Asianet Suvarna News Asianet Suvarna News

ಪಾಕ್ ಅಪ್ರಚೋದಿತ ದಾಳಿ: ಈ ವಾರ ಮನೆಗೆ ಬರಲಿದ್ದವನೂ ಸೇರಿ 3 ಯೋಧರು ಹುತಾತ್ಮ

ಪಾಕಿಸ್ತಾನದ ಅಪ್ರಚೋದಿತ ದಾಳಿಗೆ 3 ಯೋಧರು ಹುತಾತ್ಮ | ಈ ವಾರ ಮನೆಗೆ ಬರಬೇಕಿದ್ದ ಯೋಧ ಸಾವು |

3 soldiers killed 5 injured in Pak firing along LoC dpl
Author
Bangalore, First Published Oct 2, 2020, 10:45 AM IST

ಶ್ರೀನಗರ(ಅ.02): ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಭಾರತದ ಮೂವರು ಯೋಧರು ಹುತಾತ್ಮರಾಗಿದ್ದರು, 5 ಜನ ಯೋಧರು ಗಾಯಗೊಂಡಿದ್ದಾರೆ.

ಜಮ್ಮುವಿನ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಸಮೀಪ ಪಾಕ್‌ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿವೆ. ಗುರುವಾರ ಬೆಳಿಗ್ಗೆ ಜಮ್ಮು ಕಾಶ್ಮೀರದ ನೌಗಾಂವ್‌ ವಲಯದಲ್ಲಿ, ಲಘು ಫಿರಂಗಿ ಹಾಗೂ ಇನ್ನಿತರ ಶಸ್ತ್ರಾಸ್ತ್ರ ಬಳಸಿ ಪಾಕಿಸ್ತಾನ ಸೇನೆ ದಾಳಿ ನಡೆಸಿದೆ.

971 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ನೂತನ ಸಂಸತ್‌ ಭವನ: ಕಾಮಗಾರಿಗೆ ಚಾಲನೆ

ಉತ್ತರ ಕಾಶ್ಮೀರದ ಕುಪ್ವಾರಾ ಸೆಕ್ಟರ್‌ನಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಇನ್ನೊಬ್ಬ ಯೋಧ ಪೂಂಚ್ ಜಿಲ್ಲೆಯ  ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಹುತಾತ್ಮರಾಗಿದ್ದಾರೆ.  15 ಸಿಖ್ಲಿಯ ಹವಿಲ್ದಾರ್ ಕುಲ್‌ದೀಪ್‌ಸಿಂಗ್ ಹಾಗೂ ರೈಪಲ್‌ಮ್ಯಾನ್ ಶುಭಂ ಶರ್ಮಾ ಹುತಾತ್ಮರಾಗಿದ್ದಾರೆ.

ಬುಧವಾರ ರಾತ್ರಿ ಕೃಷ್ಣ ಘಾಟಿ ಸೆಕ್ಟರ್‌ನ ಲೇನ್ಸ್ ನಾಯ್ಕ್ ಕರ್ನೈಲ್ ಸಿಂಗ್ ಹುತಾತ್ಮರಾಗಿದ್ದು, ರೈಫಲ್ಮ್ಯಾನ್ ವಿರೇಂದರ್ ಸಿಂಗ್ ಗಾಯಗೊಂಡಿದ್ದರು. ಇಬ್ಬರೂ ಗಾಯಗೊಂಡಿದ್ದು, ಇಬ್ಬರನ್ನು ಹೆಲಿಕಾಪ್ಟರ್‌ ಮೂಲಕ ರಾಜೌರಿಗೆ ಕರೆತರಲಾಗಿತ್ತು. ಒಬ್ಬರು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಹುತಾತ್ಮರಾಗಿದ್ದಾರೆ.

Fact Check: ದೇಶವನ್ನೇ ಬೆಚ್ಚಿ ಬೀಳಿಸಿರುವ ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಈಕೆನಾ?

ಕರ್ನೈಲ್ ಸಿಂಗ್ ಪಂಜಾಬ್‌ನ ಸಂಘ್‌ರೂರ್ ಜಿಲ್ಲೆಯ ಲೋಹಾ ಖೇಡಾದವರು. ಈ ವಾರ ಅವರು ರಜೆಯ ಮೇಲೆ ಮನೆಗೆ ಬರುವವರಿದ್ದರು. ಇವರಿಗೆ ಪತ್ನಿ, ಪುಟ್ಟ ಮಗು, ವಯಸ್ಸಾದ ತಂದೆ ತಾಯಿ ಹಾಗೂ ಸಹೋದರ ಸಹೋದರಿಯರಿದ್ದಾರೆ.

ಮೂವರು ಹುತಾತ್ಮರಾಗಿದ್ದು, ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ ಎಂದು ಶ್ರೀನಗರದ ರಕ್ಷಣಾ ವಕ್ತಾರ ಕರ್ನಲ್‌ ರಾಜೇಶ್‌ ಕಲಿಯಾ ಹೇಳಿದ್ದಾರೆ. ಇದೇ ವೇಳೆ ಪಾಕ್‌ ದಾಳಿಗೆ ತೀಕ್ಷ$್ಣ ಪ್ರತ್ಯುತ್ತರ ನೀಡಲಾಗಿದೆ.

Follow Us:
Download App:
  • android
  • ios