Asianet Suvarna News Asianet Suvarna News

ಧರೆಗುರುಳಿದ 3 ಅಂತಸ್ತಿನ ರೈಸ್‌ ಮಿಲ್‌: ನಾಲ್ವರ ದುರ್ಮರಣ, 20 ಜನರಿಗೆ ಗಾಯ

ಈ ಅವಘಡಕ್ಕೆ 4 ಜನರು ಮೃತಪಟ್ಟಿದ್ದು, ಮತ್ತು 20 ಜನರು ಗಾಯಗೊಂಡಿದ್ದಾರೆ. ಈ ಅವಘಡ ನಡೆದಾಗ ಸುಮಾರು 150 ಜನರು ಕಟ್ಟಡದೊಳಗಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

4 workers killed in rice mill collapse in haryana ash
Author
First Published Apr 18, 2023, 4:08 PM IST | Last Updated Apr 18, 2023, 4:09 PM IST

ಕರ್ನಾಲ್‌, ಹರ್ಯಾಣ (ಏಪ್ರಿಲ್ 18, 2023): ಹರ್ಯಾಣದ ಕರ್ನಾಲ್‌ನಲ್ಲಿ 3 ಅಂತಸ್ತಿನ ಅಕ್ಕಿ ಗಿರಣಿ ಕುಸಿತ ಕಂಡಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಅಲ್ಲದೆ, ಈ ಘಟನೆಯಲ್ಲಿ ಕನಿಷ್ಠ 20 ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ. ಇನ್ನು, ಈ ಅವಘಡ ನಡೆಯುವಾಗ 150 ಜನರು ಅಲ್ಲಿ ಕೆಲಸ ಮಾಡುತ್ತಿದ್ದರು ಎಂದೂ ತಿಳಿದುಬಂದಿದೆ. ಅಲ್ಲದೆ, ಗಾಯಾಳುಗಳನ್ನು ಆಸ್ಪತ್ರೆಯೊಂದಕ್ಕೆ ಶಿಫ್ಟ್‌ ಮಾಡಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
 
ಈ ಅವಘಡದಲ್ಲಿ 4 ಜನರು ಮೃತಪಟ್ಟಿದ್ದು, 20 ಜನರು ಗಾಯಗೊಂಡಿದ್ದಾರೆ. ಈ ಅವಘಡ ನಡೆದಾಗ ಸುಮಾರು 150 ಜನರು ಕಟ್ಟಡದೊಳಗಿದ್ದರು. ಗಾಯಾಳುಗಳನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ಕರ್ನಾಲ್‌ ಡಿಸಿ ಅನೀಶ್‌ ಯಾದವ್‌ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಇದನ್ನು ಓದಿ:ಅಯ್ಯೋ ಪಾಪಿ! ಹೆಣ್ಣು ಶಿಶುವಿಗೆ ಜನ್ಮ ಕೊಟ್ಟು ಕಿಟಕಿಯಿಂದ ಎಸೆದು ಕೊಂದ 19 ವರ್ಷದ ಯುವತಿ

ಇನ್ನು, ಕಟ್ಟಡದಲ್ಲಿ ಕೆಲವು ದೋಷಗಳಿವೆ ಎಂಬುದು ಬೆಳಕಿಗೆ ಬಂದಿದೆ. ಈ ಘಟನೆಯನ್ನು ತನಿಖೆ ಮಾಡಲು ಸಮಿತಿಯೊಂದನ್ನು ರಚನೆ ಮಾಡಲಾಗುವುದು. ಹಾಗೂ, ಅಕ್ಕಿ ಗಿರಣಿ ಮಾಲೀಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ. ಈ ಮಧ್ಯೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ಸಹ ಸ್ಥಳಕ್ಕೆ ಭೇಟಿ ನೀಡಲಿದೆ ಎಂದೂ ತಿಳಿದುಬಂದಿದೆ.

ಇನ್ನೊಂದೆಡೆ, ಈ ಘಟನೆಯಲ್ಲಿ ನಾಲ್ವರು ಜನರು ಮೃತಪಟ್ಟಿದ್ದು ಹಾಗೂ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯವನ್ನು ಆರಂಭಿಸಲಾಗಿದೆ. ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ತಂಡಗಳು ಸಹ ಸ್ಥಳಕ್ಕೆ ಧಾವಿಸಲಿದೆ. ಇನ್ನು, ಈ ಕಟ್ಟಡದಲ್ಲಿದ್ದ ಯಾರೊಬ್ಬರೂ ನಾಪತ್ತೆಯಾಗಿಲ್ಲ, ನಾವು ಕಟ್ಟಡದೊಳಗಿದ್ದ ಕಾರ್ಮಿಕರ ಹೆಸರನ್ನು ಪರಿಶೀಲಿಸಿದ್ದೇವೆ ಎಂದು ಕರ್ನಾಲ್‌ ಸೂಪರಿಟೆಂಡೆಂಟ್‌ ಆಫ್‌ ಪೊಲೀಸ್‌ ಶಶಾಂಕ್ ಕುಮಾರ್‌ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಯುಪಿಯಲ್ಲಿ ಗುಂಡಿನ ದಾಳಿಗೆ ಯುವತಿ ಬಲಿ: ಅತೀಕ್‌ ಹತ್ಯೆಯಂತೆ ಈ ಸಾವನ್ನೂ ಸಂಭ್ರಮಿಸುತ್ತೀರಾ ಎಂದು ಟೀಕೆ

Latest Videos
Follow Us:
Download App:
  • android
  • ios