ಶಿಕ್ಷಕ ನೇಮಕ ಹಗರಣ: ಬಂಗಾಳ ಮಂತ್ರಿ ಆಪ್ತೆ ಮನೇಲಿ 20 ಕೋಟಿ ಕ್ಯಾಷ್‌!

ಶಿಕ್ಷಕರ ನೇಮಕಾತಿ ಹಗರಣದ ಆರೋಪಿ, ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿ ನಿವಾಸದ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ದಾಳಿ ನಡೆಸಿ, ಒಂದಲ್ಲ ಎರಡಲ್ಲ.. 20 ಕೋಟಿ ರು. ನಗದು ವಶಪಡಿಸಿಕೊಂಡಿದ್ದಾರೆ.

20 Crore Cash Seized After Raids On West Bengal Minister Partha Chatterjees Aide gvd

ಕೋಲ್ಕತಾ (ಜು.23): ಶಿಕ್ಷಕರ ನೇಮಕಾತಿ ಹಗರಣದ ಆರೋಪಿ, ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿ ನಿವಾಸದ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ದಾಳಿ ನಡೆಸಿ, ಒಂದಲ್ಲ ಎರಡಲ್ಲ.. 20 ಕೋಟಿ ರು. ನಗದು ವಶಪಡಿಸಿಕೊಂಡಿದ್ದಾರೆ.

ಬಂಗಾಳ ಸ್ಕೂಲ್‌ ಸರ್ವಿಸ್‌ ಕಮಿಷನ್‌ (ಎಸ್‌ಎಸ್‌ಸಿ) ಹಗರಣದಿಂದಲೇ ಈ ಮೊತ್ತವನ್ನು ಗಳಿಸಲಾಗಿದೆ ಎಂದು ಇ.ಡಿ. ಶಂಕಿಸಿದೆ. ಇ.ಡಿ. ಅಧಿಕಾರಿಗಳು ಬ್ಯಾಂಕ್‌ ಸಿಬ್ಬಂದಿಯ ಸಹಾಯದಿಂದ ಭಾರೀ ಪ್ರಮಾಣದಲ್ಲಿ ಪತ್ತೆಯಾಗಿದ್ದ ಹಣ ಎಣಿಸುತ್ತಿದ್ದಾರೆ. ಇದರೊಂದಿಗೆ ಅರ್ಪಿತಾ ಅವರ ಮನೆಯಿಂದ 20 ಮೊಬೈಲ್‌ ಸಿಕ್ಕಿವೆ. ಇವುಗಳನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೇ ರಾಜ್ಯ ಶಿಕ್ಷಣ ಸಚಿವ ಪರೇಶ್‌ ಸಿ ಅಧಿಕಾರಿ, ಶಾಸಕ ಮಾಣಿಕ್‌ ಭಟ್ಟಾಚಾರ್ಯ ಹಾಗೂ ಇನ್ನಿತರರ ಮನೆ ಮೇಲೂ ಇಡಿ ದಾಳಿ ನಡೆದಿದೆ.

3 ದಿನ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ: ಪ್ರಧಾನಿ ಮೋದಿ

ಏನಿದು ಎಸ್‌ಎಸ್‌ಸಿ ಹಗರಣ?: ಪಶ್ಚಿಮ ಬಂಗಾಳ ಸ್ಕೂಲ್‌ ಸರ್ವಿಸ್‌ ಕಮಿಷನ್‌ನ (ಎಸ್‌ಎಸ್‌ಸಿ) ಶಿಫಾರಸ್ಸಿನ ಆಧಾರದ ಮೇಲೆ ಶಾಲೆಗಳಲ್ಲಿ ಅಕ್ರಮವಾಗಿ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. 2014-16ರ ನಡುವೆ ಲಂಚ ಪಡೆದು ರಾಜ್ಯ ಪಟ್ಟದ ಅರ್ಹತಾ ಪರೀಕ್ಷೆಯ ಮೆರಿಟ್‌ ಪಟ್ಟಿಯಲ್ಲಿ ಹೆಸರಿಲ್ಲದವರನ್ನೂ ನೇಮಕ ಮಾಡಿಕೊಳ್ಳಲಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದರು. ಸಿಬಿಐ ಹಾಗೂ ಇ.ಡಿ. ಈ ಪ್ರಕರಣದ ತನಿಖೆ ನಡೆಸುತ್ತಿವೆ.

Latest Videos
Follow Us:
Download App:
  • android
  • ios