ಮೋದಿ ಬಾರದಿದ್ದರೆ ಆ.5ರಂದು ಭೂಮಿಪೂಜೆ ಇಲ್ಲ!

ಮೋದಿ ಬಾರದಿದ್ದರೆ ಆ.5ರಂದು ಭೂಮಿಪೂಜೆ ಇಲ್ಲ!| ರಾಮಜನ್ಮಭೂಮಿ ಟ್ರಸ್ಟ್‌ ಅಧ್ಯಕ್ಷರ ಹೇಳಿಕೆ

Ayodhya Ram Mandir Bhoomi Pujan May Postpone If PM Modi Do Not Come

ಅಯೋಧ್ಯೆ(ಜು.20): ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿಪೂಜೆಗೆ ಆಗಸ್ಟ್‌ 5ರ ಸಂಭಾವ್ಯ ದಿನಾಂಕವನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ನಿಗದಿ ಮಾಡಿದ್ದರೂ, ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸದಿದ್ದರೆ ಸಮಾರಂಭ ಮುಂದೂಡಿಕೆ ಆಗುವ ಸಾಧ್ಯತೆ ಇದೆ. ಹೀಗಂತ ಟ್ರಸ್ಟ್‌ ಅಧ್ಯಕ್ಷ ಮಹಾಂತ ನೃತ್ಯಗೋಪಾಲ ದಾಸ್‌ ಅವರೇ ಹೇಳಿದ್ದಾರೆ.

ಶನಿವಾರ ನಡೆದ ಟ್ರಸ್ಟ್‌ ಸಭೆಯಲ್ಲಿ ಆಗಸ್ಟ್‌ 3 ಅಥವಾ ಆಗಸ್ಟ್‌ 5ರ ದಿನಾಂಕಗಳನ್ನು ಭೂಮಿಪೂಜೆಗೆ ನಿಗದಿ ಮಾಡಲು ನಿರ್ಧರಿಸಲಾಗಿತ್ತು.

ಅ.5ಕ್ಕೆ ರಾಮಮಂದಿರಕ್ಕೆ ಮೋದಿ ಭೂಮಿಪೂಜೆ: ಪೂಜಾ ಕೈಂಕರ್ಯಗಳಲ್ಲಿ ಮೋದಿ ಭಾಗಿ ಸಾಧ್ಯತೆ!

ಈ ಬಗ್ಗೆ ಭಾನುವಾರ ಪತ್ರಿಕೆಯೊಂದರ ಜತೆ ಮಾತನಾಡಿದ ದಾಸ್‌ ಅವರಿಗೆ ‘ಆಗಸ್ಟ್‌ 5ರಂದು ಮೋದಿ ಅವರು ಅನಿವಾರ್ಯ ಕಾರಣದಿಂದ ಬಾರದಿದ್ದರೆ ಏನು ಮಾಡುತ್ತೀರಿ?’ ಎಂದು ಪ್ರಶ್ನಿಸಿದಾಗ, ‘ಪ್ರಧಾನಿ ಅಂದು ಬರುವ ವಿಶ್ವಾಸವಿದೆ. ಆದರೆ ಅನಿವಾರ್ಯ ಕಾರಣ ಅಥವಾ ರಾಷ್ಟ್ರೀಯ ವಿಷಯಗಳಿಂದ ಪ್ರಧಾನಿಗೆ ಬರಲು ಆಗದಿದ್ದರೆ ಭೂಮಿಪೂಜೆಯನ್ನು ತಡ ಮಾಡುತ್ತೇವೆ. ಪ್ರಧಾನಿಯವರ ಭೇಟಿಗೆ ಕಾಯುತ್ತೇವೆ’ ಎಂದರು.

300 ಕೋಟಿಯ ರಾಮಮಂದಿರ: ಆ.3 ಅಥವಾ 5ಕ್ಕೆ ಭೂಮಿಪೂಜೆ: ಮೋದಿಗೆ ಆಹ್ವಾನ!

‘ಸೋಮನಾಥ ಮಂದಿರದ ಭೂಮಿಪೂಜೆ ಸಮಾರಂಭಕ್ಕೆ ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ ಹಾಗೂ ಗೃಹ ಸಚಿವ ವಲ್ಲಭಭಾಯಿ ಪಟೇಲ್‌ ಆಗಮಿಸಿದ್ದರು. 3 ದಿನ ವೈಭವದ ಸಮಾರಂಭ ನಡೆದಿತ್ತು. ಅದೇ ರೀತಿಯ ಭವ್ಯ ಸಮಾರಂಭವನ್ನು ನಡೆಸಲು ಉದ್ದೇಶಿಸಿದ್ದೆವು. ಆದರೆ ಕೊರೋನಾ ಕಾರಣ ಅಂಥ ಸಮಾರಂಭ ಈಗ ಸಾಧ್ಯವಿಲ್ಲ. ಆದರೆ ತುಂಬಾ ಯತ್ನದ ನಂತರ ಭೂಮಿಪೂಜೆಗೆ ಬರಲು ಪ್ರಧಾನಿಯವರ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಹೇಳಿದರು.

Latest Videos
Follow Us:
Download App:
  • android
  • ios