Asianet Suvarna News

38 ಪತ್ನಿಯರ ಮುದ್ದಿನ ಗಂಡ, 89 ಮಕ್ಕಳ ಪ್ರೀತಿಯ ತಂದೆ; ಮಿಜೋರಾಂ ಫ್ಯಾಮಿಲಿ ಮ್ಯಾನ್ ನಿಧನ!

  • ಮಿಜೋರಾಂನ ಫ್ಯಾಮಿಲಿ ಮ್ಯಾನ್ ಝಿಯೊನಾ ಚನಾ ನಿಧನ
  • 38 ಪತ್ನಿ ಹಾಗೂ 89 ಮಕ್ಕಳ ತಂದೆಯಾಗಿರುವ ಚನಾ
  • ಅತೀ ದೊಡ್ಡ ಕುಟುಂಬ ದಾಖಲೆ ಬರೆದಿದ್ದ ಚನಾ
38 wives 89 kids world largest family man Mizoram Ziona Chana dies at 76 ckm
Author
Bengaluru, First Published Jun 13, 2021, 8:36 PM IST
  • Facebook
  • Twitter
  • Whatsapp

ಮಿಜೋರಾಂ(ಜೂ.13): ಒಂದಲ್ಲ, ಎರಡಲ್ಲ, ಬರೋಬ್ಬರಿ 38 ಪತ್ನಿಯರು, 89 ಮಕ್ಕಳು ಇನ್ನು ಮೊಮ್ಮಕ್ಕಳ ಲೆಕ್ಕ ಇನ್ನೂ ಸಿಕ್ಕಿಲ್ಲ. ಇದು ಕತೆಯಲ್ಲ ಜೀವನ. ಮಿಜೋರಾಂನ 76 ವರ್ಷ ಝಿಯೊನಾ ಚನಾ ಸಾಧನೆ ಇದು. ವಿಶ್ವದ ಅತೀ ದೊಡ್ಡ ಕುಟುಂಬ ಹೊಂದಿರುವ ಏಕೈಕ ವ್ಯಕ್ತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದ ಝಿಯೋನಾ ಚನಾ ನಿಧನರಾಗಿದ್ದಾರೆ.

ಸಾಹಿತ್ಯ ಲೋಕ ಅಗಲಿದ ಕವಿ, ಸಾಹಿತಿ ಡಾ. ಸಿದ್ದಲಿಂಗಯ್ಯ ಇನ್ನು ನೆನಪು ಮಾತ್ರ

ಡಯಾಬಿಟೀಸ್ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲಿದ ಝಿಯೋನಾ ಚನಾ ಇಂದು(ಜೂ.13) ಐಜ್ವಾಲ್‌ನಲ್ಲಿ ನಿಧನರಾಗಿದ್ದಾರೆ.  ಝಿಯೋನಾ ನಿಧನಕ್ಕೆ ಮಿಜೋರಾಂ ಮುಖ್ಯಮಂತ್ರಿ ಝೋರಾಮಂಗ್ಟಾ ಸಂತಾಪ ಸೂಚಿಸಿದ್ದಾರೆ.

 38 ಹೆಂಡತಿ, 89  ಮಕ್ಕಳೊಂದಿಗೆ ವಿಶ್ವದ ಅತೀದೊಡ್ಡ ಕುಟುಂಬದ ಮುಖ್ಯಸ್ಥ ಎಂಬ ಕೀರ್ತಿ ಪಡೆದಿದ್ದ ಝಿಯೋನಾ ಚನಾ ನಿಧನ ಬೇಸರ ತಂದಿದೆ. ಅವರ ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

 

ಸ್ವಾಮಿ ಶಿವಮಯಾನಂದಜೀ ಮಹಾರಾಜ್‌ ಇನ್ನಿಲ್ಲ, ಮೋದಿ ಸಂತಾಪ!

1945 ರಲ್ಲಿ ಹುಟ್ಟಿದ ಝಿಯೋನಾ 17ನೇ ವಯಸ್ಸಿನಲ್ಲಿ ಮೊದಲ ಮದುವೆಯಾದರು. ಬಹುಪತ್ನಿತ್ವ ಸಂಪ್ರದಾಯ ಅನುಸರಿಸುವ ಝಿಯೋನಾ ವರ್ಷದಿಂದ ವರ್ಷಕ್ಕೆ ಮದುವೆ ಸಂಖ್ಯೆ ಹೆಚ್ಚಾಯಿತು, ಪತ್ನಿಯರು ಸಂಖ್ಯೆ ದ್ವಿಗುಣಗೊಂಡಿತು. ಇನ್ನು 38ನೇ ಪತ್ನಿ ಅಂದರೆ ಕೊನೆ ಬಾರಿಗೆ ಮದುವೆಯಾಗಿದ್ದು 2004ರಲ್ಲಿ. 

ಪತ್ನಿಯರು, ಮಕ್ಕಳು ಸೇರಿದಂತೆ ಝಿಯೋನಾ ಚನಾ ಕುಟುಂಬದಲ್ಲಿ ಒಟ್ಟು 180 ಮಂದಿ ಇದ್ದಾರೆ. ಇವರೆಲ್ಲರೂ ಒಂದೇ ಮನೆಯಲ್ಲಿ ವಾಸವಿದ್ದರು ಅನ್ನೋದು ಮತ್ತೊಂದು ವಿಶೇಷ. ಮಿಝೋರಾಂ ಆಗಮಿಸುವ ಪ್ರವಾಸಿಗರು ಜಿಯೋನಾ ಚನಾ ಕುಟುಂಬಕ್ಕೆ ಭೇಟಿ ನೀಡುತ್ತಿದ್ದರು. 

Follow Us:
Download App:
  • android
  • ios