ಅನಂತನಾಗ್(ಜೂ.29): ಭಯೋತ್ಪಾದಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ಹತ್ತಿಕ್ಕಲು ಭಾರತೀಯ ಸೇನೆ ವಿಶೇಷ ಕಾರ್ಯಚರಣೆ ನಡೆಸುತ್ತಿದೆ. ಜಮ್ಮ ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಬಳಿಕ ಉಗ್ರರ ಚಟುವಟಿಕೆಗೆ ಬ್ರೇಕ್ ಬಿದ್ದಿದೆ. ಆದರೆ ಅಡಗುತಾಣಗಲ್ಲಿ ಉಗ್ರರು ವಿಧ್ವಂಸಕ ಕೃತ್ಯ ಎಸಗಲು ಪ್ಲಾನ್ ರೆಡಿ ಮಾಡುತ್ತಿದ್ದಾರೆ. ಖಚಿತ ಮಾಹಿತಿ ಪಡೆದು ದಾಳಿ ಮಾಡಿದ ಸೇನೆ ಮೂವರು ಉಗ್ರರನ್ನು ಹತ್ಯೆ ಮಾಡಿದೆ.

ಪುಲ್ವಾಮದಲ್ಲಿ ಮೂವರು ಉಗ್ರರ ಹತ್ಯೆ, ತಪ್ಪಿತು ಮತ್ತೊಂದು ದುರಂತ!

ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಕಾರ್ಯಚರಣೆಯಲ್ಲಿ ಉಗ್ರರ ಸದೆಬಡಿಯಲಾಗಿದೆ. ಉಗ್ರರ ಮಾಹಿತಿ ಪಡೆದ ಸೇನೆ ಸರ್ಚ್ ಆಪರೇಶನ್ ನಡೆಸಿತು. ಈ ವೇಳೆ ಅಡಗಿದ್ದ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿ ದಾಳಿ ನಡೆಸಿದ ಭಾರತೀಯ ಸೇನೆ ಮೂವರು ಉಗ್ರರನ್ನು ಹತ್ಯೆ ಮಾಡಿದೆ. ಹತ್ಯೆಯಾದ ಉಗ್ರರಿಂದ A-47 ರೈಫಲ್ ಹಾಗೂ 2 ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.

ಗಲ್ವಾನ್ ಆಯ್ತು, ಈಗ ಮತ್ತೊಂದು ಗಡಿಯಲ್ಲಿ ಚೀನಾ ಕ್ಯಾತೆ..!..

ಹತ್ಯೆಯಾದ ಉಗ್ರರ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಸೇನೆ ಮಾಹಿತಿ ಸಂಗ್ರಹಿಸುತ್ತಿದೆ.  ಮತ್ತಷ್ಟು ಉಗ್ರರು ಅಡಗಿರುವ ಶಂಕೆ ಮೇಲೆ ಸೇನೆ ಸರ್ಚ್ ಆಪರೇಶನ್ ಮುಂದುವರಿಸಿದೆ.