ಬೀದಿನಾಯಿ ದಾಳಿ ಮಾಡಿದರೆ ಆಹಾರ ನೀಡುವವರೇ ಹೊಣೆ: ಸುಪ್ರೀಂಕೋರ್ಟ್
ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡಿದರೆ, ಅವುಗಳಿಗೆ ಆಹಾರ ನೀಡುವವರೇ ಹೊಣೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಬೀದಿನಾಯಿ ಸಮಸ್ಯೆಯನ್ನು ಪರಿಹರಿಸಲು ತರ್ಕಬದ್ಧ ಪರಿಹಾರವನ್ನು ಕಂಡುಹಿಡಿಯಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ನವದೆಹಲಿ: ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡಿದರೆ, ಅವುಗಳಿಗೆ ಆಹಾರ ನೀಡುವವರೇ ಹೊಣೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಬೀದಿನಾಯಿ ಸಮಸ್ಯೆಯನ್ನು ಪರಿಹರಿಸಲು ತರ್ಕಬದ್ಧ ಪರಿಹಾರವನ್ನು ಕಂಡುಹಿಡಿಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಒಂದು ವೇಳೆ ಬೀದಿನಾಯಿಗಳು ಜನರ ಮೇಲೆ ದಾಳಿ ಮಾಡಿದರೆ ಅವುಗಳಿಗೆ ಆಹಾರ ಹಾಕುವವರನ್ನು ಹೊಣೆಗಾರರನ್ನಾಗಿ ಮಾಡಬಹುದು ಎಂದು ಮಹತ್ವದ ಆದೇಶ ನೀಡಿದೆ. ಈ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಿದೆ.
ಬೀದಿನಾಯಿಗಳ ಹಾವಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ ಸುಪ್ರೀಂಕೋರ್ಟ್, ಬೀದಿ ನಾಯಿಗಳಿಗೆ ವಾಡಿಕೆಯಂತೆ ಆಹಾರ ನೀಡುವ ಜನರನ್ನು ಬೀದಿನಾಯಿಗಳಿಗೆ ಲಸಿಕೆ ಹಾಕಿಸಲು ಜವಾಬ್ದಾರರನ್ನಾಗಿ ಮಾಡಬಹುದು. ಜೊತೆಗೆ ನಾಯಿಗಳು ಜನರ ಮೇಲೆ ದಾಳಿ ಮಾಡಿದರೆ ಅದರಿಂದ ಉಂಟಾಗುವ ವೈದ್ಯಕೀಯ ವೆಚ್ಚವನ್ನು ಕೂಡ ಈ ಆಹಾರ ಹಾಕುವವರು ಭರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.
ಉಡುಪಿಯಲ್ಲಿ ಹೆಚ್ಚಿದ ಬೀದಿ ನಾಯಿಗಳ ಕಾಟ: ಬಾಲಕಿಯ ಮೇಲೆ ಅಟ್ಯಾಕ್
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆಕೆ ಮಹೇಶ್ವರಿ ಅವರಿದ್ದ ಸುಪ್ರೀಂಕೋರ್ಟ್ ಪೀಠ, ಜನರ ಸುರಕ್ಷತೆ ಮತ್ತು ಪ್ರಾಣಿಗಳ ಹಕ್ಕುಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು, ಜೊತೆಗೆ ಕೆಲವು ಪರಿಹಾರವನ್ನು ಕಂಡುಹಿಡಿಯಬೇಕು ಎಂದು ಹೇಳಿದೆ.
ನಮ್ಮಲ್ಲಿ ಹೆಚ್ಚಿನವರು ನಾಯಿ ಪ್ರಿಯರು. ನಾನು ನಾಯಿಗಳಿಗೆ ಆಹಾರ ನೀಡುತ್ತೇನೆ. ನನ್ನ ಮನಸ್ಸಿಗೆ ಏನೋ ಯೋಚನೆ ಬಂದಿತು. ಅದೆಂದರೆ ಜನರು ಬಯಸಿದರೆ ನಾಯಿಗಳನ್ನು ನೋಡಿಕೊಳ್ಳಲಿ ಆದರೆ ಅವುಗಳನ್ನು ಗುರುತಿಸಬೇಕು, ಚಿಪ್ ಮೂಲಕ ಟ್ರ್ಯಾಕ್ ಮಾಡುವುದಲ್ಲ, ನಾನು ಅದರ ಪರವಾಗಿ ಇಲ್ಲ ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು. ಬೀದಿನಾಯಿ ಸಮಸ್ಯೆಯನ್ನು ಪರಿಹರಿಸಲು ತರ್ಕಬದ್ಧ ಪರಿಹಾರವನ್ನು ಕಂಡುಹಿಡಿಯಬೇಕು ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಈ ವಿಷಯದಲ್ಲಿ ಉತ್ತರಗಳನ್ನು ಸಲ್ಲಿಸಲು ಕಕ್ಷಿದಾರರಿಗೆ ಹೇಳಿ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಿದೆ.
ಯುವಕನ ಸಂಗೀತಾ ಕಚೇರಿಗೆ ಬೆರಗಾದ ಬೀದಿ ನಾಯಿ: ವಿಡಿಯೋ ವೈರಲ್
ಭಾರತದಲ್ಲಿ 1.5 ಕೋಟಿ ನಾಯಿ ಕಡಿತ ಪ್ರಕರಣಗಳು
2019 ರಿಂದ ಭಾರತದಲ್ಲಿ 1.5 ಕೋಟಿಗೂ ಹೆಚ್ಚು ಜನರು ನಾಯಿಗಳಿಂದ ಕಡಿತಕ್ಕೊಳಗಾಗಿದ್ದಾರೆ ಎಂದು ದಾಖಲೆಗಳು ತೋರಿಸುತ್ತಿವೆ. ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಅಂದರೆ 27,52,218 ನಾಯಿ ಕಡಿತದ ಪ್ರಕರಣಗಳು ವರದಿ ಆಗಿವೆ. ನಂತರದ ಸ್ಥಾನದಲ್ಲಿ ತಮಿಳುನಾಡು ಇದ್ದು, ಇಲ್ಲಿ20,70,921 ಪ್ರಕರಣಗಳಾಗಿವೆ. ಮಹಾರಾಷ್ಟ್ರದಲ್ಲಿ 15,75,606 ಮತ್ತು ಪಶ್ಚಿಮ ಬಂಗಾಳ 12,09,332 ಪ್ರಕರಣಗಳು ದಾಖಲಾಗಿವೆ. ಇತ್ತ ಲಕ್ಷದ್ವೀಪದಲ್ಲಿ ಇದೇ ಅವಧಿಯಲ್ಲಿ ನಾಯಿ ಕಡಿತದ ಯಾವುದೇ ಪ್ರಕರಣ ದಾಖಲಾಗಿಲ್ಲ.
2019 ರಲ್ಲಿ 72,77,523 ಪ್ರಾಣಿ ಕಡಿತ ಪ್ರಕರಣಗಳು ದೇಶದಲ್ಲಿ ನಡೆದಿವೆ, 2020ರಲ್ಲಿ 46,33,493 ಪ್ರಕರಣ ದಾಖಲಾಗಿದ್ದವು, ಒಂದು ವರ್ಷದ ನಂತರ 2021ರಲ್ಲಿ 17,01,133 ಕ್ಕೆ ಇಳಿದಿದೆ. ಆದಾಗ್ಯೂ, 2022 ರ ಮೊದಲ ಏಳು ತಿಂಗಳುಗಳು ಕೇವಲ 14.5 ಲಕ್ಷ ಪ್ರಕರಣ ದಾಖಲಾಗಿದೆ. ಈ ವರ್ಷ ಅತಿ ಹೆಚ್ಚು ಪ್ರಕರಣಗಳು ತಮಿಳುನಾಡು (251,510) ಮತ್ತು ಮಹಾರಾಷ್ಟ್ರ (231,531) ದಲ್ಲಿ ದಾಖಲಾಗಿವೆ. ಭಾರತದಲ್ಲಿ ಪ್ರತಿ ವರ್ಷ 100 ಕ್ಕೂ ಹೆಚ್ಚು ಜನ ರೇಬೀಸ್ ಪ್ರಕರಣಗಳಿಂದ ಸಾವನ್ನಪ್ಪುತ್ತಿದ್ದಾರೆ.
ಆದಾಗ್ಯೂ, ಸಾಕು ನಾಯಿಗಳಿಗಿಂತ ಬೀದಿ ನಾಯಿಗಳಿಂದ ಕಡಿತಕ್ಕೊಳಗಾದವರೇ ಹೆಚ್ಚು, 2019 ರ ಎಣಿಕೆಯ ಪ್ರಕಾರ, ಭಾರತದಲ್ಲಿ 1,53,09,355 ಬೀದಿನಾಯಿಗಳಿವೆ, ಅದರಲ್ಲಿ ಅತೀ ಹೆಚ್ಚು ಬೀದಿನಾಯಿಗಳು ಇರುವುದು ಉತ್ತರ ಪ್ರದೇಶ ದಲ್ಲಿ (20,59,261), ನಂತರದ ಸ್ಥಾನದಲ್ಲಿ ಒಡಿಶಾ (17,34,399) ಮತ್ತು ಮಹಾರಾಷ್ಟ್ರದಲ್ಲಿ (12,76,399) ಅತಿ ಹೆಚ್ಚು ಬೀದಿ ನಾಯಿಗಳು ಕಂಡುಬರುತ್ತವೆ. ಆದರೆ ಮಣಿಪುರ, ಲಕ್ಷದ್ವೀಪ (Lakshadweep) ಮತ್ತು ದಾದ್ರಾ ಮತ್ತು ನಗರ್ ಹವೇಲಿಯಲ್ಲಿ (Nagar Haveli) ಬೀದಿ ನಾಯಿಗಳು ಇಲ್ಲವೇ ಇಲ್ಲ ಎಂದು ತಿಳಿದು ಬಂದಿದೆ.
ವಿಶೇಷವಾಗಿ ಕೇರಳ ಮತ್ತು ಮುಂಬೈನಲ್ಲಿ ಬೀದಿ ನಾಯಿಗಳನ್ನು ಕೊಲ್ಲುವ ಕುರಿತು ವಿವಿಧ ನಾಗರಿಕ ಸಂಸ್ಥೆಗಳು ಹೊರಡಿಸಿದ ಆದೇಶಗಳಿಗೆ ಸಂಬಂಧಿಸಿದ ವಿಷಯಗಳ ಕುರಿತಾದ ಅರ್ಜಿಗಳ ಗುಂಪನ್ನು ಅನ್ನು ಸುಪ್ರೀಂಕೋರ್ಟ್ (apex court) ವಿಚಾರಣೆ ನಡೆಸುತ್ತಿದೆ. ಕೆಲವು ಎನ್‌ಜಿಒಗಳು ಮತ್ತು ವೈಯಕ್ತಿಕ ಅರ್ಜಿದಾರರು ಬಾಂಬೆ ಹೈಕೋರ್ಟ್ ಮತ್ತು ಕೇರಳ ಹೈಕೋರ್ಟ್ ಸೇರಿದಂತೆ ಕೆಲವು ಹೈಕೋರ್ಟ್‌ಗಳ (high courts) ತೀರ್ಪುಗಳ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.