Asianet Suvarna News Asianet Suvarna News

UP Elections: 4 ನೇ ಹಂತದ ಮತದಾನದೊಂದಿಗೆ ಮುಕ್ತಾಯವಾಗಲಿದೆ 240 ಕ್ಷೇತ್ರಗಳ ಚುನಾವಣೆ!

* ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತದ ಮತದಾನಕ್ಕೆ ಕ್ಷಣಗಣನೆ

* 4 ನೇ ಹಂತದ ಮತದಾನದೊಂದಿಗೆ ಮುಕ್ತಾಯವಾಗಲಿದೆ 240 ಕ್ಷೇತ್ರಗಳ ಚುನಾವಣೆ

* ಎಷ್ಟು ಸ್ಪರ್ಧಿಗಳು? ಯಾರ ಪ್ರಾಬಲ್ಯ? ಇಲ್ಲಿದೆ ವಿವರ

 

4 th Phase Election in Uttar Pradesh 624 Candidates Vie For 59 Seats pod
Author
Bangalore, First Published Feb 22, 2022, 5:02 PM IST

ಪ್ರಶಾಂತ್ ನಾತು, ಇಂಡಿಯಾ ಗೇಟ್

ನವದೆಹಲಿ(ಫೆ.22): ನಾಳೆ ಉತ್ತರ ಪ್ರದೇಶದ 4 ನೇ ಹಂತದ ಚುನಾವಣೆ ನಡೆಯಲಿದ್ದು ಸೆಂಟ್ರಲ್ ಯು ಪಿ ಮತ್ತು ಅವಧ್ ನ ರಾಯಬರೇಲಿ ಹರ್ದೋಯಿ ಲಕ್ಹಿಂಪುರ ಖೇರಿ ಸೀತಾಪುರ ಲಕ್ ನೌ ಗಳ 59 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.ಈಗಾಗಲೇ ಯು ಪಿ ಯ 180 ಕ್ಷೇತ್ರಗಳಲ್ಲಿ ಚುನಾವಣೆ ಮುಗಿದಿದ್ದು ನಾಳೆಯ ಮತದಾನದೊಂದಿಗೆ 240 ಕ್ಷೇತ್ರಗಳ ಚುನಾವಣೆ ಮುಕ್ತಾಯ ವಾಗಲಿದೆ

2017 ರಲ್ಲಿ ಬಿಜೆಪಿ ಈ 59 ಕ್ಷೇತ್ರಗಳ ಪೈಕಿ 49 ರಲ್ಲಿ ಗೆದ್ದಿತ್ತು.ಈ ಸೆಂಟ್ರಲ್ ಯು ಪಿ ಯಲ್ಲಿ ಯಾರು ಗೆಲ್ಲುತ್ತಾರೋ ಅವರೇ ಉತ್ತರ ಪ್ರದೇಶದ ಅಧಿಕಾರದ ಗದ್ದುಗೆ ಏರುತ್ತಾರೆ ಅನ್ನುವ ಪ್ರತೀತಿ ಇದೆ. ರಾಯಬರೇಲಿ ಮತ್ತು ಫಿಲಿಭಿತ್ ತರಹದ ಕ್ಷೇತ್ರಗಳು ದಶಕಗಳಿಂದಲೂ ಕಾಂಗ್ರೆಸ್ ನ ಗಾಂಧಿ ಪರಿವಾರದ ಕಟ್ಟಾ ಕ್ಷೇತ್ರಗಳು. ಆದರೆ ಲೋಕಸಭೆಯಲ್ಲಿ ಗಾಂಧಿಗಳನ್ನು ಆಯ್ಕೆ ಮಾಡುತ್ತಿದ್ದ ಮತದಾರರು ವಿಧಾನಸಭೆಗೆ ಸ್ಥಳೀಯರನ್ನು ಆಯ್ಕೆ ಮಾಡುತ್ತಿದ್ದರು.ಹೀಗಾಗಿ ಸಮಾಜವಾದಿ ಮತ್ತು ಬಿ ಎಸ್ ಪಿ ಗಳು ಲೋಕಸಭೆಗೆ ಅಭ್ಯರ್ಥಿ ಹಾಕದೇ ವಿಧಾನಸಭೆಯಲ್ಲಿ ಲಾಭ ಪಡೆಯುತ್ತಿದ್ದವು.ಆದರೆ ಈಗ ಈ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲ ವಾಗಿದ್ದು ನೇರ ಹಣಾಹಣಿ ಬಿಜೆಪಿ ಮತ್ತು ಸಮಾಜವಾದಿ ಗಳ ನಡುವೆ ನಡೆಯಲಿದೆ.

 ಇನ್ನು ಸೆಂಟ್ರಲ್ ಯು ಪಿ ಯ ಕ್ಷೇತ್ರಗಳಲ್ಲಿ ಫ್ರೀ ರೇಷನ್  ಸಾಂಡ್ ಸುರಕ್ಷಾ ಮತ್ತು ಮುಸಲ್ಮಾನ ಮುಖ್ಯ ಚುನಾವಣಾ ವಿಷಯ ಗಳು.

1 ಕೋವಿಡ್ ನಂತರ ರಾಜ್ಯ ಮತ್ತು ಕೇಂದ್ರ ಸರ್ಕಾರ ಗಳು ಉಚಿತ ಪಡಿತರ ವನ್ನು ನೀಡಿದ್ದು ಬಿಜೆಪಿ ಗೆ ದೊಡ್ಡ ಮಟ್ಟದ ಲಾಭ ತರಬಹುದು ಎಂದು ಅಂದಾಜಿಸಲಾಗುತ್ತಿದೆ.ಮೋದಿ ಸರ್ಕಾರದ ಫ್ರೀ ರೇಷನ್ ಬಗ್ಗೆ ಅತ್ಯಂತ ಬಡ ಮತದಾರರು ಖುಷಿ ವ್ಯಕ್ತಪಡಿಸುತ್ತಿದ್ದು ಮಹಿಳಾ ಮತದಾರರು ಹೆಚ್ಚು ಬಿಜೆಪಿ ಕಡೆ ವಾಲಬಹುದು ಎಂದು ಸರ್ವೇ ಗಳು ಹೇಳುತ್ತಿವೆ.ಆದರೆ ಸಮಾಜ ವಾದಿ ಪಕ್ಷ ನಿರುದ್ಯೋಗ ಮತ್ತು ಬೆಲೆ ಏರಿಕೆ ವಿಷಯ ಜಾಸ್ತಿ ಪ್ರಸ್ತಾಪಿಸುತ್ತಿದ್ದು ಇದರ ಎಫ್ಫೆಕ್ಟ್ ಏನು ಅನ್ನುವುದು ಮತದಾನದಲ್ಲಿ ಸ್ಪಷ್ಟ ವಾಗಲಿದೆ.

2 ಸಾಂಡ್ ಸೆಂಟ್ರಲ್ ಯು ಪಿ ಯ ಅನೇಕ ಗ್ರಾಮೀಣ ಕ್ಷೇತ್ರಗಳಲ್ಲಿ ಬಿಡಾಡಿ ಜಾನುವಾರು ಗಳು ಹೊಲಕ್ಕೆ ನುಗ್ಗಿ ಬೆಳೆ ಗೆ ಹಾನಿ ಮಾಡುವುದರಿಂದ ರೈತರಿಗೆ ವಿಪರೀತ ಸಮಸ್ಯೆ ಯಾಗಿದ್ದು ಈ ಸಮಸ್ಯೆಗೆ ಪರಿಹಾರ ಕೊಡಿಸಿ ಎಂದು ಸ್ಥಳೀಯರು ಪ್ರಚಾರಕ್ಕೆ ಬಂದ ಫುಡಾರಿ ಗಳನ್ನು ಅಂಗಲಾಚುತ್ತಿದ್ದಾರೆ.ಸಮಾಜವಾದಿ ಪಕ್ಷ ಈ ಖುಲಾ ಸಾಂಡ್ ವಿಷಯ ಜಾಸ್ತಿ ಜಾಸ್ತಿ ದೊಡ್ಡದ್ದು ಮಾಡಿದಂತೆ ಪ್ರಧಾನಿ ಮೋದಿ ಕೂಡ ಈ ಬಾರಿ ಅಧಿಕಾರಕ್ಕೆ ಬಂದರೆ ಒಂದು ಶಾಶ್ವತ ಪರಿಹಾರಕ್ಕೆ ಬಿಜೆಪಿ ಸರ್ಕಾರ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ.

3 ಸುರಕ್ಷಾ ಪೂರ್ತಿ ಯು ಪಿ ಯಲ್ಲಿ ಯೋಗಿ ಆದಿತ್ಯನಾಥ ಸರ್ಕಾರ ಬಂದ ನಂತರ ಕಾನೂನು ಸುವ್ಯವಸ್ಥೆ ವಿಪರೀತ ಸುಧಾರಿಸಿದೆ ಎನ್ನುವುದನ್ನು ಬಿಜೆಪಿ ವಿರೋಧಿಗಳು ಒಪ್ಪಿಕೊಳ್ಳುತ್ತಾರೆ ಇದರಿಂದ ಮಧ್ಯಮ ವರ್ಗವಂತು ಫುಲ್ ಖುಷಿ ಯಾಗಿದೆ.ಅದರಲ್ಲೂ ರಾತ್ರಿ ಕೂಡ ಓಡಾಡಬಹುದು ಎಂಬ ಕಾರಣದಿಂದ ಮಹಿಳಾ ಮತದಾರರಲ್ಲಿ ಯೋಗಿ ಕ್ರೇಜ್ ಹೆಚ್ಚಾಗಿದೆ.

4 ಮುಸಲ್ಮಾನ.ಲಕ್ ನೌ ಸೇರಿದಂತೆ ಮುಸಲ್ಮಾನ ಮತಗಳು ಒಂದು ದೊಡ್ಡ ಚರ್ಚೆಯ ವಸ್ತು.2017 ರಲ್ಲಿ ಮುಸ್ಲಿಂ ಮತ ಗಳು ಸಮಾಜವಾದಿ ಪಕ್ಷ  ಬಹುಜನ ಸಮಾಜ ಪಕ್ಷ ದ ನಡುವೆ ಓಡೆದು ಹೋಗಿದ್ದರಿಂದ ಬಿಜೆಪಿ ಗೆ ಲಾಭ ಆಗಿತ್ತು.

ಆದರೆ ಈ ಬಾರಿ ಮುಸ್ಲಿಂ ಮತಗಳು ಮೊದಲ 3 ಹಂತದಲ್ಲಿ ಸಮಾಜ ವಾದಿ ಗಳ ಕಡೆ ವಾಲಿದ್ದು ಸ್ಪಷ್ಟ ವಾಗಿದ್ದು ಓವೈಸಿ ಎಷ್ಟು ಒಡೆಯಲು ಶಕ್ತರು ಅನ್ನುವುದು ಕುತೂಹಲದ ಪ್ರಶ್ನೆ

Follow Us:
Download App:
  • android
  • ios