Asianet Suvarna News Asianet Suvarna News

700 KG ತೂಕದ ದೈತ್ಯ ಎಮ್ಮೆಯೊಂದಿಗೆ ಹೋರಾಡಿ ಅಮ್ಮನ ಪ್ರಾಣ ಉಳಿಸಿ, ಉಸಿರು ಚೆಲ್ಲಿದ ಮಗ

ಯುವಕನೋರ್ವ ದೈತ್ಯ ಎಮ್ಮೆಯಿಂದ ಅಮ್ಮನ ಪ್ರಾಣ ಉಳಿಸಿದ್ದಾನೆ. ಆದ್ರೆ ಅಮ್ಮನ ಪ್ರಾಣ ಉಳಿಸಿದ ಮಗ ಸಾವನ್ನಪ್ಪಿದ್ದಾನೆ. ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಕಂಡು ಇಡೀ ಊರಿಗೆ ಊರು ಕಣ್ಣೀರು ಹಾಕಿದೆ. 

30 year old son-sacrifices-life-to-save-mother-from-attack buffalo in dungarpur rajasthan mrq
Author
First Published Aug 4, 2024, 11:21 AM IST | Last Updated Aug 4, 2024, 11:21 AM IST

ಜೈಪುರ: ರಾಜಸ್ಥಾನದ ಡುಂಗರಪುರ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಮಗನೋರ್ವ ತನ್ನ ಜೀವವನ್ನು ತ್ಯಾಗ ಮಾಡಿ ಅಮ್ಮನನ್ನು ಬದುಕಿಸಿದ್ದಾನೆ. 30 ವರ್ಷದ ಯುವಕ ಅಮ್ಮನನ್ನು ಉಳಿಸಲು ತನ್ನ ಪ್ರಾಣವನ್ನು ತ್ಯಾಗ ಮಾಡಿದ್ದಾನೆ. ತಾಯಿ ಮೇಲೆ ದಾಳಿ ಮಾಡಲು ಬರುತ್ತಿದ್ದ ಸುಮಾರು 700 ಕೆಜಿ ತೂಕದ ಎಮ್ಮೆಗೆ ಎದುರಾಗಿ ಹೋರಾಡಿದ್ದಾನೆ. ಈ ಹೋರಾಟದಲ್ಲಿ ಯುವಕನ ಪ್ರಾಣಪಕ್ಷಿ ಹಾರಿ ಹೋಗಿದೆ. ಗಾಯಗೊಂಡಿದ್ದ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

ಶನಿವಾರ ಸಂಜೆ ಈ ಘಟನೆ ನಡೆದಿದ್ದು, 30 ವರ್ಷದ ಸುರೇಂದ್ರ ಜನ್ಮ ಕೊಟ್ಟ ತಾಯಿಯಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ್ದಾನೆ.  ಸುರೇಂದ್ರ ತಾಯಿ ಆನಂದ ಕಂವರ್ ತಮ್ಮ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದರು. ಈ ವೇಳೆ ಓಡುತ್ತಾ ಬಂದ ದೈತ್ಯ ಎಮ್ಮೆಯೊಂದು ಆನಂದವರಿಗೆ ಡಿಕ್ಕಿ ಹೊಡೆದು ಬೀಳಿಸಿದೆ. ಅಲ್ಲಿಯೇ ಇದ್ದ ಸುರೇಂದ್ರ ಎಮ್ಮೆಯನ್ನು ತಡೆಯಲು ಪ್ರಯತ್ನಿಸಿದ್ದಾನೆ. ಎಮ್ಮೆಗೆ ಎದುರಾಗಿ ನಿಂತ ಸುರೇಂದ್ರ, ಜಾನುವಾರು ನಿಯಂತ್ರಣಕ್ಕೆ ತರಲು ಹೋರಾಡಿದ್ದಾರೆ. ಮದವೇರಿದ್ದ ಎಮ್ಮೆ ತನ್ನ ಕೊಂಬುಗಳಿಂದ ಗುದ್ದಿ ಸುರೇಂದ್ರ ದೇಹವನ್ನು ತುಂಡಾಗಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಸುರೇಂದ್ರ ಸ್ಥಳದಲ್ಲಿಯೇ ಮೃತನಾಗಿದ್ದಾನೆ. 

ಫಾತಿಮಾಳ 9 ವರ್ಷದ ಕೌಟುಂಬಿಕ ಸಂಸಾರ ಕೊಲೆಯಲ್ಲಿ ಅಂತ್ಯ; ಗಂಡನಿಂದಲೇ ಭೀಕರ ಹತ್ಯೆಯಾದ ಹೆಂಡತಿ!

ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸ್ಥಳೀಯವಾಗಿ ಹರಿದಾಡುತ್ತಿದೆ. ಕೃಷಿ ಜಮೀನಿನಲ್ಲಿ ದ್ದ ಯುವಕನೋರ್ವ ಈ ವಿಡಿಯೋವನ್ನು ಮಾಡಿದ್ದಾನೆ. ವಿಡಿಯೋದಲ್ಲಿ ಸುರೇಂದ್ರ ತನ್ನ ತಾಯಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರೋದನ್ನು ಗಮನಿಸಬಹುದು. ಆದರೆ ಕೋಪಗೊಂಡ ಎಮ್ಮೆ ಜೋರಾಗಿ ತಿವಿದಿದೆ. ಎಮ್ಮೆಯ ದಾಳಿಯನ್ನು ಕಂಡು ಸುತ್ತಮುತ್ತಲಿನ ಜಮೀನಿನ ಜನರು ಓಡಿ ಬಂದು ಎಮ್ಮೆಯನ್ನು ಅಲ್ಲಿಂದ ಓಡಿಸಿದ್ದಾರೆ. ಆದರೆ ಅಷ್ಟರಲ್ಲಿ ಸುರೇಂದ್ರ ಜೀವ ಹೋಗಿತ್ತು. ಆನಂತರ ಗಾಯಗೊಂಡಿದ್ದ ಆನಂದ ಕಂವರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರೇಂದ್ರನ ಧೈರ್ಯದ ಬಗ್ಗೆ ಗ್ರಾಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಮಗ ಅಂದ್ರೆ ಹೀಗಿರಬೇಕು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. 

ಆನಂದ ಕಂವರಾ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯದಲ್ಲಿ ಚೇತರಿಗೆ ಕಂಡು ಬಂದಿದೆ ಎಂದು ವೈದ್ಯರು ಹೇಳಿದ್ದಾರೆ. ಆದ್ರೆ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಕಂಡು ಇಡೀ ಊರು ಕಣ್ಣೀರು ಹಾಕುತ್ತಿದೆ. ಮಗ ಸುರೇಂದ್ರನೇ ತಾಯಿ ಜೊತೆ ಸೇರಿ ಕೃಷಿ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದನು. ನಾನು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದೇನೆ. ನಾಲ್ಕು ವರ್ಷಗಳ ಹಿಂದೆ ಮಗನ ಮದುವೆ ಮಾಡಿದ್ದೆ. ಆತನಿಗೆ ಮೂರು ವರ್ಷದ ಮಗಳಿದ್ದಾಳೆ. ಮಗನ ಸಾವಿನಿಂದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಇಂದು ಮಗನ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುತ್ತೇವೆ ಎಂದು ಸುರೇಂದ್ರನ ತಂದೆ ಹಿಮ್ಮತ್ ಸಿಂಗ್ ಹೇಳಿದ್ದಾರೆ.

ಕೊಳೆತ ಮಹಿಳೆ ಶವದ ಸುಳಿವು ನೀಡಿದ ಟ್ಯಾಟೂ... ಕೈ ಮೇಲಿದ್ದ ಹಚ್ಚೆ ನೀಡಿತ್ತು ಮಾಲೀಕನ ಗುರುತು!

Latest Videos
Follow Us:
Download App:
  • android
  • ios