Asianet Suvarna News Asianet Suvarna News

ವಾರಕ್ಕೆ 5 ದಿನ ಕೆಲಸ: ಸರ್ಕಾರದ ಐತಿಹಾಸಿಕ ಆದೇಶ!

ವಾರಕ್ಕೆ ಕೇವಲ 5 ದಿನ ಕೆಲಸ ಎಂದ ಸರ್ಕಾರ| ಐತಿಹಾಸಿಕ ನಿರ್ಧಾರ ಪ್ರಕಟಿಸಿದ ಸರ್ಕಾರ| ಸರ್ಕಾರಿ ನೌಕರರ ಕೆಲಸದ ಅವಧಿ ವಾರಕ್ಕೆ ಕೇವಲ 5 ದಿನ| ಮಹಾರಾಷ್ಟ್ರ ಸರ್ಕಾರದ ಐತಿಹಾಸಿಕ ನಿರ್ಧಾರಕ್ಕೆ ಸರ್ಕಾರಿ ನೌಕರರು ಖುಷ್| ದಿನದ ಕೆಲಸದ ಅವಧಿಯಲ್ಲಿ 45 ನಿಮಿಷಗಳ ಏರಿಕೆ|  ಉದ್ಧವ್ ಠಾಕ್ರೆ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ| ಮಹಾರಾಷ್ಟ್ರದ 20 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆಬಂಪರ್|

5-Day Work Week For Maharashtra Goverment Employees
Author
Bengaluru, First Published Feb 12, 2020, 8:25 PM IST

ಮುಂಬೈ(ಫೆ.12): ಮಹತ್ವದ ಬೆಳವಣಿಗೆಯೊಂದರಲ್ಲಿ ಸರ್ಕಾರಿ ನೌಕರರ ಕೆಲಸದ ಅವಧಿಯನ್ನು ವಾರಕ್ಕೆ 5 ದಿನ ಎಂದು ನಿಗದಿಪಡಿಸಿ ಮಹಾರಾಷ್ಟ್ರ ಸರ್ಕಾರ ಐತಿಹಾಸಿಕ ಆದೇಶ ಹೊರಡಿಸಿದೆ.

ಸರ್ಕಾರಿ ನೌಕರರ ಕಾರ್ಯಕ್ಷಮತೆ ಹೆಚ್ಚಿಸಲು ಹಾಗೂ ಅವರ ವೈಯಕ್ತಿಕ ಜೀವನವನ್ನು ಗಮನದಲ್ಲಿಟ್ಟುಕೊಂಡು ಕೆಲಸದ ಅವಧಿಯನ್ನು ವಾರದಲ್ಲಿ 5 ದಿನ ಎಂದು ನಿಗದಿಪಡಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಸ್ಪಷ್ಟಪಡಿಸಿದೆ.

ಈ ಕುರಿತು ಸಿಎಂ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಇದೇ ಫೆ.29ರಂದು ನೂತನ ಆದೇಶ ಜಾರಿಗೆ ಬರಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಸರ್ಕಾರದ ಈ ಐತಿಹಾಸಿಕ ತೀರ್ಮಾನದಿಂದ ಮಹಾರಾಷ್ಟ್ರದ 20 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಲಾಭವಾಗಲಿದ್ದು, ಇದರಿಂದ ವಿದ್ಯುತ್ ಹಾಗೂ ತೈಲದ ಖರ್ಚನ್ನು ಉಳಿಸಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.

ಆದರೆ ದಿನದ ಕೆಲಸದ ಅವಧಿಯನ್ನು 45ನಿಮಿಷಗಳಷ್ಟು ಅಧಿಕಗೊಳಿಸಲಾಗಿದ್ದು, ಬೆಳಗನಿ 9.45 ಗಂಟೆಯಿಂದ ಸಾಯಂಕಾಲ 5.30 ವರೆಗೆ ಹಾಗೂ ಬೆಳಗಿನ 10 ಗಂಟೆಯಿಂದ ಸಾಯಂಕಾಲ 5.45 ಗಂಟೆ ಎಂದು ನಿಗದಿಪಡಿಸಲಾಗಿದೆ.

ವಾರಕ್ಕೆ 4 ದಿನ ಕೆಲಸ, 6 ಗಂಟೆಯ ಶಿಫ್ಟ್: ಪ್ರಧಾನಿ ಸಲಹೆಗೆ ಕುಣಿದ ದೇಶ!

ಇಷ್ಟೇ ಅಲ್ಲದೇ ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರದಂದು ಸರ್ಕಾರಿ ನೌಕರರಿಗೆ ರಜೆ ನೀಡಲಾಗಿದ್ದು, ಒಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರದಿಂದ ಸರ್ಕಾಋಇ ನೌಕರರಿಗೆ ಬಂಪರ್ ಹೊಡೆದಂತಾಗಿದೆ.

Follow Us:
Download App:
  • android
  • ios