Asianet Suvarna News Asianet Suvarna News

ಮೋದಿ ರ‍್ಯಾಲಿ ವೇಳೆ ಸ್ಫೋಟ: 4 ಉಗ್ರರಿಗೆ ಮರಣದಂಡನೆ, ಇಬ್ಬರಿಗೆ ಜೀವಾವಧಿ ಶಿಕ್ಷೆ!

*ಸಿಮಿ, ಇಂಡಿಯನ್‌ ಮುಜಾಹಿದಿನ್‌ ಸಂಘಟನೆಯ ಉಗ್ರರು
*2013ರಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಮೋದಿ
*ಬಿಹಾರದ ಪಟನಾದಲ್ಲಿ ‘ಹೂಂಕಾರ್‌ ರ‍್ಯಾಲಿ’ಯಲ್ಲಿ ಪಾಲ್ಗೊಳ್ಳಬೇಕಿತ್ತು
*ಮೋದಿ ಆಗಮನಕ್ಕೆ ಕೆಲ ತಾಸಿನ ಮುನ್ನ ರಾರ‍ಯಲಿ ಸ್ಥಳದಲ್ಲಿ ಬಾಂಬ್‌ ಸ್ಫೋಟ

4 get death for 2013 Patna blasts at Modi rally in Patna
Author
Bengaluru, First Published Nov 2, 2021, 12:17 PM IST
  • Facebook
  • Twitter
  • Whatsapp

ಪಟನಾ (ನ. 2): 2013ರಲ್ಲಿ ಅಂದಿನ ಗುಜರಾತ್‌ (Gujarat) ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ (Narendra Modi) ಅವರ ‘ಹೂಂಕಾರ್‌ ರ‍್ಯಾಲಿ’ ಸ್ಥಳದಲ್ಲಿ ನಡೆದ ಸ್ಫೋಟ ಪ್ರಕರಣದ 9 ದೋಷಿಗಳಿಗೆ ಸೋಮವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದೆ. ಇದರಲ್ಲಿ ನಾಲ್ವರಿಗೆ ಗಲ್ಲು, ಇಬ್ಬರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ. ಮತ್ತಿಬ್ಬರಿಗೆ ತಲಾ 10 ವರ್ಷ ಮತ್ತು ಓರ್ವನಿಗೆ 7 ವರ್ಷ ಜೈಲು ಶಿಕ್ಷೆಯನ್ನು ಘೋಷಿಸಲಾಗಿದೆ. ಇದರೊಂದಿಗೆ 8 ವರ್ಷದ ಹಿಂದೆ 6 ಜನರನ್ನು ಬಲಿ ಪಡೆದ ಪ್ರಕರಣದ ದೋಷಿಗಳಿಗೆ ಕಠಿಣ ಶಿಕ್ಷೆ ವಿಧಿಸಿದಂತಾಗಿದೆ. ಈ 9 ಜನರು ದೋಷಿಗಳೆಂದು ಸೆ.27ರಂದು ಕೋರ್ಟ್‌ ತೀರ್ಪು ನೀಡಿತ್ತು. ಇವರೆಲ್ಲರಿಗೂ ನಿಷೇಧಿತ ಸಿಮಿ ಹಾಗೂ ಇಂಡಿಯನ್‌ ಮುಜಾಹಿದೀನ್‌ ಸಂಪರ್ಕ ದೃಢಪಟ್ಟಿತ್ತು.

ಕೊರೋನಾ ಕಾಲದಲ್ಲೂ ಪುಟಿದೆದ್ದ ಭಾರತದ ಆರ್ಥಿಕತೆ : ರಾಜೀವ್ ಚಂದ್ರಶೇಖರ್‌ ಸಂತಸ‌!

ಹೈದರ್‌ ಅಲಿ (Haider Ali), ನೋಮನ್‌ ಅನ್ಸಾರಿ (Numan Ansari), ಮುಜೀಬುಲ್ಲಾ ಅನ್ಸಾರಿ (Mujibullah Ansari) ಮತ್ತು ಇಮ್ತಿಯಾಜ್‌ ಆಲಂಗೆ (Imtiyaz) ಗಲ್ಲು ಶಿಕ್ಷೆ ವಿಧಿಸಲಾಗಿದೆ. ಇನ್ನು ಉಮರ್‌ ಸಿದ್ದಿಕಿ (Umer Siddique) ಮತ್ತು ಅಜರುದ್ದೀನ್‌ ಖುರೇಷಿಗೆ (Azharuddin Qureshi) ಜೀವಾವಧಿ, ಅಹಮದ್‌ ಹುಸೇನ್‌ ಮತ್ತು ಮಹಮ್ಮದ್‌ ಫಿರೋಜ್‌ ಅಸ್ಲಾಂಗೆ ತಲಾ 10 ವರ್ಷ ಜೈಲು, ಇಫ್ತಿಕಾರ್‌ ಆಲಂಗೆ 7 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಇದೀಗ ಶಿಕ್ಷೆಗೆ ಗುರಿಯಾದ ಹೈದರ್‌ ಅಲಿ, ಮುಜೀಬುಲ್ಲಾ ಅನ್ಸಾರಿ, ಇಮ್ತಿಯಾಜ್‌ ಆಲಂ, ಉಮರ್‌ ಸಿದ್ಧಿಕಿ ಮತ್ತು ಅಜರುದ್ದೀನ್‌ ಅನ್ಸಾರಿಗೆ, ಪಟನಾ ಸ್ಫೋಟ ನಡೆಯುವುದಕ್ಕಿಂತ 3 ತಿಂಗಳ ಹಿಂದೆ ಬೋಧ್‌ಗಯಾದಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಕುರಿತ ತೀರ್ಪು 3 ವರ್ಷ ಹಿಂದೆ ಬಂದಿತ್ತು.

ಏನಾಗಿತ್ತು?:

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿದ್ದ ನರೇಂದ್ರ ಮೋದಿ 2013ರ ಅ.27ರಂದು ಪಟನಾದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಹೂಂಕಾರ್‌ ರ‍್ಯಾಲಿಯಲ್ಲಿ (Hunkar rally) ಭಾಗಿಯಾಗುವವರಿದ್ದರು. ಅಂದು ಮೋದಿ ಆಗಮನಕ್ಕೂ ಕೆಲ ಗಂಟೆಗಳ ಮುನ್ನ ರ‍್ಯಾಲಿ ಸ್ಥಳ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ 6 ಕಡೆ ಸರಣಿ ಸ್ಫೋಟ ಸಂಭವಿಸಿತ್ತು. ಸ್ಫೋಟದಿಂದ ಆತಂಕಕ್ಕೆ ಒಳಗಾದ ಜನ ಗಾಬರಿಯಿಂದ ಓಡುವ ವೇಳೆ ಕಾಲ್ತುಳಿತ ಉಂಟಾಗಿ 6 ಜನರು ಸಾವನ್ನಪ್ಪಿದ್ದರು.

COP26 ಸಮ್ಮೇಳನ; ಶಾಲಾ ಪಠ್ಯದಲ್ಲಿ ಹವಾಮಾನ ಬದಲಾವಣೆ ನೀತಿ ಸೇರಿಸುವ ಅಗತ್ಯವಿದೆ; ಪ್ರಧಾನಿ ಮೋದಿ!

ಸರಣಿ ಬಾಂಬ್ ಸ್ಫೋಟದಿಂದ ಭಯಭೀತಗೊಂಡ ಜನ ಘಟನಾ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ತೆರಲು ಧಾವಂತ ತೋರಿಸಿದ್ದರು. ಪರಿಣಾಮ ಕಾಲ್ತುಳಿತಕ್ಕೆ 6 ಮಂದಿ ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ 90 ಮಂದಿ ಗಾಯಗೊಂಡಿದ್ದರು. ಮೊದಲ ಬಾಂಬ್ ಸ್ಫೋಟ ಪಾಟ್ನಾ ರೈಲು ನಿಲ್ದಾಣದ 10ನೇ ಫ್ಲಾಟ್‌ಫಾರ್ಮ್‌ನಲ್ಲಿ ಸಂಭವಿಸಿತ್ತು. ಇನ್ನುಳಿದ ಸ್ಫೋಟ ಗಾಂಧಿ ಮೈದಾನದಲ್ಲಿ ನಡೆದಿತ್ತು. ಮೋದಿ ಭಾಷಣ ಮಾಡಲಿದ್ದ ಕೆಲವೇ ಕ್ಷಣಗಳ ಮೊದಲು ಬಾಂಬ್ ಸ್ಫೋಟಿಸಲಾಗಿತ್ತು. ಆದರೆ ಮೋದಿ ರ‍್ಯಾಲಿ ಮುಂದುವರಿಸಿದ್ದರು.

ಕಾಂಗ್ರೆಸ್‌ನಿಂದಾಗಿ ಮೋದಿ ಬಲಶಾಲಿ: ದೀದಿ ಭವಿಷ್ಯ

ಈ ಕುರಿತು ಎನ್‌ಐಎ (National Investigation Agency) ಪ್ರಕರಣ ದಾಖಲಿಸಿಕೊಂಡು 10 ಜನರನ್ನು ಬಂಧಿಸಿತ್ತು. ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿರಲಿಲ್ಲವಾದರೂ, ಬಂಧಿತರೆಲರೂ ನಿಷೇಧಿತ ಸಿಮಿ ಮತ್ತು ಇಂಡಿಯನ್‌ ಮುಜಾಹಿದಿತ್‌ ಸಂಘಟನೆ ಜೊತೆ ನಂಟು ಹೊಂದಿದ್ದು ಬೆಳಕಿಗೆ ಬಂದಿತ್ತು. ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ 10 ಜನರ ಪೈಕಿ ಒಂಬತ್ತು ಜನರನ್ನು ದೋಷಿಗಳೆಂದು ಪ್ರಕಟಿಸಿ, ಓರ್ವನನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆ ಖುಲಾಸೆ ಮಾಡಿತ್ತು.

Follow Us:
Download App:
  • android
  • ios