ನವದೆಹಲಿ(ಜು.12): ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಭಯೋತ್ಪಾದಕ ಶಿಬಿರಗಳು ಉಗ್ರರಿಂದ ಸಂಪೂರ್ಣ ಭರ್ತಿಯಾಗಿದ್ದು, ಸುಮಾರು 300 ಉಗ್ರರು ಭಾರತಕ್ಕೆ ಒಳನುಸುಳಲು ಕಾಯುತ್ತಿದ್ದಾರೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ಉಗ್ರರ ಗುಂಡಿನ ದಾಳಿ ನಡುವೆ ಭಾರತೀಯ ಯೋಧನ ಕೈಯ್ಯಲ್ಲಿ ಸುರಕ್ಷಿತ ಈ ಕಂದ!

ಸ್ವತಃ ಕೊರೋನಾದಿಂದ ನಲುಗುತ್ತಿದ್ದರೂ ಪಾಕಿಸ್ತಾನ ಭಯೋತ್ಪಾದಕ ಚಟುವಟಿಕೆಯನ್ನು ನಿಲ್ಲಿಸಿಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಭಯೋತ್ಪಾದಕರ ಲಾಂಚ್‌ಪ್ಯಾಡ್‌ಗಳು ತುಂಬಿ ಹೋಗಿವೆ. ನಮ್ಮ ಅಂದಾಜಿನ ಪ್ರಕಾರ 250ರಿಂದ 300 ಉಗ್ರರು ಸದ್ಯ ಒಳನುಸುಳುವಿಕೆಗೆ ಕಾಯುತ್ತಿದ್ದಾರೆ ಎಂದು ಬಾರಾಮುಲ್ಲಾದ 19ನೇ ಇನ್‌ಫೆಂಟ್ರಿ ವಿಭಾಗದ ಮೇಜರ್‌ ಜನರಲ್‌ ವೀರೇಂದ್ರ ವ್ಯಾಟ್ಸ್‌ ಅವರು ತಿಳಿಸಿದ್ದಾರೆ.

ಗಡಿ ನಿಯಂತ್ರಣ ರೇಖೆ ಬಳಿ ಭಾರತಕ್ಕೆ ಒಳನುಸುಳಲು ಯತ್ನಿಸಿದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಶನಿವಾರ ಹೊಡೆದುರುಳಿಸಿದ ಬೆನ್ನಲ್ಲೇ ಈ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.