ಸೋನಿಯಾ ಗಾಂಧಿ ಅವರು ಶನಿವಾರ ಪಕ್ಷದ 23 ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದಾರೆ. ಕಾಂಗ್ರೆಸ್‌ನಲ್ಲಿ ಬಹಳಷ್ಟು ಬದಲಾವಣೆಗಳಾಗಬೇಕು ಎಂದು ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದ ಹಿರಿಯ ಕಾಂಗ್ರೆಸ್ ನಾಯಕರು ಪೂರ್ಣಾವಧಿ ನಾಯಕತ್ವ, ಪಾರದರ್ಶಕತೆ, ಸಕ್ರಿಯ ರಾಜಕಾರಣದ ಬಗ್ಗೆ ಪತ್ರಗಳಲ್ಲಿ ಬರೆದಿದ್ದರು.

23 ನಾಯಕರಲ್ಲಿ ಸುಮಾರು 7, 8 ನಾಯಕರು ಹಲವಾರು ಬಾರಿ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಈ ಮಹತ್ವದ ಸಭೆಗೆ ಡೇಟ್ ಫಿಕ್ಸ್ ಮಾಡಲಾಗಿದೆ. ಈ ಸಭೆಗೆ ಹಾಜರಾಗುವವರ ಲಿಸ್ಟ್‌ನ್ನು ಸೋನಿಯಾ ಗಾಂಧಿ ಅವರಿಗೆ ಕಳುಹಿಸಲಾಗಿದೆ. ರಾಹುಲ್ ಗಾಂಧಿ ಅವರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಕಿಡ್ನಿ ಮಾರಾಟಕ್ಕಿದೆ ಎಂದು ಜಾಹೀರಾತು ಕೊಟ್ಟ ಕಾಶ್ಮೀರಿ ವ್ಯಕ್ತಿ

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಮ್ ನಬಿ ಆಜಾದ್, ಮಾಜಿ ಕೇಂದ್ರ ಸಚಿವರಾದ ಆನಂದ್ ಶರ್ಮಾ, ಕಪಿಲ್ ಸಿಬಲ್, ಮನೀಶ್ ತಿವಾರಿ ಮತ್ತು ಶಶಿ ತರೂರ್ ಮತ್ತು ಹರಿಯಾಣ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳಾದ ಭೂಪಿಂದರ್ ಸಿಂಗ್ ಹೂಡಾ ಮತ್ತು ಪೃಥ್ವಿರಾಜ್ ಚವಾಣ್ ಅವರೂ 23 ರಾಜಕೀಯ ಮುಖಂಡರ ಲಿಸ್ಟ್‌ನಲ್ಲಿದ್ದಾರೆ.

ಹಿರಿಯ ನಾಯಕರಾದ ಮನಮೋಹನ್ ಸಿಂಗ್, ಪಿ. ಚಿದಂಬರಂ, ಎಕೆ ಅಂಟೊನಿ, ಎಐಸಿಸಿ ಕಾರ್ಯದರ್ಶಿ  ಕೆಸಿ ವೇಣುಗೋಪಾಲ್ ಕೂಡಾ ಭಾಗವಹಿಸಲಿದ್ದಾರೆ.  ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್‌ನಾಥ್ ಕೂಡಾ ಭಾಗವಹಿಸುವ ನಿರೀಕ್ಷೆ ಇದೆ.

ಉಲ್ಟಾ ಹೊಡೆದ ದಿಲ್ಲಿ ಸಿಎಂ ಕೇಜ್ರಿವಾಲ್‌ !

ಪಕ್ಷದ ಸಂಘಟನೆ, ಪಾರದರ್ಶಕತೆ ಬಗ್ಗೆ  ಧ್ವನಿ ಎತ್ತಿದ ಹಿರಿಯ ನಾಯಕರು ಪಕ್ಷದಲ್ಲಿ ದೊಡ್ಡ ಬದಲಾವಣೆಯಾಗಬೇಕೆಂಬ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್ ಮುಂದಿನ ನಡೆ, ಬೆಳವಣಿಗೆಯ ನಿಟ್ಟಿನಲ್ಲಿ ಈ ಸಭೆ ಮಹತ್ವದ್ದಾಗಿದೆ.