* ಎಬಿಸಿ ನ್ಯೂಸ್‌- ಸಿ ವೋಟರ್‌ ಸಮೀಕ್ಷೆ* ಉತ್ತರಾಖಂಡ, ಗೋವಾ, ಮಣಿಪುರದಲ್ಲೂ ಬಿಜೆಪಿಗೆ ಜಯ* ಯುಪಿಗೆ ಮತ್ತೆ ಯೋಗಿ, ಪಂಜಾಬ್‌ಗೆ ಆಪ್‌

ನವದೆಹಲಿ (ಸೆ.04): 2022ರಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರಪ್ರದೇಶ, ಪಂಜಾಬ್‌, ಗೋವಾ, ಮಣಿಪುರ ಮತ್ತು ಉತ್ತರಾಖಂಡ ರಾಜ್ಯಗಳ ಜನರ ಮನದಾಳ ತಿಳಿಯಲು ಎಬಿಪಿ ನ್ಯೂಸ್‌- ಸಿ ವೋಟರ್‌ ಸಮೀಕ್ಷೆಯೊಂದನ್ನು ನಡೆಸಿದ್ದು, ಅದರಲ್ಲಿ ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಇನ್ನು ಅಚ್ಚರಿ ಎಂಬಂತೆ ಕಳೆದೊಂದು ದಶಕದಿಂದ ಪಂಜಾಬ ಮೇಲೆ ಆಮ್‌ಆದ್ಮಿ ಪಕ್ಷ ಇಟ್ಟಿದ್ದ ಕನಸು ನನಸಲಾಗಲಿದ್ದು, ಅಲ್ಲಿ ಕೇಜ್ರಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ. ಉಳಿದಂತೆ ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.

"

ಇನ್ನು ಇದೆ ಮೋದಿ ಅಲೆ, ಉತ್ತರದಲ್ಲಿ ಭದ್ರವಾಯ್ತಾ ಯೋಗಿ ನೆಲೆ?ಏಷ್ಯಾನೆಟ್ ಸುವರ್ಣನ್ಯೂಸ್ ಸಮೀಕ್ಷೆ!

ಮತ್ತೆ ಯೋಗಿ:
403 ವಿಧಾನಸಭಾ ಸ್ಥಾನ ಹೊಂದಿರುವ ಉತ್ತರಪ್ರದೇಶದಲ್ಲಿ 263 ಸ್ಥಾನ ಗೆಲ್ಲುವ ಮೂಲಕ ಯೋಗಿ ಸರ್ಕಾರ ಸತತ 2ನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ. ಆದರೆ ಹಿಂದಿನ ವರ್ಷಕ್ಕಿಂತ ಬಿಜೆಪಿಗೆ 62 ಸ್ಥಾನ ನಷ್ಟದ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ. 2017ರಲ್ಲಿ ಬಿಜೆಪಿ 325 ಸ್ಥಾನ ಗೆದ್ದಿತ್ತು. ಉಳಿದಂತೆ ಕಳೆದ ವರ್ಷ ಕೇವಲ 48 ಸ್ಥಾನ ಗೆದ್ದಿದ್ದ ಎಸ್‌ಪಿಗೆ ಈ ಬಾರಿ 113, ಕಳೆದ ಬಾರಿ 19 ಸ್ಥಾನ ಗೆದ್ದಿದ್ದ ಬಿಎಸ್‌ಪಿಗೆ ಈ ಬಾರಿ 14, ಸ್ಥಾನ, ಕಳೆದ ಬಾರಿ 7 ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ಗೆ ಈಗ ಕೇವಲ 5 ಸ್ಥಾನ ಸಿಗಲಿದೆ, ಇತರರು 8 ಸ್ಥಾನ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಆಪ್‌ಗೆ 2ನೇ ರಾಜ್ಯ: 117 ಸ್ಥಾನಬಲದ ಪಂಜಾಬ್‌ ವಿಧಾನಸಭೆಗೆ ಈಗ ಚುನಾವಣೆ ನಡೆದರೆ ಆಮ್‌ಆದ್ಮಿ ಪಕ್ಷಕ್ಕೆ 55 ಸ್ಥಾನ, ಕಾಂಗ್ರೆಸ್‌ಗೆ 42, ಶಿರೋಮಣಿ ಅಕಾಲಿದಳಕ್ಕೆ 20 ಸ್ಥಾನ ಸಿಗಲಿದೆ. ಬಿಜೆಪಿ ಶೂನ್ಯಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ ಎಂದು ಸಮೀಕ್ಷೆ ಹೇಳಿದೆ. 2017ರಲ್ಲಿ ಆಪ್‌ಗೆ 20, ಕಾಂಗ್ರೆಸ್‌ಗೆ 77, ಶಿರೋಮಣಿ ಅಕಾಲಿದಳಕ್ಕೆ 15, ಬಿಜೆಪಿಗೆ 3 ಸ್ಥಾನ ಬಂದಿತ್ತು.

3 ಕಡೆ ಬಿಜೆಪಿ ಜಯ:
70 ಸ್ಥಾನಬಲದ ಉತ್ತರಾಖಂಡದಲ್ಲಿ ಬಿಜೆಪಿ 44-48, ಕಾಂಗ್ರೆಸ್‌ 19-23, ಆಪ್‌ 0-4 ಸ್ಥಾನ ಗೆಲ್ಲಬಹುದು. ಈ ಮೂಲಕ ಬಿಜೆಪಿ ಮರಳಿ ಅಧಿಕಾರಕ್ಕೆ ಬರಲಿದೆ. ಇನ್ನು 40 ಸದಸ್ಯ ಬಲದ ಗೋವಾದಲ್ಲಿ ಬಿಜೆಪಿ 24, ಆಪ್‌ಗೆ 6, ಕಾಂಗ್ರೆಸ್‌ಗೆ 5, ಇತರರಿಗೆ 5 ಸ್ಥಾನ ಸಿಗಲಿದೆ. 60 ಸದಸ್ಯಬಲದ ಮಣಿಪುರದಲ್ಲಿ ಬಿಜೆಪಿಗೆ 34, ಕಾಂಗ್ರೆಸ್‌ಗೆ 20, ಎನ್‌ಪಿಎಫ್‌ಗೆ 4, ಇತರರಿಗೆ 2 ಸ್ಥಾನ ಸಿಗಲಿದೆ ಎಂದು ಸಮೀಕ್ಷೆ ಹೇಳಿದೆ.

ಉತ್ತರ ಪ್ರದೇಶ ಚುನಾವಣೆ: ಯೋಗಿ ಸರ್ಕಾರದ ಮುಂದಿರುವ ಸವಾಲೇನು? ಏಷ್ಯಾನೆಟ್ ಸುವರ್ಣನ್ಯೂಸ್ ಸಮೀಕ್ಷೆ!

ಉತ್ತರಪ್ರದೇಶ ಒಟ್ಟು ಸ್ಥಾನ 403

ಬಿಜೆಪಿ 263

ಎಸ್‌ಪಿ 113

ಬಿಎಸ್‌ಪಿ 14

ಕಾಂಗ್ರೆಸ್‌ 05

ಇತರರು 05

ಪಂಜಾಬ್‌ ಒಟ್ಟು ಸ್ಥಾನ 117

ಆಪ್‌ 55

ಕಾಂಗ್ರೆಸ್‌ 42

ಶಿರೋಮಣಿ ಅಕಾಲಿದಳ 20

ಬಿಜೆಪಿ 03

ಇತರರು 08

ಗೋವಾ ಒಟ್ಟು ಸ್ಥಾನ 40

ಬಿಜೆಪಿ 24

ಆಪ್‌ 06

ಕಾಂಗ್ರೆಸ್‌ 05

ಇತರರು 05

ಉತ್ತರಾಖಂಡ ಒಟ್ಟು ಸ್ಥಾನ 70

ಬಿಜೆಪಿ 44-48

ಕಾಂಗ್ರೆಸ್‌ 19-23

ಆಪ್‌ 0-4

ಮಣಿಪುರ ಒಟ್ಟು ಸ್ಥಾನ 60

ಬಿಜೆಪಿ 34

ಕಾಂಗ್ರೆಸ್‌ 20

ಎನ್‌ಪಿಎಫ್‌ 4

ಇತರರು 2