ಉತ್ತರ ಭಾರತದಲ್ಲಿ ಉಷ್ಣಹವೆ: ಬಿರು ಬಿಸಿಲಿಗೆ ಮತ್ತೆ 54 ಮಂದಿ ಸಾವು..!

ಶುಕ್ರವಾರ ರಾಜಧಾನಿ ದೆಹಲಿ, ಬಿಹಾರ, ಒಡಿಶಾ, ಜಾರ್ಖಂಡ್, ರಾಜಸ್ಥಾನ, ಉತ್ತರ ಪ್ರದೇಶ, ಹರ್ಯಾಣ, ಚಂಡೀಗಢ, ಪೂರ್ವ ಮಧ್ಯಪ್ರದೇಶ ಮತ್ತು ವಿದರ್ಭದಲ್ಲಿ 45 ರಿಂದ 48 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಜೂ.1 ರಂದು ಉತ್ತರ ಪ್ರದೇಶ, ಹರಿಯಾಣ, ಚಂಡೀಗಢ ಮತ್ತು ದೆಹಲಿಯಲ್ಲಿ ಧೂಳಿನ ಬಿರುಗಾಳಿ ಬೀಸುವ ಮುನ್ಸೂಚನೆ ಇದೆ. 
 

Again 54 Killed in North India due to Heat Wave grg

ನವದೆಹಲಿ(ಜೂ.01): ಉತ್ತರ ಭಾರತದಲ್ಲಿ ಉಷ್ಣಹವೆ ಮುಂದುವರೆದಿದ್ದು, ರಾಷ್ಟ್ರಾದ್ಯಂತ ಉಷ್ಣಹವೆಗೆ ಕಳೆದ 24 ತಾಸಿನಲ್ಲಿ 54 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಉತ್ತರ ಪ್ರದೇಶ ಹಾಗೂ ಬಿಹಾರದ 20 ಚುನಾವಣಾ ಸಿಬ್ಬಂದಿ ಇದ್ದಾರೆ. ಇದು ಶನಿವಾರದ ಚುನಾವಣೆ ವೇಳೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಬಿಹಾರದಲ್ಲಿ ಅತಿ ಹೆಚ್ಚು ಎಂದರೆ- 32 ಮಂದಿ ಉಷ್ಣಹವೆಯಿಂದ ಸಾವನ್ನಪ್ಪಿದ್ದಾರೆ. ಅದರಲ್ಲಿ ಔರಂಗಾಬಾದ್‌ನಲ್ಲಿ 17 ಮಂದಿ, ಅರಾದಲ್ಲಿ 6, ಗಯಾ ಮತ್ತು ರೋಪ್ತಾಸ್‌ನಲ್ಲಿ ತಲಾ 3 ಮಂದಿ, ಬಕ್ಸರ್‌ನಲ್ಲಿ ಇಬ್ಬರು ಮತ್ತು ಪಟನಾದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಇನ್ನು ಒಡಿಶಾದ ರೂರ್ಕೆಲಾದಲ್ಲಿ 10, ಜಾರ್ಖಂಡ್‌ನ ಪಲಮು ಮತ್ತು ರಾಜಸ್ಥಾನದಲ್ಲಿ ತಲಾ 5 ಸಾವನ್ನಪ್ಪಿದ್ದರೆ, ಉತ್ತರ ಪ್ರದೇಶದಲ್ಲೂ ಹಲವರು ಉಷ್ಣಹವೆಗೆ ಮೃತಪಟ್ಟಿದ್ದಾರೆ.

ದೆಹಲಿ, ಬಿಹಾರ ಸೇರಿ 4 ರಾಜ್ಯಗಳಲ್ಲಿ ಉಷ್ಣ ಮಾರುತಕ್ಕೆ 32 ಬಲಿ..!

ಶುಕ್ರವಾರ ರಾಜಧಾನಿ ದೆಹಲಿ, ಬಿಹಾರ, ಒಡಿಶಾ, ಜಾರ್ಖಂಡ್, ರಾಜಸ್ಥಾನ, ಉತ್ತರ ಪ್ರದೇಶ, ಹರ್ಯಾಣ, ಚಂಡೀಗಢ, ಪೂರ್ವ ಮಧ್ಯಪ್ರದೇಶ ಮತ್ತು ವಿದರ್ಭದಲ್ಲಿ 45 ರಿಂದ 48 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಜೂ.1 ರಂದು ಉತ್ತರ ಪ್ರದೇಶ, ಹರಿಯಾಣ, ಚಂಡೀಗಢ ಮತ್ತು ದೆಹಲಿಯಲ್ಲಿ ಧೂಳಿನ ಬಿರುಗಾಳಿ ಬೀಸುವ ಮುನ್ಸೂಚನೆ ಇದೆ. ಜೂ.1, 2 ರಂದು ವಾಯುವ್ಯ ಭಾರ ತದ ಭಾಗದಲ್ಲಿ ಗುಡುಗು, ಮಿಂಚು ಸಮೇತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
 

Latest Videos
Follow Us:
Download App:
  • android
  • ios