Asianet Suvarna News Asianet Suvarna News

ಹಿಂದು ನಾಯಕರ ಹತ್ಯೆ ಗುರಿ: ಬಾಲಕನ ಹತ್ಯೆ ಮಾಡಿ ಸ್ಯಾಂಪಲ್ ತೋರಿಸಿದ ಹಂತಕರು

ಕಳೆದ ವರ್ಷ ಡಿಸೆಂಬರ್‌ 21ರಂದು ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ನಡೆದಿದ್ದ ಬಾಲಕನ ಹತ್ಯೆ ಪ್ರಕರಣ ಬಂಧಿತ ಜಗಜೀತ್‌ ಸಿಂಗ್‌ ಅಲಿಯಾಸ್‌ ಯಾಕೂಬ್‌ ಮತ್ತು ನೌಶಾದ್‌ಗೆ ಪಾಕಿಸ್ತಾನದ ಮೂಲ ಉಗ್ರ ಸಂಘಟನೆ ನಂಟಿತ್ತು.

Delhi Jahangirpuri little boy murder case, killers targeting Hindu leaders, investigation akb
Author
First Published Jan 16, 2023, 7:27 AM IST

ನವದೆಹಲಿ: ಕಳೆದ ವರ್ಷ ಡಿಸೆಂಬರ್‌ 21ರಂದು ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ನಡೆದಿದ್ದ ಬಾಲಕನ ಹತ್ಯೆ ಪ್ರಕರಣ ಬಂಧಿತ ಜಗಜೀತ್‌ ಸಿಂಗ್‌ ಅಲಿಯಾಸ್‌ ಯಾಕೂಬ್‌ ಮತ್ತು ನೌಶಾದ್‌ಗೆ ಪಾಕಿಸ್ತಾನದ ಮೂಲ ಉಗ್ರ ಸಂಘಟನೆ ನಂಟಿತ್ತು. ಜೊತೆಗೆ ದೊಡ್ಡ ಹಿಂದೂ ನಾಯಕರನ್ನು ಹತ್ಯೆ ಮಾಡುವಂತೆ ಉಗ್ರ ಸಂಘಟನೆಯ ಬಾಸ್‌ಗಳು ಇವರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಾಲಕನ ಹತ್ಯೆ ಮಾಡುವ ಮೂಲಕ ಪಾಕಿಸ್ತಾನದಲ್ಲಿರುವ ಬಾಸ್‌ಗಳಿಗೆ ತಮ್ಮ ಸಾಮರ್ಥ್ಯದ ಕುರಿತು ಸಂದೇಶ ರವಾನಿಸುವ ಕೆಲಸವನ್ನೂ ಇಬ್ಬರೂ ಮಾಡಿದ್ದರು’ ಎಂಬ ಸ್ಫೋಟಕ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಬಂಧಿತ ನೌಶಾದ್‌ (Naushad) ಈ ಹಿಂದೆ ಪ್ರಕರಣವೊಂದರ ಸಂಬಂಧ ದೆಹಲಿಯ ತಿಹಾರ್‌ ಜೈಲು ಸೇರಿದ್ದ. ಜೈಲು ಸೇರುವ ಮುನ್ನವೇ ಈತನಿಗೆ ಪಾಕ್‌ ಮೂಲದ (Pakistan-based militant) ಹರ್ಕತ್‌ ಅಲ್‌ ಅನ್ಸಾರ್‌ (Harkat Al Ansar.) ಎಂಬ ಉಗ್ರ ಸಂಘಟನೆ ಜೊತೆ ನಂಟಿತ್ತು. ಜೊತೆಗೆ ತಿಹಾರ್‌ ಜೈಲು (Tihar Jail) ಸೇರಿದ ಮೇಲೆ ಅಲ್ಲಿ ಆತನಿಗೆ ಕೆಂಪುಕೋಟೆ ದಾಳಿ ಪ್ರಕರಣದಲ್ಲಿ ಬಂಧಿತ ಆರಿಫ್‌ ಮೊಹಮ್ಮದ್‌ ಮತ್ತು ಸೋಹಿಲ್‌ ಎಂಬ ಮತ್ತೊಬ್ಬ ಉಗ್ರನ ಸ್ನೇಹ ಬೆಳೆದಿತ್ತು. ಸೋಹಿಲ್‌ 2018ರಲ್ಲಿ ಬಿಡುಗಡೆಯಾದ ಬಳಿಕ ಪಾಕಿಸ್ತಾನಕ್ಕೆ ತೆರಳಿ ಲಷ್ಕರ್‌ ಎ ತೊಯ್ದಾ ಸಂಘಟನೆ ಸೇರಿದ್ದ. ಜೈಲಿಂದ ಬಿಡುಗಡೆಯಾದ ಬಳಿಕ ನೌಶಾದ್‌ ಸೋಹಿಲ್‌ ಜೊತೆ ಸಂಪರ್ಕದಲ್ಲಿದ್ದ. ಇಂಥ ಮಾತುಕತೆಯ ವೇಳೆಯೇ ಭಾರತದಲ್ಲಿ ದೊಡ್ಡ ದೊಡ್ಡ ಹಿಂದೂ ನಾಯಕರ ಹತ್ಯೆ ಮಾಡಿ, ಅದರ ವಿಡಿಯೋಗಳನ್ನು ತನಗೆ ಕಳುಹಿಸುವಂತೆ ನೌಶಾದ್‌ಗೆ ಸೋಹಿಲ್‌ ಸೂಚಿಸಿದ್ದ ಎಂದು ಗೊತ್ತಾಗಿದೆ.

ಸೋಶಿಯಲ್ ಮೀಡಿಯಾ ಗುದ್ದಾಟ; ಕ್ಷುಲ್ಲಕ ಕಾರಣಕ್ಕೆ ಬಾಲಕ ಕೊಲೆಯಾದ

ಈ ಸೂಚನೆ ಅನ್ವಯ ನೌಶಾದ್‌, ಯಾಕೂಬ್‌ (agjeet Singh alias Yakub) ಜೊತೆ ಸೇರಿಕೊಂಡು ಹಿಂದೂ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ. ಆದರೆ ಅದಕ್ಕೂ ಮುನ್ನ ಪಾಕ್‌ನಲ್ಲಿನ ತಮ್ಮ ನಾಯಕರಿಗೆ ತಮ್ಮ ಹತ್ಯೆಯ ಸಾಮರ್ಥ್ಯವನ್ನು ಸಾಬೀತುಪಡಿಸುವ ಸಲವಾಗಿ ಡಿ.21ರಂದು ಹಿಂದೂ ವ್ಯಕ್ತಿಯ ಹತ್ಯೆಗೆ ಯೋಜಿಸಿದ್ದರು. ಅದರಂತೆ ಕೈಮೇಲೆ ತ್ರಿಶೂಲದ ಹಚ್ಚೆ ಹಾಕಿಸಿಕೊಂಡಿದ್ದ ಬಾಲಕನೊಬ್ಬನನ್ನು ತಮ್ಮ ಮನೆಗೆ ಕರೆತಂದು ಹತ್ಯೆ ಮಾಡಿ ಬಳಿಕ ದೇಹವನ್ನು 8 ತುಂಡುಗಳಾಗಿ ಮಾಡಿ ದೆಹಲಿಯ ವಿವಿಧ ಭಾಗಗಳಲ್ಲಿ ಎಸೆದಿದ್ದರು. ಜೊತೆಗೆ ಈ ಹತ್ಯೆಯ ವಿಡಿಯೋ ಮಾಡಿ ಅದನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದರು ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.

Kodagu: ಹಿಂದೂ ಧರ್ಮ ವಿರೋಧಿ ಪುಸ್ತಕ ಮಾರಾಟ ಯತ್ನ: ಓರ್ವನ ಬಂಧನ

ಪ್ರಕರಣ ಕುರಿತು ತನಿಖೆ ನಡೆಸಿದ್ದ ಪೊಲೀಸರು ಹತ್ಯೆಯಾದ ಬಾಲಕನ ದೇಹದ ಎಲ್ಲಾ ತುಂಡುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಆರೋಪಿಗಳ ಮನೆಯಿಂದ 2 ಹ್ಯಾಂಡ್‌ ಗ್ರೆನೇಡ್‌, 2 ಪಿಸ್ತೂಲ್‌, 22 ಬುಲೆಟ್‌ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಮನೆಯಲ್ಲಿ ರಕ್ತದ ಕಲೆಗಳನ್ನೂ ವಿಧಿವಿಜ್ಞಾನ ತಜ್ಞರು ಪತ್ತೆ ಮಾಡಿದ್ದಾರೆ.

Follow Us:
Download App:
  • android
  • ios