ಶ್ರೀಗಂಗಾ ರಾಮ್ ಆಸ್ಪತ್ರೆಯಲ್ಲಿ 24 ಗಂಟೆಯಲ್ಲಿ 25 ಸಾವು | 60 ಕೊರೋನಾ ರೋಗಿಗಳು ಅಪಾಯದಲ್ಲಿ | ಅಸಲಿಗೆ ಆಗಿದ್ದೇನು ? ಈ ಬಗ್ಗೆ ಆಸ್ಪತ್ರೆ ವೈದ್ಯರು ಏನಂತಾರೆ ?

ದೆಹಲಿ(ಏ.23): ಕಳೆದ 24 ಗಂಟೆಗಳಲ್ಲಿ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ 25 COVID-19 ರೋಗಿಗಳು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗಿದೆ. ವರದಿಗಳ ಪ್ರಕಾರ, ಆಮ್ಲಜನಕದ ಕೊರತೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಆದರೆ ಈ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

ಆಸ್ಪತ್ರೆಯು 500 ಕ್ಕೂ ಹೆಚ್ಚು COVID-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿತ್ತು. ಅಧಿಕಾರಿಯೊಬ್ಬರ ಪ್ರಕಾರ, ಆಸ್ಪತ್ರೆಯ ಅಧಿಕಾರಿಗಳು ಆಮ್ಲಜನಕದ ಪೂರೈಕೆಯ ಕೊರತೆಯ ಮಧ್ಯೆ ಐಸಿಯುಗಳಲ್ಲಿ ಮ್ಯಾನುವಲ್ ವೆಂಟಿಲೇಷನ್ ಆಶ್ರಯಿಸುತ್ತಿದ್ದಾರೆ ಎನ್ನಲಾಗಿದೆ.

ಕೊರೋನಾ ಚಿಕಿತ್ಸಾ ಕೇಂದ್ರದಲ್ಲಿ ಬೆಂಕಿ: 13 ರೋಗಿಗಳು ಸಾವು

ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆ ಆಸ್ಪತ್ರೆಯಲ್ಲಿ ಕೇವಲ ಎರಡು ಗಂಟೆಗಳ ಆಮ್ಲಜನಕ ಪೂರೈಕೆ ಉಳಿದಿರುವ ಕಾರಣ 60 ರೋಗಿಗಳು ಅಪಾಯದಲ್ಲಿದ್ದಾರೆ ಎಂದು ಎಚ್ಚರಿಕೆ ನೀಡಿದ ನಂತರ, ಆಮ್ಲಜನಕ ಟ್ಯಾಂಕರ್‌ಗಳನ್ನು ಕಳುಹಿಸಲಾಗಿದೆ.

ಐಎನ್‌ಎಕ್ಸ್ ಏರ್ ಪ್ರಾಡಕ್ಟ್ಸ್‌ನ ಎರಡು ಆಮ್ಲಜನಕ ಟ್ಯಾಂಕರ್‌ಗಳು ಆಸ್ಪತ್ರೆಗೆ ಪ್ರವೇಶಿಸುತ್ತಿರುವುದನ್ನು ಎಎನ್‌ಐ ಶೇರ್ ಮಾಡಿದೆ. ಕಳೆದ 24 ಗಂಟೆಗಳಲ್ಲಿ ಆಸ್ಪತ್ರೆಯಲ್ಲಿ 25 ರೋಗಿಗಳು ಸಾವನ್ನಪ್ಪಿದ್ದಾರೆ.

ಆಮ್ಲಜನಕ ಸರಬರಾಜು ಸ್ಥಿರವಾಗುವವರೆಗೆ ದೆಹಲಿ ಎನ್‌ಸಿಆರ್‌ನಲ್ಲಿರುವ ನಮ್ಮ ಎಲ್ಲಾ ಆಸ್ಪತ್ರೆಗಳಲ್ಲಿ ಯಾವುದೇ ಹೊಸ ರೋಗಿಗಳನ್ನು ಧಾಖಲಿಸುವುದಿಲ್ಲ ಎಂದು ಮಾಕ್ಸ್ ಹೆಲ್ತ್ ಕೇರ್ ತಿಳಿಸಿದೆ.

Scroll to load tweet…

ಆಕ್ಸಿಜನ್ ಕೊರತೆಯಿಂದಾಗಿ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಸುಳ್ಳು ವರದಿಯಾಗಿದೆ. ಐಸಿಯು ಹಾಸಿಗೆಗಳಲ್ಲಿ ಆಕ್ಸಿಜನ್ ಒತ್ತಡ ಕಡಿಮೆಯಾದಾಗ, ರೋಗಿಗಳೀಗೆ ಕೃತಕವಾಗಿ ಆಕ್ಸಿಜನ್ ನೀಡಲಾಗಿದೆ. ಆಕ್ಸಿಜನ್ ಇಲ್ಲದೆ ಯಾರನ್ನೂ ಸಾಯಲು ಬಿಡಲಿಲ್ಲ ಎಂದು ಸರ್ ಗಂಗಾ ರಾಮ್ ಆಸ್ಪತ್ರೆ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

Scroll to load tweet…