ನವದೆಹಲಿ(ಜ.01): ರೂಪಾಂತರ ಕೊರೋನಾ ವೈರಸ್ ತಳಿ ಭಾರತದ ತಲೆನೋವು ಹೆಚ್ಚಿಸುತ್ತಿದೆ. ಬ್ರಿಟನ್ ವಿಮಾನಕ್ಕೆ ಹೇರಿರುವ ನಿರ್ಭಂಧ ಮುಂದುವರಿಸಲಾಗಿದೆ.  ಆದರೆ ಪ್ರಕರಣ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಇಂದು(ಜನವವರಿ 1) ಭಾರತದಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದೆ. ಈ ಮೂಲಕ ರೂಪಾಂತರ ಕೊರೋನಾ ವೈರಸ್ ಸಂಖ್ಯೆ 29ಕ್ಕೇರಿಕೆಯಾಗಿದೆ.

ಆಸ್ಟ್ರಾಝೆನಿಕಾ ಕೊರೋನಾ ಲಸಿಕೆ ತುರ್ತು ಬಳಕೆಗೆ ಭಾರತ ಡ್ರಗ್ ರೆಗ್ಯೂಲೇಟರಿ ಅನುಮತಿ 

ಭಾರತದಲ್ಲಿ ಪತ್ತೆಯಾಗಿರುವ ಈ ನಾಲ್ಕು ರೂಪಾಂತರ ಕೊರೋನಾ ವೈರಸ್ ಪ್ರಕರಣದಲ್ಲಿ ಮೂರು ಪ್ರಕರಣಗಳು ಬೆಂಗಳೂರಿನ ಲ್ಯಾಬ್‌ನಲ್ಲಿ ಪತ್ತೆಯಾಗಿದ್ದರೆ, ಒಂದು ಪ್ರಕರಣ ಹೈದರಾಬಾದ್ ಲ್ಯಾಬ್‌ನಲ್ಲಿ ಪತ್ತೆಯಾಗಿದೆ.

ದೇಶದಲ್ಲಿ 29 ರೂಪಾಂತರ ಕೊರೋನಾ ವೈರಸ್ ಪ್ರಕರಣಗಳಲ್ಲಿ 10 ದೆಹಲಿ, 10 ಬೆಂಗಳೂರು, 3 ಹೈದರಾಬಾದ್, 1 ಪಶ್ಚಿಮ ಬಂಗಾಳ, 5 ಪ್ರಕರಣಗಳು ಪುಣೆ ವಿರೋಲಜಿ ಸಂಸ್ಥೆಯಲ್ಲಿ ಪತ್ತೆಯಾಗಿದೆ. ಎಲ್ಲಾ 29 ಸೋಂಕಿತರನ್ನು ಐಸೋಲೇಶನ್‌ನಲ್ಲಿ ಇಡಲಾಗಿದೆ. ಡೆನ್ಮಾರ್ಕ್, ನೆದರ್ಲೆಂಡ್, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್,  ಫ್ರಾನ್ಸ್, ಸ್ವೀಡನ್, ಸ್ವಿಟ್ಜರ್‌ಲೆಂಡ್, ಜರ್ಮನಿ, ಕೆನಡಾ, ಜಪಾನ್, ಲೆಬೆನಾನ್ ಹಾಗೂ ಸಿಂಗಾಪುರದಲ್ಲಿ ರೂಪಾಂತರ ಕೊರೋನಾ ವೈರಸ್ ತಳಿ ಪತ್ತೆಯಾಗಿದೆ.