ಶೇಕಡವಾರು ಕೊರೋನಾ ಸೋಂಕು: ನಾಸಿಕ್‌ ನಂ.1, ಬೆಂಗಳೂರು ನಂ.6!

ಶೇಕಡವಾರು ಸೋಂಕು: ನಾಸಿಕ್‌ ನಂ.1, ಬೆಂಗಳೂರು ನಂ.6| ತಲಾ 10 ಲಕ್ಷ ಜನಸಂಖ್ಯೆಯ ಲೆಕ್ಕಾಚಾರ| ಮುಂಬೈ, ದಿಲ್ಲಿಯನ್ನೂ ಮೀರಿಸಿದ ನಾಸಿಕ್‌

Surge In Covid Cases Nasik in 1st place Bengaluru in 6th pod

ನವದೆಹಲಿ(ಏ.18): ದೇಶದಲ್ಲಿ ಕೊರೋನಾ 2ನೇ ಅಲೆ ಆರ್ಭಟವೆಂದರೆ ಈಗ ಮುಂಬೈ, ಪುಣೆ, ದಿಲ್ಲಿ, ಬೆಂಗಳೂರಿನಂತಹ ಕೆಲವೇ ಕೆಲವು ಊರುಗಳು ಕಣ್ಣೆದುರಿಗೆ ಬರುತ್ತವೆ. ಆದರೆ ನಿಜವಾಗಿಯೂ ಕೊರೋನಾ ಅಬ್ಬರ ದೇಶದಲ್ಲೇ ಹೆಚ್ಚಿರುವ ನಗರವೆಂದರೆ ಮಹಾರಾಷ್ಟ್ರದ ನಾಸಿಕ್‌. 6ನೇ ಸ್ಥಾನದಲ್ಲಿರುವ ನಗರ ಬೆಂಗಳೂರು.

ತಲಾ 10 ಲಕ್ಷ ಜನಸಂಖ್ಯೆಯಲ್ಲಿ ಎಷ್ಟುಜನರಿಗೆ ಸೋಂಕು ಬಂದಿದೆ ಎಂಬುದನ್ನು ಆಧರಿಸಿ ನಡೆಸಿದ ಅಧ್ಯಯನದಲ್ಲಿ ಮಹಾರಾಷ್ಟ್ರದ ನಾಸಿಕ್‌, ಟಾಪ್‌-10 ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಹೊಸ ಪ್ರಕರಣಗಳನ್ನು ಗಮನಿಸಿದಾಗ ನಾಸಿಕ್‌ನ ಪ್ರತಿ 10 ಲಕ್ಷ ಜನಸಂಖ್ಯೆಯಲ್ಲಿ 46,050 ಜನರಿಗೆ ಸೋಂಕು ತಾಗಿದೆ.

ನಂತರದ ಸ್ಥಾನದಲ್ಲಿ ಮಹಾರಾಷ್ಟ್ರದ ನಾಗಪುರ ಇದೆ. ಇಲ್ಲಿ 10 ಲಕ್ಷ ಜನರಿಗೆ 45,856, ಪುಣೆಯಲ್ಲಿ 36,359, ಮುಂಬೈನಲ್ಲಿ 17,946, ಲಖನೌನಲ್ಲಿ 11,987 ಹಾಗೂ ಬೆಂಗಳೂರಿನಲ್ಲಿ 7,876 ಜನರಿಗೆ ಸೋಂಕು ತಾಗಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಭೋಪಾಲ್‌, ಇಂದೋರ್‌, ದಿಲ್ಲಿ ಹಾಗೂ ಪಟನಾ ಇವೆ.

ಪಟ್ಟಿಗಮನಿಸಿದಾಗ ಮೊದಲ 4 ಸ್ಥಾನಗಳನ್ನು ಮಹಾರಾಷ್ಟ್ರದ ನಗರಗಳೇ ಅಲಂಕರಿಸಿವೆ. ಇತರ ರಾಜ್ಯಗಳ ನಗರಗಳೂ ಪಟ್ಟಿಯಲ್ಲಿ ಕಾಣಿಸಿಕೊಂಡು ದೇಶದ ಮೂಲೆ ಮೂಲೆಗಳಲ್ಲೂ ಕೊರೋನಾದ ಅಲೆ ವ್ಯಾಪಿಸಿ ಆಪೋಶನ ತೆಗೆದುಕೊಳ್ಳುತ್ತಿರುವುದು ಸಾಬೀತಾಗಿದೆ.

Latest Videos
Follow Us:
Download App:
  • android
  • ios