ಮಣಿಪುರದಲ್ಲಿ ಮತ್ತೆ ಹಿಂಸೆ: 15 ತಾಸು ಗುಂಡಿನ ಚಕಮಕಿ; ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ, ಉಗ್ರರು ಪರಾರಿ

ಗುಂಡಿನ ಚಕಮಕಿ ಸಂದರ್ಭದಲ್ಲಿ, ಈ ಸ್ಥಳದ ಸಮೀಪದ ತೇರಾ ಖೊಂಗ್ಸಾಂಗ್ಬಿ ಎಂಬಲ್ಲಿ 1 ಮನೆಗೆ ಬೆಂಕಿ ಹಚ್ಚಲಾಗಿದೆ. ಈ ಪ್ರದೇಶದ ಮೇಲೆ ಹಾರಾಡಿದ ಡ್ರೋನ್‌, ಉಗ್ರರು ತಮ್ಮ ಕೆಲವು ಸಹಚರರನ್ನು ಹೊತ್ತೊಯ್ಯುತ್ತಿರುವ ದೃಶ್ಯಗಳನ್ನು ಸೆರೆಹಿಡಿದಿದೆ

2 security personnel injured in gunfight in manipur ash

ಇಂಫಾಲ್‌ (ಜುಲೈ 29, 2023): ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದಲ್ಲಿ ಹಿಂಸೆ ಮುಂದುವರಿದಿದ್ದು, ಬಿಷ್ಣುಪುರ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾ ಯೋಧ ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ರಾಜ್ಯ ರಾಜಧಾನಿ ಇಂಫಾಲ್‌ನಿಂದ 50 ಕಿಮೀ ದೂರದಲ್ಲಿರುವ ಫೌಬಕ್‌ಚಾವೊ ಇಖೈ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಗುಂಡಿನ ಚಕಮಕಿ ಪ್ರಾರಂಭವಾಯಿತು. ಬಳಿಕ ಸುಮಾರು 15 ತಾಸು ಕಾಲ ತಡರಾತ್ರಿವರೆಗೆ ಚಕಮಕಿ ನಡೆದಿದ್ದು, ಕೊನೆಗೆ ಉಗ್ರರು ಪರಾರಿಯಾಗಿದ್ದಾರೆ.

ಈ ನಡುವೆ, ಗುಂಡಿನ ಚಕಮಕಿ ಸಂದರ್ಭದಲ್ಲಿ, ಈ ಸ್ಥಳದ ಸಮೀಪದ ತೇರಾ ಖೊಂಗ್ಸಾಂಗ್ಬಿ ಎಂಬಲ್ಲಿ 1 ಮನೆಗೆ ಬೆಂಕಿ ಹಚ್ಚಲಾಗಿದೆ. ಈ ಪ್ರದೇಶದ ಮೇಲೆ ಹಾರಾಡಿದ ಡ್ರೋನ್‌, ಉಗ್ರರು ತಮ್ಮ ಕೆಲವು ಸಹಚರರನ್ನು ಹೊತ್ತೊಯ್ಯುತ್ತಿರುವ ದೃಶ್ಯಗಳನ್ನು ಸೆರೆಹಿಡಿದಿದೆ. ಆದರೆ ಆ ದಂಗೆಕೋರರು ಗಾಯಗೊಂಡಿದ್ದಾರೆಯೇ ಅಥವಾ ಕೊಲ್ಲಲ್ಪಟ್ಟಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನು ಓದಿ: 20 ವಿಪಕ್ಷ ಸಂಸದರ ನಿಯೋಗ ಇಂದು, ನಾಳೆ ಮಣಿಪುರ ಭೇಟಿ: ನಿಮಗೆ ಚೀನಾ, ಪಾಕಲ್ಲಿ ಬೇಡಿಕೆಯಿದೆ ಹೋಗಿ; ಬಿಜೆಪಿ ವ್ಯಂಗ್ಯ

ಸುಮಾರು ಮೂರು ತಿಂಗಳ ಹಿಂದೆ ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಆರಂಭವಾದ ಜನಾಂಗೀಯ ಹಿಂಸಾಚಾರವು, ಈವರೆಗೆ 160 ಜನರನ್ನು ಬಲಿಪಡೆದಿದೆ.

ನಗ್ನ ಪರೇಡ್‌: ಸಂತ್ರಸ್ತ ಮಹಿಳೆಯರ ಹೇಳಿಕೆ ದಾಖಲು
ಮಣಿಪುರದಲ್ಲಿ ನಡೆದ ನಗ್ನ ಪರೇಡ್‌ ಪ್ರಕರಣದ ತನಿಖೆ ಭಾಗವಾಗಿ ಪೊಲೀಸರು ಶುಕ್ರವಾರ ಸಂತ್ರಸ್ತ ಮಹಿಳೆಯರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆಗಾಗಿ ಮಣಿಪುರ ಪೊಲೀಸ್‌ ಇಲಾಖೆಯು ಮಹಿಳಾ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ತಂಡವನ್ನು ರಚಿಸಿದೆ. ಈ ತಂಡವು ನಗ್ನ ಪರೇಡ್‌ಗೆ ಒಳಗಾದ ಸಂತ್ರಸ್ತ ಮಹಿಳೆಯರು ಮತ್ತು ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದು ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆ ಮುಂದುವರೆದಿದೆ. ಅಲ್ಲದೇ ಇದೇ ವೇಳೆ ಘಟನೆಯ ಪ್ರತ್ಯಕ್ಷದರ್ಶಿಗಳನ್ನು ಗುರುತಿಸಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Manipur: ಬಿಎಸ್‌ಎಫ್‌ ಯೋಧನಿಂದ ಮಹಿಳೆಗೆ ಲೈಂಗಿಕ ಕಿರುಕುಳ ; ಸಿಸಿ ಕ್ಯಾಮರಾದಲ್ಲಿ ಸೆರೆ

ಇದನ್ನೂ ಓದಿ: Manipur: ಒಂದಲ್ಲ.. ಎರಡಲ್ಲ.. 7 ಅತ್ಯಾಚಾರ ನಡೆದಿದೆ: ಬಗೆದಷ್ಟೂ ಬಯಲಿಗೆ ಬರ್ತಿದೆ ರೇಪ್‌ ಕೇಸ್‌!

Latest Videos
Follow Us:
Download App:
  • android
  • ios