ಪೆಸಿಫಿಕ್ ಸಮುದ್ರದಲ್ಲಿರುವ ದ್ವೀಪರಾಷ್ಟ್ರ ಪಪುವಾ ನ್ಯೂ ಗಿನಿಯಾದ ಯಂಬಾಲಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಭೂಕುಸಿತದಲ್ಲಿ 2000ಕ್ಕೂ ಹೆಚ್ಚು ಭೂಸಮಾಧಿಯಾಗಿದ್ದಾರೆ ಎಂದು ಸರ್ಕಾರ ಘೋಷಿಸಿದೆ.
ಮೆಲ್ಬರ್ನ್: ಪೆಸಿಫಿಕ್ ಸಮುದ್ರದಲ್ಲಿರುವ ದ್ವೀಪರಾಷ್ಟ್ರ ಪಪುವಾ ನ್ಯೂ ಗಿನಿಯಾದ ಯಂಬಾಲಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಭೂಕುಸಿತದಲ್ಲಿ 2000ಕ್ಕೂ ಹೆಚ್ಚು ಭೂಸಮಾಧಿಯಾಗಿದ್ದಾರೆ ಎಂದು ಸರ್ಕಾರ ಘೋಷಿಸಿದೆ. ಅದರ ಬೆನ್ನಲ್ಲೇ ಗಿನಿಯಾ ಸರ್ಕಾರ, ಅಂತಾರಾಷ್ಟ್ರೀಯ ನೆರವು ಯಾಚಿಸಿದೆ. ಗಿನಿಯಾದ ರಕ್ಷಣಾ ಸಚಿವರೂ ಸೇರಿದಂತೆ ಹಲವು ಅಧಿಕಾರಿಗಳು ದುರಂತ ಸಂಭವಿಸಿದ ಯಂಬಾಲಿ ಗ್ರಾಮದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಬಳಿಕ ಆಸ್ಟ್ರೇಲಿಯಾ ಸೇರಿದಂತೆ ಅಂತಾರಾಷ್ಟ್ರೀಯ ಸಂಘಟನೆಗಳಿಗೆ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.
ಆದರೆ ಯಂಬಾಲಿ ಗ್ರಾಮದಲ್ಲಿ ಗುಡ್ಡ ಕುಸಿದು ಮೂರು ದಿನಗಳಾದರೂ ಮಳೆ ನಿಲ್ಲದ ಪರಿಣಾಮ ಗುಡ್ಡದ ಒಳಗೆ ನೀರು ಸೇರಿಕೊಂಡು ಶವಗಳನ್ನು ಹೊರತೆಗೆಯುವುದು ಮತ್ತಷ್ಟು ಜಟಿಲವಾಗುತ್ತಿದೆ. ಈ ನಡುವೆ ಸ್ಥಳೀಯ ಉದ್ಯಮಿಯೊಬ್ಬರು ಅಗೆಯುವ ಯಂತ್ರವನ್ನು ದೇಣಿಗೆ ನೀಡಿದ್ದು, ಅದರಿಂದಲೇ ಅಗೆತದ ಕಾರ್ಯವನ್ನು ಆರಂಭಿಸಿದ್ದಾರೆ. ಸಮುದ್ರ ಮಟ್ಟದಿಂದ 2000 ಅಡಿ ಎತ್ತರದಲ್ಲಿರುವ ಗ್ರಾಮದಲ್ಲಿ ಭೂಕುಸಿತದಿಂದಾಗಿ 26 ಅಡಿಗಳಷ್ಟು ಮಣ್ಣಿನ ರಾಶಿ ತುಂಬಿಕೊಂಡು ಗ್ರಾಮ ನಾಮಾವಶೇಷವಾಗಿದೆ.
ಪಪುವಾ ನ್ಯೂಗಿನಿಯಾದಲ್ಲಿ ಜ್ವಾಲಾಮುಖಿ ಸ್ಫೋಟ: 8 ಕೋಟಿಗೂ ಅಧಿಕ ನೆರವು ಘೋಷಿಸಿದ ಭಾರತ
ಪಾಪುವ ನ್ಯೂ ಗಿನಿಯಾದಲ್ಲಿ ಭೀಕರ ಭೂಕಂಪ, 5 ಮಂದಿ ಬಲಿ
