ತಿಂಗಳ ಹಿಂದೆ ಮೈನೆರೆದ ಅಪ್ರಾಪ್ತೆಗೆ 23ರ ಯುವಕನೊಂದಿಗೆ ವಿವಾಹ..!
23 ವರ್ಷದ ಯುವಕ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿದ್ದು, ಈ ಸಂಬಂಧ ಕಾನೂನು ಕ್ರಮ ಜರುಗಿಸುವಂತೆ ಮಕ್ಕಳ ಹಕ್ಕು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಹೈದರಾಬಾದ್(ಜೂ 04): 23 ವರ್ಷದ ಯುವಕ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿದ್ದು, ಈ ಸಂಬಂಧ ಕಾನೂನು ಕ್ರಮ ಜರುಗಿಸುವಂತೆ ಮಕ್ಕಳ ಹಕ್ಕು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ವರ, ಪುರೋಹಿತ, ವದ ಹಾಗೂ ವಧುವಿನ ಪೋಷಕರು ಮತ್ತು ಇದಕ್ಕೆ ನೆರವಾದ ಸ್ತಳೀಯ ರಾಜಕೀಯ ಮುಖಂಡನ ವಿರುದ್ಧ ಬಾಲ್ಯ ವಿವಾಹ ತಡೆ ಕಾಯ್ದೆ, ಪೋಸ್ಕೋ ಕಾಯ್ದೆ, ಅಪ್ರಾಪ್ತೆಯನ್ನು ಬಲವಂತವಾಗಿ ವಿವಾಹವಾಗುವ ಆರೋಪ ಸೇರಿ ಐಪಿಸಿ376ಕ್ಕೆ ಸಂಬಂಧಿಸಿ ಅತ್ಯಾಚಾರ ಪ್ರಕರಣದಡಿ ಪ್ರಕರಣ ದಾಖಲಿಸಲಾಗಿದೆ.
7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ: ಕಾರಣ ನಿಗೂಢ..!
ಬಾಲ ಹಕ್ಕುಲ ಸಂಘಂನ ಪ್ರವರ್ತಕ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಹೈದರಾಬಾದ್‌ನಿಂದ 3 ಕಿಮೀ ದೂರದ ಹಳ್ಳಿಯ ಮಠವೊಂದರಲ್ಲಿ ಪುರೋಹಿತರ ನೆರವಿನೊಂದಿಗೆ ವಿವಾಹ ನೆರವೇರಿದೆ.
ಬಾಲಕಿಗೆ 16 ವರ್ಷ ವಯಸ್ಸಾಗಿದೆ ಎಂದು ಹೇಳಲಾಗುತ್ತಿದ್ದರೂ, ಆಕೆ 6ನೇ ತರಗತಿಯಲ್ಲಿ ಕಲಿಯುತ್ತಿದ್ದು, ತಿಂಗಳ ಹಿಂದಷ್ಟೇ ಮೈನೆರೆದಿರುವುದಾಗಿ ಕಾರ್ಯಕರ್ತ ತಿಳಿಸಿದ್ದಾರೆ. ಸುಮಾರು 30 ಜನ ವಿವಾಹದಲ್ಲಿಯೂ ಭಾಗಿಯಾಗಿದ್ದರು. ವಿವಾಹಕ್ಕೆ 50 ಜನ ಸೇರುವ ಅನುಮತಿ ಇದ್ದರೂ, ಈ ವಿವಾಹದಲ್ಲಿ ಯಾವುದೇ ಮುಂಜಾಗೃತೆಗಳಿಲ್ಲದೆ ಜನರು ಗುಂಪುಗೂಡಿರುವುದು ತಿಳಿದುಬಂದಿದೆ.