Asianet Suvarna News Asianet Suvarna News

ದಿಲ್ಲಿ: ಉಷ್ಣ ಮಾರುತಕ್ಕೆ ಒಂದೇ ದಿನ 22 ಜನ ಬಲಿ..!

ಬುಧವಾರ ಒಂದೇ ದಿನ 20 ಮಂದಿ ಸಾವನ್ನಪ್ಪಿದ್ದರು. ಬಿಸಿಲ ಬೇಗೆ ಕಾರಣ ರಾಷ್ಟ್ರ ರಾಜಧಾನಿಯ ಪ್ರಮುಖ 3 ಆಸ್ಪತ್ರೆಗಳಲ್ಲಿ ಒಂದೇ ದಿನ 72 ಮಂದಿ ದಾಖಲಾಗಿದ್ದರು. ಸಫರ್‌ಜಂಗ್ ಆಸ್ಪತ್ರೆಯಲ್ಲಿ 33 ಜನರು ಉಷ್ಣ ಸಂಬಂಧಿತ ಅನಾರೋಗ್ಯದಿಂದ ದಾಖಲಾಗಿದ್ದು, ಇವರಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ 22 ಜನರಲ್ಲಿ 4 ಜನರು ಮೃತಪಟ್ಟಿದ್ದಾರೆ. ದೆಹಲಿ ಸರ್ಕಾರದ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ 5 ರೋಗಿಗಳು ಮೃತಪಟ್ಟಿದ್ದಾರೆ ಎಂದು ತಿಳಿಸಿದ ಅಧಿಕಾರಿಗಳು.

22 Killed Due to Heat Wave in Delhi grg
Author
First Published Jun 21, 2024, 11:40 AM IST

ನವದೆಹಲಿ(ಜೂ.21):  ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಉಷ್ಣ ಮಾರುತ ತನ್ನ ಆರ್ಭಟಮುಂದುವ ರಿಸಿದೆ. ಇದರ ಪರಿಣಾಮವಾಗಿ ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 22 ಜನರು ಉಷ್ಣ ಸಂಬಂಧಿ ವ್ಯಾಧಿಗಳಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ 2 ದಿನದಲ್ಲಿ 42 ಜನರು ದಿಲ್ಲಿಯಲ್ಲಿ ತಾಪಕ್ಕೆ ಬಲಿಯಾದಂತಾಗಿದೆ.

ಬುಧವಾರ ಒಂದೇ ದಿನ 20 ಮಂದಿ ಸಾವನ್ನಪ್ಪಿದ್ದರು. ಬಿಸಿಲ ಬೇಗೆ ಕಾರಣ ರಾಷ್ಟ್ರ ರಾಜಧಾನಿಯ ಪ್ರಮುಖ 3 ಆಸ್ಪತ್ರೆಗಳಲ್ಲಿ ಒಂದೇ ದಿನ 72 ಮಂದಿ ದಾಖಲಾಗಿದ್ದರು. ಸಫರ್‌ಜಂಗ್ ಆಸ್ಪತ್ರೆಯಲ್ಲಿ 33 ಜನರು ಉಷ್ಣ ಸಂಬಂಧಿತ ಅನಾರೋಗ್ಯದಿಂದ ದಾಖಲಾಗಿದ್ದು, ಇವರಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ 22 ಜನರಲ್ಲಿ 4 ಜನರು ಮೃತಪಟ್ಟಿದ್ದಾರೆ. ದೆಹಲಿ ಸರ್ಕಾರದ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ 5 ರೋಗಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಭಾರತದಲ್ಲಿ ಉಷ್ಣಹವೆ: ಬಿರು ಬಿಸಿಲಿಗೆ ಮತ್ತೆ 54 ಮಂದಿ ಸಾವು..!

1 ವಾರದಲ್ಲಿ 192 ಬಲಿ: 

ಈ ನಡುವೆ, ದಿಲ್ಲಿಯಲ್ಲಿ ಜೂ.11 ರಿಂದ 19ರ ವರೆಗೆ ಒಟ್ಟು 192 ಮಂದಿ ನಿರ್ವಸಿತರು ಬಿಸಿ ಗಾಳಿ ತಾಳದೇ ಮೃತಪಟ್ಟಿದ್ದಾರೆ ಎಂದು ಸ್ವಯಂಸೇವಾ ಸಂಸ್ಥೆಯ ವರದಿ ಹೇಳಿದೆ.

Latest Videos
Follow Us:
Download App:
  • android
  • ios