‌ಪೆಕ್ಟರ್‌ ಅರೆಸ್ಟ್‌

ಪ್ರಕರಣದ ಹಿನ್ನೆಲೆ:

ತುಮಕೂರು ನಿವಾಸಿ ಬಿ.ವಿ.ಹರೀಶ್, 2017ರಲ್ಲಿ ರಾಜಾಜಿನಗರ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಯೂನೊಕಾಯಿನ್ ಟೆಕ್ನಾಲಜಿಸ್ ಪ್ರೈ.ಲಿ. ಕಂಪನಿ ತೆರೆದು ಡಿಜಿಟಲ್ ಕರೆನ್ಸಿ (ಕ್ರಿಪ್ಟೊಕರೆನ್ಸಿ) ವ್ಯವಹಾರ ನಡೆಸುತ್ತಿದ್ದರು. ಈ ನಡುವೆ ದುಷ್ಕರ್ಮಿಗಳು ಕಚೇರಿ ಕಂಪ್ಯೂಟರ್‌ನಲ್ಲಿ ಡಾಟಾಬೇಸ್ ಹ್ಯಾಕ್ ಮಾಡಿ ವ್ಯಾಲೆಟ್‌ನಿಂದ 60.6 ಬಿಟ್ ಕಾಯಿನ್‌ ದೋಚಿದ್ದರು. ಅಂದರೆ, ಕಳುವಾದ 1 ಬಿಟ್ ಕಾಯಿನ್ ಮೌಲ್ಯ 1.67 ಲಕ್ಷ ರು. ನಂತೆ 60.6 ಬಿಟ್‌ ಕಾಯಿನ್‌ ಮೌಲ್ಯವು 1.14 ಕೋಟಿ ರು. ಆಗುತ್ತದೆ. ಡಾಟಾ ಬೇಸ್‌ ಹ್ಯಾಕ್‌ ಮಾಡಿ ಬಿಟ್‌ ಕಾಯಿನ್‌ ವ್ಯಾಲೆಟ್‌ ಕಳವು ಸಂಬಂಧ ಹರೀಶ್‌ 2017ರಲ್ಲಿ ಜೂನ್‌ನಲ್ಲಿ ತುಮಕೂರಿನ ನ್ಯೂ ಎಕ್ಸ್‌ಟೆನ್ಷನ್ ಠಾಣೆಗೆ ದೂರು ನೀಡಿದ್ದರು.

ಬಿಟ್‌ ಕಾಯಿನ್‌ ಹಗರಣ ಸಂಬಂಧ ಎಸ್ಐಟಿ ತನಿಖೆ ವೇಳೆ ಡಿಜಿಟಲ್ ಸಾಕ್ಷ್ಯಾಧಾರಗಳಿಂದ ಹ್ಯಾಕರ್‌ ಶ್ರೀಕಿ ಯೂನೋಕಾಯಿನ್ ಟೆಕ್ನಾಲಜೀಸ್ ಪ್ರೈ.ಲಿ. ಹೆಸರಿನ ಬಿಟ್ ಕಾಯಿನ್ ಎಕ್ಸ್‌ಚೇಂಜ್‌ನ ಡಾಟಾ ಬೇಸ್‌ ಹ್ಯಾಕ್ ಮಾಡಿ ಅದರಲ್ಲಿನ 60.6 ಬಿಟ್ ಕಾಯಿನ್‌ಗಳನ್ನು ಕಳವು ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆತನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಮಂಗಳವಾರ ಮುಂಜಾನೆ ಬಳ್ಳಾರಿ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಶ್ರೀಕಿಯನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios