ರಾಯ್‌ಪುರ(ಎ.18): ಛತ್ತೀಸ್‌ಗಡದ ರಾಯ್‌ಪುರದಲ್ಲಿ ಆಸ್ಪತ್ರೆಯಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡ ನಂತರ ಐವರು ಸಾವನ್ನಪ್ಪಿದ್ದಾರೆ. ಇತರ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ

ಘಟನೆಯಲ್ಲಿ ಐದು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇತರ ರೋಗಿಗಳನ್ನು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತರ್ಕೇಶ್ವರ ಪಟೇಲ್ ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಶೇಕಡವಾರು ಕೊರೋನಾ ಸೋಂಕು: ನಾಸಿಕ್‌ ನಂ.1, ಬೆಂಗಳೂರು ನಂ.6!

ದೇಶದಲ್ಲಿ ಕೊರೋನಾ ರೋಗಿಗಳ ಚೇತರಿಕೆ ಪ್ರಮಾಣ ಕುಸಿಯುತ್ತಿದ್ದು, ಶೇ.87.23ಕ್ಕೆ ಇಳಿದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 16 ಲಕ್ಷ ದಾಟಿದ್ದು, 16,79,740ಕ್ಕೆ ಏರಿದೆ. ಇದು ಒಟ್ಟಾರೆ ಪ್ರಕರಣಗಳ ಶೇ.11.56. ದೇಶದಲ್ಲಿ ಸತತ 38 ದಿನದಿಂದ ಸೋಂಕು ಏರುತ್ತಿದ್ದು, 2 ಲಕ್ಷಕ್ಕಿಂತ ಅಧಿಕ ಪ್ರಕರಣ ದಾಖಲಾಗಿದ್ದು ಸತತ 3ನೇ ದಿನ.

ಈವರೆಗೆ 1,45,26,609 ಜನರಿಗೆ ದೇಶದಲ್ಲಿ ಕೊರೋನಾ ಬಂದಿದ್ದು, 1,26,71,220 ಜನ ಗುಣವಾಗಿದ್ದಾರೆ. 1,75,649 ಜನರು ಸಾವನ್ನಪ್ಪಿದ್ದಾರೆ.