* ಲಸಿಕೆ ಸಿಗೋವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ* ಶೇ.48 ಪೋಷಕರ ಅಭಿಪ್ರಾಯ* 361 ಜಿಲ್ಲೆಯಲ್ಲಿ ಅನಿಸಿಕೆ ಸಂಗ್ರಹ* ಲೋಕಲ್‌ ಸರ್ಕಲ್‌ ಸಮೀಕ್ಷೆ

ನವದೆಹಲಿ(ಜು.29): ಮಕ್ಕಳಿಗೂ ಕೋವಿಡ್‌ ಲಸಿಕೆ ದೊರೆಯುವವರೆಗೂ ಶಾಲೆಗೆ ಕಳುಹಿಸದಿರಲು ಶೇ.48ರಷ್ಟುಪೋಷಕರು ನಿರ್ಧರಿಸಿದ್ದಾರೆ ಎಂದು ಸಮಿಕ್ಷೆಯೊಂದರಿಂದ ತಿಳಿದುಬಂದಿದೆ. ದೇಶದ 361 ಜಿಲ್ಲೆಗಳಿಂದ 32,000 ಪೋಷಕರನ್ನು ಸಮೀಕ್ಷೆ ನಡೆಸಿ ಲೋಕಲ್‌ ಸರ್ಕಲ್‌ನ ಸಮೀಕ್ಷೆಯೊಂದು ಹೇಳಿದೆ.

ಶೇ.30ರಷ್ಟುಪೋಷಕರು ಅವರ ಜಿಲ್ಲೆಯಲ್ಲಿ ಕೋರೋನಾ ಪ್ರಕರಣಗಳು ಸೊನ್ನೆಗೆ ತಲುಪಿದರೆ ಶಾಲೆಗೆ ಕಳುಹಿಸುವ ಚಿಂತನೆಯಲ್ಲಿದ್ದಾರೆ. ಆದರೆ, ‘ಮಕ್ಕಳು ಶಾಲೆಗೆ ಬರುವಂತೆ ಮಾಡಲು ಅವರಿಗೆ ಲಸಿಕೆ ನೀಡುವುದು ಅತ್ಯಗತ್ಯ’ ಎಂದಿರುವ ಶೇ.48 ಪೋಷಕರು, ಲಸಿಕೆ ಲಭಿಸುವವರೆಗೂ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದಿದ್ದಾರೆ.

ಕೋವ್ಯಾಕ್ಸಿನ್‌ಗೆ ತಪ್ಪದ ಪರದಾಟ..!

ಆದರೆ, ಶೇ.21ರಷ್ಟುಪೋಷಕರು ಶಾಲೆಗಳು ಯಾವಾಗ ತೆರೆಯುತ್ತವೋ ಆಗ ಮಕ್ಕಳನ್ನು ಶಾಲೆಗೆ ಕಳುಹಿಸಲು ಉತ್ಸುಕತೆ ತೋರಿದ್ದಾರೆ ಎಂದು ಆನ್‌ಲೈನ್‌ನಲ್ಲಿ ಪೋಷಕರ ಸಮೀಕ್ಷೆ ನಡೆಸಿದ ಲೋಕಲ್‌ ಸರ್ಕಲ್‌ ಹೇಳಿದೆ.

ಮಂಗಳವಾರ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಮಕ್ಕಳಿಗೆ ಮುಂದಿನ ತಿಂಗಳಿನಿಂದ ಲಸಿಕೆ ವಿತರಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಹೇಳಿದ್ದರು.

ಕೋವಿಡ್‌ ಕಾರಣದಿಂದ ಕಳೆದ ವರ್ಷ ಮಾಚ್‌ರ್‍ನಿಂದಲೇ ಶಾಲೆಗಳನ್ನು ಮುಚ್ಚಲಾಗಿತ್ತು. ಕೆಲವು ರಾಜ್ಯಗಳಲ್ಲಿ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಶಾಲೆಗಳು ಪುನರಾರಂಭವಾದರೂ ಕೋವಿಡ್‌ ಎರಡನೇ ಅಲೆಯ ಕಾರಣದಿಂದ ಶಾಲೆಗಳನ್ನು ಮತ್ತೆ ಮುಚ್ಚಲಾಗಿತ್ತು.

ಲಸಿಕೆ ಪಡೆದ 2-3 ತಿಂಗಳಲ್ಲಿ ಪ್ರತಿಕಾಯಗಳ ಪ್ರಮಾಣ ಇಳಿಕೆ!

ಗುಜರಾತ್‌, ಮಹಾರಾಷ್ಟ್ರ, ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಬಿಹಾರ ರಾಜ್ಯಗಳು ಈ ತಿಂಗಳಿನಲ್ಲಿ ಶಾಲೆಗಳನ್ನು ಪುನರಾಂಭಿಸಿವೆ. ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಆಂಧ್ರಪ್ರದೇಶ ರಾಜ್ಯಗಳು ಆಗಸ್ಟ್‌ ಮೊದಲ ವಾರದಿಂದ ಶಾಲೆಗಳನ್ನು ಆರಂಭಿಲು ತೀರ್ಮಾನಿಸಿವೆ.