ನವದೆಹಲಿ(ಜೂ.10): ಪಶ್ಚಿಮ ಬಂಗಾಳ ಹಾಗೂ ಒಡಿಶಾಕ್ಕೆ ಇತ್ತೀಚೆಗೆ ಅಪ್ಪಳಿಸಿದ್ದ ಪ್ರಚಂಡ ಮಾರುತ ‘ಅಂಫಾನ್‌’ ವೇಳೆ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಆರ್‌ಎಫ್‌)ದ 49 ಸಿಬ್ಬಂದಿಗಳಿಗೆ ಕೊರೋನಾ ವೈರಸ್‌ ಸೋಂಕು ಅಂಟಿದೆ.

ಅಂಫಾನ್‌ ನಿಖರ ಮಾಹಿತಿ ಕೊಟ್ಟ ಐಎಂಡಿಗೆ ವಿಶ್ವ ಹವಾಮಾನ ಇಲಾಖೆ ಭೇಷ್‌!

49 ಮಂದಿ ಕೂಡ ಪಶ್ಚಿಮ ಬಂಗಾಳದಲ್ಲಿ ಕಾರ್ಯ ನಿರ್ವಹಿಸಿದವರು ಎಂದು ಎನ್‌ಎಡಿಆರ್‌ಎಫ್‌ ತಿಳಿಸಿದೆ. ಕೊರೋನಾ ಪರೀಕ್ಷೆ ಮಾಡಿ ನೆಗೆಟಿವ್‌ ವರದಿ ಬಂದವರನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಕರ್ತವ್ಯ ಮುಗಿಸಿ ಬಂದ ಮೇಲೂ ಪರೀಕ್ಷೆಗೊಳಪಡಿಸಲಾಗಿದ್ದು ಈ ವೇಳೆ 49 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅವರಲ್ಲಿ ಯಾವುದೇ ಸೋಂಕಿನ ಲಕ್ಷಣ ಕಂಡು ಬಂದಿಲ್ಲ.