ಗಣರಾಜ್ಯೋತ್ಸವ ಆಚರಣೆ ಬೆನ್ನಲ್ಲೇ ಮಣಿಪುರದ ಉಖ್ರುಲ್‌ನಲ್ಲಿ ಬಾಂಬ್ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.  

ಮಣಿಪುರ(ಜ.25): ಭಾರತದ ಗಣರಾಜ್ಯೋತ್ಸವ ಸಂಭ್ರಮ ಕೆಡಿಸಲು ಭಯೋತ್ಪಾದಕ ಸಂಘಟನೆಗಳು ಸಿದ್ಧತೆ ನಡೆಸಿರುವ ಕುರಿತು ಈಗಾಗಲೇ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಇತ್ತ ಭದ್ರತಾ ಪಡೆಗಳು ದೆಹಲಿ ಸೇರಿದಂತೆ ಕೆಲ ಭಾಗದಲ್ಲಿ ಶಂಕಿತ ಭಯೋತ್ಪಾದಕರನ್ನು ಬಂಧಿಸಿದೆ. ಇದೀಗ ಗಣರಾಜ್ಯೋತ್ಸವಕ್ಕೂ ಒಂದು ದಿನ ಮೊದಲು ಮಣಿಪುರದ ಉಖ್ರುಲ್‌ನಲ್ಲಿ ಬಾಂಬ್ ಸ್ಫೋಟಗೊಂಡು ಹಲವರು ಗಾಯಗೊಂಡಿದ್ದಾರೆ. ಉಖ್ರುಲ್ ಪ್ರದೇಶವನ್ನು ಮಣಿಪುರ ಪೊಲೀಸ್ ಹಾಗೂ ಭಾರತೀಯ ಸೇನೆ ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಸ್ಫೋಟದ ತೀವ್ರತೆಗೆ ಮೂವರು ಗಂಭೀರ ಗಾಯಗೊಂಡಿದ್ದಾರೆ. ಮತ್ತೆ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಭೇಟಿ ನೀಡಿರುವ ಉಖ್ರುಲ್ ಎಸ್‌ಪಿ ನಿಂಗೇಶಮ್ ವಶುಮ್, ಇದೀಗ ಕಾರ್ಯಾಚರಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇದುವರಿಗೆ ಯಾವುದೇ ಸಂಘಟನೆಗಳು ಈ ಘಟನೆಯ ಹೊಣೆ ಹೊತ್ತುಕೊಂಡಿಲ್ಲ. ಉಖ್ರುಲ್ ಪ್ರದೇಶ ಸುತ್ತುವರಿಯಲಾಗಿದೆ. ಭದ್ರತಾ ಪಡೆಗಳು ಹಾಗೂ ಪೊಲೀಸ್ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ. 

ಅಲ್‌ಖೈದಾ ನಂಟು: 2 ಶಂಕಿತ ಉಗ್ರರ ವಿರುದ್ಧ ಚಾರ್ಜ್‌ಶೀಟ್‌

ಗಣರಾಜ್ಯೋತ್ಸವ ದಿನಾಚರಣೆ ಹಿನ್ನಲೆಯಲ್ಲಿ ದಾಳಿಗಳಾಗುವ ಸಾಧ್ಯತೆಯನ್ನು ಭಾರತೀಯ ಗುಪ್ತಚರ ಇಲಾಖೆ ಸೂಚಿಸಿತ್ತು. ಇದರ ಪರಿಮಾಣ ದೇಶದ ಪ್ರಮುಖ ನಗರ, ಪಟ್ಟಣ ಹಾಗೂ ಗಡಿ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಭದ್ರತಾ ಪಡೆ ಹದ್ದಿನ ಕಣ್ಣಿಟ್ಟಿದೆ. ಇದರ ಬೆನ್ನಲ್ಲೇ ಇತ್ತೀಚೆೆಗೆ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು.

ಗಣ​ರಾ​ಜ್ಯೋ​ತ್ಸ​ವಕ್ಕೆ ಕೆಲವು ದಿನ​ಗಳು ಬಾಕಿ ಇರು​ವಂತೆಯೇ ಇಬ್ಬರು ಉಗ್ರ​ರ​ನ್ನು ದೆಹಲಿ ಪೊಲೀ​ಸರು ಶುಕ್ರ​ವಾರ ಬಂಧಿ​ಸಿ​ದ್ದರು. ಇವ​ರಿ​ಬ್ಬರು ಕೆನಡಾದಲ್ಲಿ​ರುವ ಪಂಜಾಬ್‌ ಮೂಲದ ಉಗ್ರ ಲಖ್ಬೀರ್‌ ಸಿಂಗ್‌ ಲಂಡಾನ ಸಹಾ​ಯ​ಕ​ರಾ​ಗಿ​ದ್ದರು ಎಂದು ಪೊಲೀ​ಸರು ತಿಳಿ​ಸಿ​ದ್ದಾರೆ.ಈ ಇಬ್ಬರು ಪಂಜಾ​ಬ್‌ನ ನಿವಾ​ಸಿ​ಗ​ಳಾ​ಗಿದ್ದು, ಇವ​ರನ್ನು ರಜನ್‌ ಭಾಟಿ ಮತ್ತು ಕನ್ವಾ​ಲ್‌​ಜೀತ್‌ ಸಿಂಗ್‌ ಎಂದು ಗುರು​ತಿ​ಸ​ಲಾ​ಗಿದೆ. ದೇಶ​ದಲ್ಲಿ ಸಕ್ರಿ​ಯ​ವಾ​ಗಿ​ರುವ ಖಲಿ​ಸ್ತಾನಿ ಉಗ್ರರ ವಿರುದ್ಧ ನಡೆ​ಸ​ಲಾ​ಗು​ತ್ತಿ​ರುವ ಕಾರ್ಯಾ​ಚ​ರ​ಣೆಯ ಭಾಗ​ವಾಗಿ ಇವ​ರನ್ನು ಬಂಧಿ​ಸ​ಲಾ​ಗಿದೆ. ಭಟ್ಟಿ, ಪಂಜಾ​ಬ್‌ನ ಕುಖ್ಯಾತ ಗ್ಯಾಂಗ್‌​ಸ್ಟರ್‌ ಆಗಿದ್ದಾನೆ. ಸಿಂಗ್‌, ಉಗ್ರ ಲಂಡಾ ಹರಿ​ಕೆಯ ಆಪ್ತ​ನಾ​ಗಿ​ದ್ದಾನೆ. ಇವರ ವಿರುದ್ಧ ಕೊಲೆ ಪ್ರಕ​ರ​ಣ​ದಲ್ಲಿ ಎಫ್‌​ಐ​ಆರ್‌ ದಾಖ​ಲಿ​ಸ​ಲಾ​ಗಿತ್ತು ಎಂದು ಪೊಲೀ​ಸರು ತಿಳಿ​ಸಿ​ದ್ದಾರೆ.

ಹಿಂದು ನಾಯಕರ ಹತ್ಯೆ ಗುರಿ: ಬಾಲಕನ ಹತ್ಯೆ ಮಾಡಿ ಸ್ಯಾಂಪಲ್ ತೋರಿಸಿದ ಹಂತಕರು

ಕಾಶ್ಮೀರದಲ್ಲಿ ಎನ್‌ಕೌಂಟರ್‌ಗೆ ಇಬ್ಬರು ಲಷ್ಕರ್‌ ಉಗ್ರರು ಬಲಿ
ಜಮ್ಮು-ಕಾಶ್ಮಿರದ ಬದ್ಗಾಮ್‌ ಜಿಲ್ಲೆಯ ಕೋರ್ಚ್‌ ಬಳಿ ರಕ್ಷಣಾ ಸಿಬ್ಬಂದಿಗಳು ನಡೆಸಿದ ಶೂಟೌಟ್‌ಗೆ ಇಬ್ಬರು ಲಷ್ಕರ್‌ ಎ ತೊಯ್ಬಾ ಉಗ್ರರು ಬಲಿಯಾಗಿದ್ದಾರೆ. ಬದ್ಗಾಮ್‌ನಲ್ಲಿ ಭಯೋತ್ಪಾದಕರ ಚಲನವಲನಗಳ ಬಗ್ಗೆ ಕಣ್ಣಿಟ್ಟಿದ್ದ ಸೇನೆ ಮತ್ತು ಪೊಲೀಸ್‌ ಸಿಬ್ಬಂದಿಗಳು ಕೋರ್ಚ್‌ ಬಳಿ ವಾಹನವೊಂದನ್ನು ತಡೆಯಲು ಪ್ರಯತ್ನಿಸಿದಾಗ ಅದರಲ್ಲಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿದಾಳಿಯಲ್ಲಿ ಪುಲ್ವಾಮ ಜಿಲ್ಲೆಯ ಅರ್ಬಜ್‌ ಮಿರ್‌ ಮತ್ತು ಶಾಹಿದ್‌ ಶೇಖ್‌ ಎಂಬ ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರೂ ಲಷ್ಕರ್‌-ಎ- ತೊಯ್ಬಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದರು. ಅವರ ಬಳಿ ಇದ್ದ ಏಕೆ ರೈಫಲ್‌ ಮತ್ತು ಪಿಸ್ತೂಲ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.