Rajeev Chandrasekhar: ಮೊಬೈಲ್‌ನಿಂದಾಗಿ ಶೇ.37ರಷ್ಟು ಮಕ್ಕಳಿಗೆ ಏಕಾಗ್ರತೆ ಕೊರತೆ
ಶೇ.23.8ರಷ್ಟುಮಕ್ಕಳು ಮಲಗುವ ಮೊದಲು ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಮೊಬೈಲ್ ಬಳಕೆ ಅತಿಯಾಗಿರುವುದರಿಂದ ಶೇ.37.15ರಷ್ಟು ಮಕ್ಕಳ ಏಕಾಗ್ರತೆಯ ಮಟ್ಟದಲ್ಲಿ ಕುಸಿತ ಉಂಟಾಗಿದೆ ಎಂದು ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಮಂಗಳವಾರ ಸಂಸತ್ತಿಗೆ ತಿಳಿಸಿದ್ದಾರೆ.
ನವದೆಹಲಿ (ಮಾ.24): ಶೇ.23.8ರಷ್ಟು ಮಕ್ಕಳು (Kids) ಮಲಗುವ ಮೊದಲು ಮೊಬೈಲ್ (Mobile) ಬಳಕೆ ಮಾಡುತ್ತಿದ್ದಾರೆ. ಮೊಬೈಲ್ ಬಳಕೆ ಅತಿಯಾಗಿರುವುದರಿಂದ ಶೇ.37.15ರಷ್ಟು ಮಕ್ಕಳ ಏಕಾಗ್ರತೆಯ ಮಟ್ಟದಲ್ಲಿ ಕುಸಿತ ಉಂಟಾಗಿದೆ ಎಂದು ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಮಂಗಳವಾರ ಸಂಸತ್ತಿಗೆ ತಿಳಿಸಿದ್ದಾರೆ.
ಮೊಬೈಲ್ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಯಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆಯ ವಿರುದ್ಧ ರಕ್ಷಣೆ ಒದಗಿಸುವ ರಾಷ್ಟ್ರೀಯ ಆಯೋಗ ನೀಡಿರುವ ದತ್ತಾಂಶವನ್ನು ಅವರು ಹಂಚಿಕೊಂಡಿದ್ದಾರೆ. ‘ಅಧ್ಯಯನದ ಪ್ರಕಾರ ಶೇ.23.8ರಷ್ಟುಮಕ್ಕಳು ಮಲಗುವ ಮೊದಲು ಅಥವಾ ಹಾಸಿಗೆಯಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಇದರಿಂದಾಗಿ ಶೇ.37.15ರಷ್ಟುಮಕ್ಕಳ ಏಕಾಗ್ರತೆಯ ಮಟ್ಟದಲ್ಲಿ ಕುಸಿತ ಉಂಟಾಗಿದೆ’ ಎಂದು ಅವರು ಹೇಳಿದ್ದಾರೆ. ಆದರೆ ಇಂಟರ್ನೆಟ್ ಮೇಲೆ ಅವಲಂಬಿತವಾಗಿರುವ ಮಕ್ಕಳ ಕುರಿತು ಯಾವುದೇ ದತ್ತಾಂಶ ಒದಗಿಸಿಲ್ಲ.
ಗ್ಯಾಲಿಯಂ ನೈಟ್ರೇಟ್ ತಂತ್ರಜ್ಞಾನಕ್ಕೆ ಮಹತ್ವ: ದೇಶದಲ್ಲಿ ಮುಂದಿನ 2-3 ವರ್ಷದಲ್ಲಿ ವೈರ್‌ಲೆಸ್ ಕಮ್ಯುನಿಕೇಷನ್ ಹಾಗೂ ವಿದ್ಯುತ್‌ಚಾಲಿತ ವಾಹನ ಸೇರಿದಂತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಗ್ಯಾಲಿಯಂ ನೈಟ್ರೇಟ್ ತಂತ್ರಜ್ಞಾನ (Gallium Nitride Technology) ಬಹುಮುಖ್ಯ ಪಾತ್ರ ವಹಿಸಲಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಇಲಾಖೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಉಕ್ರೇನ್‌ನಿಂದ ನವೀನ್ ದೇಹ ತವರಿಗೆ ತರಲು ಶ್ರಮಿಸಿದ ಪ್ರಧಾನಿಗೆ ರಾಜೀವ್ ಚಂದ್ರಶೇಖರ್ ಕೃತಜ್ಞತೆ!
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಸ್ಥಾಪಿಸುತ್ತಿರುವ ಗ್ಯಾಲಿಯಂ ನೈಟ್ರೇಟ್ ಇಕೊಸಿಸ್ಟಂ ಎನೇಬಲಿಂಗ್ ಟೆಕ್ನಾಲಜಿ ಸೆಂಟರ್ (ಜಿಇಇಸಿಐ)ನಲ್ಲಿ ಭಾನುವಾರ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಗ್ಯಾಲಿಯಂ ನೈಟ್ರೇಟ್ ತಂತ್ರಜ್ಞಾನವು 5ಜಿ, ಬಾಹ್ಯಾಕಾಶ ಹಾಗೂ ರಕ್ಷಣಾ ಇಲಾಖೆ ಸಾಧನಗಳ ಹಿನ್ನೆಲೆಯಲ್ಲಿ ಸಾಕಷ್ಟುಮಹತ್ವ ಪಡೆದುಕೊಂಡಿದೆ. ಹೀಗಾಗಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆಯಿಂದ ಬೆಂಗಳೂರಿನ ಐಐಎಸ್‌ಸಿ ಸಂಸ್ಥೆಯಲ್ಲಿ ಫೌಂಡ್ರಿ (ಎರಕ), ಆರ್‌ಎಫ್, ವಿದ್ಯುತ್ ಸಾಧನಗಳ ಕ್ಷೇತ್ರಗಳ ಅಭಿವೃದ್ಧಿ ದೃಷ್ಟಿಯಿಂದ ಜಿಇಇಸಿಐ ಸ್ಥಾಪಿಸಲಾಗುತ್ತಿದೆ ಎಂದರು.
ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಜಾಗತಿಕ ಮಟ್ಟದ ನಾಯಕತ್ವ ವೃದ್ಧಿಸುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಪ್ರಮುಖ ಉದ್ದೇಶ. ಇದನ್ನು ಸಾಧಿಸಲು ಇಲಾಖೆಯು 1000 ದಿನಗಳ ‘ಭವಿಷ್ಯದ ಹಾದಿ’ಯನ್ನು ರೂಪಿಸಿಕೊಂಡಿದೆ. ಹೈಟೆಕ್ ಹಾಗೂ ಸ್ಟ್ರಾಟಜಿಕ್ ಟೆಕ್ ಅಭಿವೃದ್ಧಿಯನ್ನು ಮುಖ್ಯ ಧ್ಯೇಯವಾಗಿಸಿಕೊಂಡು ಕೆಲಸ ಮಾಡುತ್ತಿದೆ ಎಂದು ಹೇಳಿದರು. ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರ, ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿ ಕಂಡಕ್ಟರ್ ವಿನ್ಯಾಸ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ.
ದೇಶದ ಸೆಮಿ ಕಂಡಕ್ಟರ್ ಫ್ಯಾಬ್ ಘಟಕಗಳಿಗೆ ಉತ್ತೇಜನ ನೀಡಲು ಹಾಗೂ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ವಿನ್ಯಾಸ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ಭಾರತವನ್ನು ವಿಶ್ವದಲ್ಲಿ ಪ್ರಮುಖ ಕೇಂದ್ರವನ್ನಾಗಿ ಮಾಡಲು 10 ಬಿಲಿಯನ್ ಡಾಲರ್ ಪ್ರೋತ್ಸಾಹ ಪ್ಯಾಕೇಜ್ ನೀಡಲಾಗಿದೆ. ಹೀಗಾಗಿ ಐಐಎಸ್‌ಸಿ, ಐಐಟಿಯಂತಹ ಸಂಸ್ಥೆಗಳು ಸೆಮಿ ಕಂಡಕ್ಟರ್ ಉತ್ಪಾದನೆಯಂತಹ ಕ್ಷೇತ್ರದಲ್ಲಿ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ, ಶಿಕ್ಷಣ ಹಾಗೂ ತರಬೇತಿ ನೀಡುವ ಅಗತ್ಯವಿದೆ. ಇದು ಡಿಜಿಟಲ್ ಇಂಡಿಯಾ ಕನಸನ್ನು ನನಸು ಮಾಡಲು ಸಹಕಾರಿ ಎಂದು ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟರು.
Indian OS for Mobiles: ಮೊಬೈಲ್‌ಗಳಿಗೆ ಸ್ವದೇಶಿ ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿ!
ಕೇಂದ್ರದ ಯೋಜನೆಗಳು ಇನ್ನೋವೇಷನ್ ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡಲು, ಉದ್ಯಮಿಗಳನ್ನು ವ್ಯಾಪಾರ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಲು ಉತ್ತೇಜನ ನೀಡಲಿದೆ. ಅಗ್ನಿಟ್ (ಎಜಿಎನ್‌ಐಟಿ) ಸೆಮಿ ಕಂಡಕ್ಟರ್ಸ್ ಪ್ರೈ ಲಿಮಿಟೆಡ್ ಮೊದಲ ಸ್ಟಾರ್ಟ್‌ಅಪ್ ಆಗಿ ಇದರ ಸದುಪಯೋಗ ಪಡೆದಿದೆ ಎಂದರು.