ನವದೆಹಲಿ[ಜ.14]: ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಪ್ರಕರಣದ ಆರೋಪಿಗಳಿಗೆ ಜನವರಿ 22ರಂದೇ ಗಲ್ಲು ಶಿಕ್ಷೆ ನಡೆಯಲಿದೆ. ಇಬ್ಬರು ಅಪರಾಧಿಗಳು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ವಜಾಗೊಳಿಸಿದ್ದು, ಅತ್ಯಾಚಾರಿಗಳಿದ್ದ ಕಟ್ಟಕಡೆಯ ದಾರಿಯೂ ಬಂದ್ ಆಗಿದೆ.

"

ನಿರ್ಭಯಾ ಕೇಸ್: ತಿಹಾರ್‌ ಜೈಲಿನಲ್ಲಿ ಅಣಕು ನೇಣು!

ಗಲ್ಲು ಶಿಕ್ಷೆ ವಿರೋಧಿಸಿ ಇಬ್ಬರು ಅಪರಾಧಿಗಳಾದ ವಿನಯ್ ಶರ್ಮಾ ಹಾಗೂ ಮುಕೇಶ್ ಸಿಂಗ್ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಐವರು ಸದಸ್ಯರ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಇದನ್ನು ವಜಾಗೊಳಿಸಿದೆ. ಇದು ಅಪರಾಧಿಗಳಿಗೆ ತಮ್ಮ ಪರ ವಾದಿಸಲು ಇದ್ದ ಕೊನೆಯ ವಕಾಶವಾಗಿತ್ತು.

ಅಪರಾಧಿಗಳಿಗೆ ಜನವರಿ 22ರಂದು ಡೆತ್ ವಾರೆಂಟ್ ಹೊರಡಿಸಿದ್ದರೂ, ಇಬ್ಬರು ಅಪರಾಧಿಗಳು ಕೊನೆಯ ಕ್ಷಣದಲ್ಲಿ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯಿಂದ ಗಲ್ಲು ಮುಂದಕ್ಕೋಗುತ್ತೆ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೀಗ ಈ ಎಲ್ಲಾ ಅನುಮಾನಗಳಿಗೆ ತೆರೆ ಬಿದ್ದಿದೆ.

ನಿರ್ಭಯಾ ರೇಪಿಸ್ಟ್‌ಗಳನ್ನು ಗಲ್ಲಿಗೇರಿಸುವ ಪವನ್‌ಗೆ ನಟ ಜಗ್ಗೇಶ್‌ರಿಂದ 1 ಲಕ್ಷ ರೂ!