20 ರೂಗೆ ತಲೆಕೂದಲು ಸೊಂಪಾಗಿ ಬೆಳೆಯುವ ಔಷಧಿಗೆ ಮುಗಿಬಿದ್ದ ಜನ: ಟ್ರಾಫಿಕ್ ಜಾಮ್
20 ರೂಪಾಯಿಗೆ ವ್ಯಕ್ತಿಯೊಬ್ಬ ಬೋಳು ತಲೆಯಲ್ಲಿ ಕೂದಲು ಮತ್ತೆ ಮರಳುವ ಭರವಸೆ ನೀಡಿ ಔಷಧಿ ನೀಡುತ್ತಿದ್ದು, ಇದನ್ನು ಪಡೆಯಲು ಜನ ಮುಗಿಬಿದ್ದ ಪರಿಣಾಮ ಅಲ್ಲಿ ಟ್ರಾಫಿಕ್ ಜಾಮ್ ಆದಂತಹ ಘಟನೆ ನಡೆದಿದೆ.
ಮೀರತ್: ಸೊಂಪಾದ ತಲೆಕೂದಲು ಹೊಂದಿರಬೇಕು ಎಂಬುದು ಬಹುತೇಕರ ಆಸೆ, ಆದರೆ ಇತ್ತೀಚೆಗೆ ಕೂದಲುದುರುವ ಸಮಸ್ಯೆ ಸಾಮಾನ್ಯ ಎನಿಸಿಬಿಟ್ಟಿದ್ದು, ಸಣ್ಣ ಸಣ್ಣ ಯುವಕರ ತಲೆ ಕೂಡ ಕೂದಲಿಲ್ಲದೇ ಬೋಳಾಗುತ್ತಿದೆ. ಇದರಿಂದ ಯುವಕ ಯುವತಿಯರು ಖಿನ್ನತೆಗೆ ಒಳಗಾಗುತ್ತಿದ್ದರೆ. ಇದರ ಪರಿಣಾಮ ಕಾಸ್ಮೆಟಿಕ್ ಸಂಸ್ಥೆಗಳು ಹೇರ್ ಇನ್‌ಫ್ಲಾಂಟ್ ಸರ್ಜರಿ ಮಾಡುವಂತಹ ಆಸ್ಪತ್ರೆಗಳು ಭಾರಿ ದುಡ್ಡು ಮಾಡುತ್ತಿವೆ. ಹೀಗಿರುವಾಗ ತಲೆ ಕೂದಲು ಸೊಂಪಾಗಿ ಬೆಳೆಯುವುದಕ್ಕಾಗಿ ಯಾರು ಏನು ಹೇಳಿದರೂ ಮಾಡುವ ಮನಸ್ಥಿತಿಯಲ್ಲಿ ಜನರಿದ್ದಾರೆ. ಇದೇ ವೇಳೆ 20 ರೂಪಾಯಿಗೆ ವ್ಯಕ್ತಿಯೊಬ್ಬ ಬೋಳು ತಲೆಯಲ್ಲಿ ಕೂದಲು ಮತ್ತೆ ಮರಳುವ ಭರವಸೆ ನೀಡಿ ಔಷಧಿ ನೀಡುತ್ತಿದ್ದು, ಇದನ್ನು ಪಡೆಯಲು ಜನ ಮುಗಿಬಿದ್ದ ಪರಿಣಾಮ ಅಲ್ಲಿ ಟ್ರಾಫಿಕ್ ಜಾಮ್ ಆದಂತಹ ಘಟನೆ ನಡೆದಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಉತ್ತರ ಪ್ರದೇಶ ಮೀರತ್‌ನಲ್ಲಿ.
ದೆಹಲಿ ಮೂಲದ ಅನೀಶ್ ಮಂಡಲ್ ಎಂಬಾತ ದಿನ ಪತ್ರಿಕೆಯಲ್ಲಿ ಬೋಳು ತಲೆಯಲ್ಲಿ ಕೂದಲು ಬೆಳೆಯುವ ಔಷಧಿ ನೀಡುವುದಾಗಿ ಜಾಹೀರಾತು ನೀಡಿದ್ದ. ಅಲ್ಲದೇ ಕೂದಲು ಬೆಳೆದೆ ಬೆಳೆಯುತ್ತದೆ ಎಂದು ಗ್ಯಾರಂಟಿ ನೀಡಿದ್ದ. ಮೀರತ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆತ ಔಷಧಿ ನೀಡುವುದಾಗಿ ಜಾಹೀರಾತು ನೀಡಿದ್ದು, ಈತನ ಜಾಹೀರಾತು ನೋಡಿದ ಬೋಳು ತಲೆಯ ಅನೇಕರು ತಮ್ಮ ತಲೆಯಲ್ಲಿ ಕೂದಲು ಬೆಳೆಯುವ ಹೊಸ ಭರವಸೆಯೊಂದಿಗೆ ಅಲ್ಲಿ ಔಷಧಿಗಾಗಿ ಉದ್ದನೆಯ ಕ್ಯೂ ನಿಂತಿದ್ದರು.
ಅನೀಸ್ ಈ ಕೂದಲಿಲ್ಲದ ಜನರಿಗೆ ಕೇವಲ 20 ರೂಪಾಯಿಗೆ ಅಯಿಲ್ ಮಸಾಜ್ ಮಾಡುವ ಅಫರ್ ನೀಡಿದ ಜೊತೆಗೆ 300 ರೂಪಾಯಿಗೆ ಎಣ್ಣೆಬಾಟಲ್ ನೀಡುತ್ತಿದ್ದ. ಭಾರತದೆಲ್ಲೆಡೆಯ ಜನ ಕೂದಲುದುರುವುದಕ್ಕೆ ತನ್ನ ಬಳಿ ಔಷಧಿ ಬಯಸುತ್ತಿದ್ದಾರೆ ಎಂದು ಆತ ಹೇಳಿಕೊಂಡಿದ್ದ. ಇದರಿಂದ ಲಿಸರಿ ರಸ್ತೆಯ ಸಮ್ಮರ್ ಗಾರ್ಡ್ ಬಳಿ ಈ ಔಷಧಿ ಕೊಳ್ಳುವುದಕ್ಕಾಗಿ ಜನ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಜನ ಎಷ್ಟೊಂದು ಪ್ರಮಾಣದಲ್ಲಿ ಸೇರಿದ್ದರೆಂದರೆ ಅಲ್ಲಿ ಟೋಕನ್‌ಗಳನ್ನು ವಿತರಿಸಲಾಗಿತ್ತು. ಜನ ದೊಡ್ಡ ಸಾಲುಗಳಲ್ಲಿ ಕ್ಯೂ ನಿಂತಿದ್ದರು. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ ಔಷಧಿಯನ್ನು ಅನ್ವಯಿಸುವ ಮೊದಲು ವ್ಯಕ್ತಿಗಳು ತಮ್ಮ ತಲೆಯನ್ನು ಬೋಳಿಸಿಕೊಳ್ಳಬೇಕಾಗಿತ್ತು. ಆದರೂ ಜನ ಆತನ ಮೇಲೆ ಭಾರಿ ನಂಬಿಕೆ ಇರಿಸಿ ತಮ್ಮ ತಲೆ ಬೋಳಿಸಿಕೊಂಡು ಔಷಧಿ ಮಾಡಿಸಿಕೊಳ್ಳಲು ಮುಂದಾಗಿದ್ದರು.
ಆದರೆ ಇತ್ತ ಸ್ಥಳೀಯಾಡಳಿತಕ್ಕೆ ಇದರ ಬಗ್ಗೆ ಮಾಹಿತಿ ಇರಲಿಲ್ಲ, ಅಲ್ಲದೇ ಈ ರೀತಿ ಶಿಬಿರ ಮಾಡುವುದಕ್ಕೆ ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ, ತಮ್ಮ ಸ್ನೇಹಿತರ ಜೊತೆಯಲ್ಲಿ ಇಲ್ಲಿಗೆ ಬಂದ ಸಲ್ಮಾನ್ ಮತ್ತು ಅನೀಸ್ ಭಾನುವಾರ ಮತ್ತು ಸೋಮವಾರದಂದು ಶೌಕತ್ ಬ್ಯಾಂಕ್ವೆಟ್ ಹಾಲ್‌ಗೆ ಬಂದು ಕೂದಲ ಬೆಳವಣಿಗೆಗೆ ಚಿಕಿತ್ಸೆ ನೀಡಿದರು. ಈ ಕಾರ್ಯಕ್ರಮವನ್ನು ಮೂಲತಃ ಮೀರತ್‌ನ ಲಿಸಾರಿ ಗೇಟ್ ಸಮ್ಮರ್ ಗಾರ್ಡನ್ ಕಾಲೋನಿಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಸಲ್ಮಾನ್, ದೆಹಲಿಯಲ್ಲಿ ಕೂದಲು ಬೆಳವಣಿಗೆಯ ಚಿಕಿತ್ಸೆ ನೀಡುತ್ತಿದ್ದು, ಭಾನುವಾರ ಮತ್ತು ಸೋಮವಾರದಂದು ತಮ್ಮ ಸೇವೆ ನೀಡಲು ಅವರು ತಮ್ಮ ತಂಡದೊಂದಿಗೆ ಮೀರತ್‌ಗೆ ಬಂದಿದ್ದರು. . ದೆಹಲಿಯಲ್ಲಿ ಮಂಗಳವಾರ, ಗುರುವಾರ ಶನಿವಾರದಂದು ಚಿಕಿತ್ಸೆ ನೀಡುತ್ತಿದ್ದರು.
ಹೀಗಾಗಿ ಚಿಕಿತ್ಸೆ ಪಡೆಯಲು ಭಾನುವಾರ ಶೌಕತ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಜನರು ಭಾರಿ ಸಂಖ್ಯೆಯಲ್ಲಿ ಇದು ಅವ್ಯವಸ್ಥೆಗೆ ಕಾರಣವಾಯಿತು, ಜನ ರಸ್ತೆಯಲ್ಲೂ ಕ್ಯೂ ನಿಂತು ಟ್ರಾಫಿಕ್ ಜಾಮ್ ಆಗಿತ್ತು. ಮತ್ತು ಸರತಿ ಸಾಲಿನಲ್ಲಿ ಬರಲು ಟೋಕನ್ ನೀಡಲಾಯ್ತು. ಈ ಘಟನೆಯ ಬಗ್ಗೆ ಪೊಲೀಸ್, ಆಡಳಿತ ಮತ್ತು ಆರೋಗ್ಯ ಇಲಾಖೆಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಶಿಬಿರದ ಅನುಮತಿಯ ಬಗ್ಗೆ ಪ್ರಶ್ನಿಸಿದಾಗ, ಚಿಕಿತ್ಸೆ ನೀಡುವ ವ್ಯಕ್ತಿಗಳು ಉತ್ತರ ಹೇಳದೇ ತಪ್ಪಿಸಿಕೊಂಡಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬರಿಂದಲೂ ಇವರು ತಲಾ 20 ರೂಪಾಯಿ ವಸೂಲಿ ಮಾಡಿದ್ದಾರೆ. ಔಷಧಿಯನ್ನು ಅನ್ವಯಿಸುವ ಅನೀಸ್ ಅವರು ಬಿಜ್ನೋರ್ ಮೂಲದವರಾಗಿದ್ದು, ಕೂದಲು ಬೆಳವಣಿಗೆಯ ಚಿಕಿತ್ಸೆಯನ್ನು ಒದಗಿಸಲು ಮೀರತ್‌ಗೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.