ಸೋಂಕಿಗೆ ತುತ್ತಾದ ಗಂಗಾರಾಮ್‌ ಆಸ್ಪತ್ರೆಯ 37 ವೈದ್ಯರು| ಕೊರೋನಾ ಸೋಂಕಿನ ಸೌಮ್ಯ ಲಕ್ಷಣಗಳು 

ನವದೆಹಲಿ(ಏ.10): ಕೊರೋನಾ ವೈರಸ್‌ ಈಗ ದೆಹಲಿ ವೈದ್ಯರನ್ನೂ ಕಾಡತೊಡಗಿವೆ. ಏಮ್ಸ್‌ ಹಾಗೂ ಗಂಗಾರಾಮ್‌ ಆಸ್ಪತ್ರೆಯ 72 ವೈದ್ಯರಲ್ಲಿ ಕೊರೋನಾ ಸೋಂಕು ದೃಢವಾಗಿದೆ. ಇವರಲ್ಲಿ ಶ್ರೀಗಂಗಾರಾಮ್‌ ಆಸ್ಪತ್ರೆ 37 ಹಾಗೂ ಏಮ್ಸ್‌ ಆಸ್ಪತ್ರೆಯ 35 ವೈದ್ಯರಿದ್ದಾರೆ.

ಸೋಂಕಿಗೆ ತುತ್ತಾದ ಗಂಗಾರಾಮ್‌ ಆಸ್ಪತ್ರೆಯ 37 ವೈದ್ಯರು ಲಸಿಕೆಯನ್ನು ಪಡೆದುಕೊಂಡಿದ್ದರು. ಆದಾಗ್ಯೂ ಅವರಲ್ಲಿ ಕೊರೋನಾ ಸೋಂಕಿನ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿವೆ. ಹೀಗಾಗಿ 32 ವೈದ್ಯರು ಹೋಮ್‌ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ. ಐವರು ವೈದ್ಯರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏಮ್ಸ್‌ನಲ್ಲಿ ಸೋಂಕಿಗೆ ತುತ್ತಾದವರಲ್ಲಿ 6 ವೈದ್ಯರು ವಿದ್ಯಾರ್ಥಿಗಳಿದ್ದು, ಉಳಿದವರು ವೈದ್ಯರು.

ಇದೇ ವೇಳೆ ಕೊರೋನಾ ರೋಗಿಗಳ ಚಿಕಿತ್ಸೆಗೆ ಆದ್ಯತೆ ನೀಡುವ ನಿಟ್ಟಿನಿಂದ ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ಕೋವಿಡ್‌ ಹೊರತಾದ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.