ಅಯೋಧ್ಯೆ ರಾಮಮಂದಿರ ಭೂಮಿ ಪೂಜೆಗೆ 40 ಕೆಜಿ ಬೆಳ್ಳಿ ಚಪ್ಪಡಿ ಬಳಕೆ!

ರಾಮಮಂದಿರ ನಿರ್ಮಾಣ ಕಾರ್ಯ ಚುರುಕುಗೊಂಡಿದೆ. ಆಗಸ್ಟ್ 5 ರಂದು ರಾಮ ಮಂದಿ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲು ನಿರ್ಧರಿಸಲಾಗಿದೆ. ಭೂಮಿ ಪೂಜೆಯಲ್ಲಿ ಹಲವು ವಿಶೇಷತೆಗಳಿವೆ. ಬರೋಬ್ಬರಿ 40 ಕೆಜಿ ತೂಕದ ಬೆಳ್ಳಿ ಚಪ್ಪಡಿಯನ್ನು ಬಳಸಲಾಗುತ್ತಿದೆ.

40 kg silver slab to be placed during bhumi puja Ram Mandir in Ayodhya

ಆಯೋಧ್ಯೆ(ಜು.20): ರಾಮ ಮಂದಿರದ ಕನಸು ನನಸಾಗುತ್ತಿದೆ. ಸುಪ್ರೀಂ ಕೋರ್ಟ್‌ನಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಗಳು ಚುರುಗೊಂಡಿತ್ತು. ಆದರೆ ಕೊರೋನಾ ವೈರಸ್, ಲಾಕ್‌ಡೌನ್ ಕಾರಣದಿಂದ ತಯಾರಿಗೆ ಬ್ರೇಕ್ ಬಿದ್ದಿತ್ತು. ಇದೀಗ ಆಗಸ್ಟ್ 3 ರಿಂದ ಆಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ನಡೆಯಲಿದೆ.  ಗರ್ಭಗುಡಿ ಭೂಮಿ ಪೂಜೆಯಲ್ಲಿ ಬರೋಬ್ಬರಿ 40 ಕೆಜಿ ತೂಕದ ಬೆಳ್ಳಿ ಚಪ್ಪಡಿಯನ್ನು ಬಳಸಲಾಗುತ್ತಿದೆ.

ಮೋದಿ ಬಾರದಿದ್ದರೆ ಆ.5ರಂದು ಭೂಮಿಪೂಜೆ ಇಲ್ಲ!.

3 ದಿನದ ಭೂಮಿ ಪೂಜೆ ಕಾರ್ಯ ನಡೆಯಲಿದೆ. ಭೂಮಿ ಪೂಜೆ ಕಾರ್ಯವನ್ನು ವಾರಣಸಿಯ ಸ್ವಾಮೀಜಿ ನೆರವೇರಿಸಲಿದ್ದಾರೆ. ಸುಪ್ರೀಂ ಕೋರ್ಟ್‌ನಿಂದ ಗ್ರೀನ್ ಸಿಗ್ನಲ್ ಪಡೆದ ಬಳಿಕ ಮಾರ್ಚ್ ತಿಂಗಳಲ್ಲಿ ರಾಮ ಲಲ್ಲಾ ಮೂರ್ತಿಯನ್ನು ಸ್ಥಳಾಂತರ ಮಾಡಿದ ಇದೇ ವಾರಣಸಿಯ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಆಗಸ್ಟ್ 5 ರಂದು ನಡೆಯಲಿರುವ ಈ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆ ಇದೆ. 

ಆಗಸ್ಟ್ 5 ರಂದು ನಡೆಯಲಿರುವುದು ಭೂಮಿ ಪೂಜೆ, ಇದು ಶಿಲನ್ಯಾಸ ಅಲ್ಲ ಎಂದು ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಸ್ಪಷ್ಟಪಡಿಸಿದ್ದಾರೆ. ರಾಮ ಮಂದಿರ ಶಿಲಾನ್ಯಾಸವನ್ನು  ಮಾಡಲಾಗಿದೆ. 1989ರಲ್ಲಿ ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವಧಿಯಲ್ಲಿ ಟ್ರಸ್ಟ್ ಸದಸ್ಯರಾಗಿರುವ ಕಾಮೇಶ್ವರ್ ಚೌಪಾಲ್ ಶಿಲಾನ್ಯಾಸ ಮಾಡಿದ್ದಾರೆ.  

ಭೂಮಿ ಪೂಜೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾ ನೀಡಲಾಗಿದೆ. ಆದರೆ ಮೋದಿ ಆಗಮಿಸುವ ಕುರಿತು ಪ್ರಧಾನಿ ಕಾರ್ಯಾಲಯದಿಂದ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ ಎಂದು ಟ್ರಸ್ಟ್ ಸದಸ್ಯರಾದ ಅನಿಲ್ ಮಿಶ್ರಾ ಹೇಳಿದ್ದಾರೆ. 

Latest Videos
Follow Us:
Download App:
  • android
  • ios