ಶ್ರೀನಗರ(ಜು.01): ಜಮ್ಮು ಕಾಶ್ಮೀರದ ಸೋಪೋರ್‌ನಲ್ಲಿ ಸಿಆರ್‌ಪಿಎಫ್‌ ತಂಡದ ಮೇಲೆ ಉಗ್ರರಿಂದ ನಡೆದ ಗುಮಡಿನ ದಾಳಿಯಲ್ಲಿ ಓರ್ವ ಯೋಧ ಹಾಗೂ ಓರ್ವ ಸ್ಥಳೀಯ ವ್ಯಕ್ತಿ ಮೃತಪಟ್ಟಿದ್ದಾರೆ. ಹೀಗಿರುವಾಗ ಯೋಧನೊಬ್ಬ ಪುಟ್ಟ ಕಂದನ್ನನು ಎತ್ತಿಕೊಂಡಿರುವ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. 

ಉಗ್ರರು ನಡೆಸಿದ್ದ ದಾಲಿಗೆ ಓರ್ವ ಯೋಧ ಹಾಗೂ ಓರ್ವ ಸ್ಥಳೀಯ ನಿವಾಸಿ ಬಲಿಯಾಗದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ. ಗುಂಡಿನ ದಾಳಿಯಿಂದ ಕಾಪಾಡಲು ಸೈನಿಕ ಆ ಪುಟ್ಟ ಬಾಲಕನನ್ನು ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ಫೋಟೋ ಇದಾಗಿದೆ.

ಉಗ್ರರು ನಡೆಸಿದ ಗುಂಡಿನ ದಾಳಿ ನಡುವೆ ವೈರಲ್ ಆದ ಈ ಫೋಟೋದಲ್ಲಿ ಸೈನಿಕ ಆ ಪುಟ್ಟ ಕಂದನೊಂದಿಗೆ ಮಾತನಾಡುತ್ತಾ, ಆತನನ್ನು ಸಮಾಧಾನ ಪಡಿಸುತ್ತಾ ಕರೆದೊಯ್ಯುತ್ತಿರುವುದು ಸ್ಪಷ್ಟವಾಗಿದೆ. ಸೈನಿಕನ ಕೈಯ್ಯಲ್ಲಿರುವ ಆ ಕಂದನ ಮುಖದಲ್ಲಿರುವ ಮುಗ್ಧತೆ ಹಾಗೂ ಧೈರ್ಯ ತುಂಬಿಇ ಆತನನ್ನು ರಕ್ಷಿಸಿರುವ ಯೋಧನ ಫೋಟೋ ಎಲ್ಲರ ಮನ ಗೆದ್ದಿದೆ. 

ಕೆಲ ದಿನಗಳ ಹಿಂದಷ್ಟೇ ಬಿಜ್‌ಬೆಹರಾದಲ್ಲಿ ಉಗ್ರರು ನಡೆಸಿದ್ದ ದಾಳಿಯಲ್ಲಿ ಸಿಆರ್‌ಪಿಎಫ್‌ನ ಓರ್ವ ಯೋಧ ಹಾಗೂ ಐದು ವರ್ಷದ ಮಗು ಮೃತಪಟ್ಟಿದ್ದರು. ಇತ್ತೀಚೆಗೆ ಉಗ್ರರು ಸ್ಥಳೀಯರನ್ನೂ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸುತ್ತಿದ್ದು, ಅಪಾರ ಪ್ರಾಣ ಹಾನಿ ಸಂಭವಿಸುತ್ತಿದೆ.

ಅಜ್ಜನೊಂದಿಗೆ ಹಾಲು ಬಿಸ್ಕೆಟ್ ತರಲು ತೆರಳಿದ್ದ ವೇಳೆ ದಾಳಿ

ಯೋಧನ ಕೈಯ್ಯಲ್ಲಿರುವ ಮೂರು ವರ್ಷದ ಈ ಕಂದ ತನ್ನ ಅಜ್ಜನೊಂದಿಗೆ ಹಾಲು ಹಾಗೂ ಬಿಸ್ಕೆಟ್ ತರಲು ಅಂಗಡಿಗೆ ತೆರಳಿದ್ದ. ಇದೇ ವೇಳೆ ಸಿಆರ್‌ಪಿಎಫ್‌ ತಂಡದ ಮೇಲೆ ಉಗ್ರರು ಗಿಮಡಿನ ದಾಳಿ ನಡೆಸಿದ್ದರು. ಇದರಲ್ಲಿ ಒಂದು ಗುಂಡು ಈ ವ್ಯಕ್ತಿಗೆ ತಗುಲಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತನ್ನ ಅಜ್ಜ ಏಳದೇ ಇದ್ದಾಗ ಪುಟ್ಟ ಕಂದ ಅವರ ಮೇಲೆ ಕುಳಿತು ಎಬಬ್ಬಿಸಲು ಯತ್ನಿಸಿದ್ದಾನೆ. ಅಷ್ಟರಲ್ಲೇ ಯೋಧನೊಬ್ಬ ಈ ಪುಟ್ಟ ಬಾಲಕನ್ನು ಗಮನಿಸಿ ಕೂಡಲೇ ತನ್ನ ಬಳಿ ಕರೆದಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳೂ ಸದ್ಯ ವೈರಲ್ ಆಗುತ್ತಿವೆ. 

ತಿಂದ ಅರ್ಧ ಬಿಸ್ಕೆಟ್, ರಕ್ತದ ಕಲೆಯಿಂದ ತುಂಬಿದ ಶರ್ಟ್ ಹಾಗೂ ಕಣ್ಣೀರು

ಭದ್ರತಾ ಸಿಬ್ಬಂದಿ ಆ ಬಾಲಕನನ್ಉ ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿಯ್ದು, ತಮ್ಮ ವಾಹನದಲ್ಲಿ ಕುಳ್ಳಿರಿಸಿದ್ದಾರೆ. ಬಾಲಕ ರಕ್ತದಿಂದ ಕೂಡಿದ ಬಟ್ಟೆ ಧರಿಸಿದ್ದು, ತನ್ನ ಕೈಯ್ಯಲ್ಲಿ ಅರ್ಧ ತಿಂದ ಬಿಸ್ಕೆಟ್ ಪ್ಯಾಕೇಟ್ ಹಿಡಿದು ಅಳುತ್ತಾ ಕುಳಿತಿರುವ ಫೋಟೋ ಸದ್ಯ ಎಲ್ಲರನ್ನೂ ಭಾವುಕರನ್ನಾಗಿಸಿದೆ.