ಅಹ್ಮದಾಬಾದ್‌[ಜ.07]: ಪಾಕಿಸ್ತಾನದಿಂದ ಗುಜರಾತ್‌ಗೆ 175 ಕೋಟಿ ಮೌಲ್ಯದ ಡ್ರಗ್ಸ್‌ ಕಳ್ಳ ಸಾಗಣಿಕೆ ಮಾಡುತ್ತಿದ್ದ ಐವರು ಪಾಕಿಸ್ತಾನಿ ನಾಗರಿಕರನ್ನು ಕಛ್‌ ಜಿಲ್ಲೆಯ ಜಕಾವು ಕರಾವಳಿಯಲ್ಲಿ ಗುಜರಾತ್‌ ಉಗ್ರ ನಿಗ್ರಹ ದಳ ಹಾಗೂ ಭಾರತೀಯ ಕೋಸ್ಟ್‌ ಗಾರ್ಡ್‌ ಅಧಿಕಾರಿಗಳು ಸಮುದ್ರದಲ್ಲಿ ಬಂಧಿಸಿದ್ದಾರೆ.

ಬಂಧಿತರಿಂದ ತಲಾ ಒಂದು ಕೆಜಿ ತೂಕದ 35 ಹೆರಾಯಿನ್‌ ಪೊಟ್ಟಣ ವಶ ಪಡಿಸಿಕೊಳ್ಳಲಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 175 ಕೋಟಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಮುಂಜಾನೆ ಅರಬಿ ಸಮುದ್ರದಲ್ಲಿ ಉಗ್ರ ನಿಗ್ರಹ ದಳ ಹಾಗೂ ಕೋಸ್ಟ್‌ ಗಾರ್ಡ್‌ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇವರನ್ನ ಸೆರೆ ಹಿಡಿಯಲಾಗಿದ್ದು, ಪಾಕಿಸ್ತಾನದಿಂದ ಮೀನುಗಾರಿಕಾ ಬೋಟ್‌ನಲ್ಲಿ ಡ್ರಗ್ಸ್‌ ಸಾಗಿಸಲಾಗುತ್ತಿತ್ತು.