ನವದೆಹಲಿ  (ಸೆ. 01)  ಓಲಾ ಮತ್ತು ಊಬರ್ ಚಾಲಕರು  ದೆಹಲಿಯಲ್ಲಿ ಮುಷ್ಕರ ಆರಂಭಿಸಿದ್ದು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.  ಸುಮಾರು ಎರಡು  ಲಕ್ಷ ಚಾಲಕರು ಧರಣಿ ನಿಂತಿದ್ದಾರೆ. 

ಸಾಲ ಮರುಪಾವತಿಗೆ ಇದ್ದ ತಾತ್ಕಾಲಿಕ ತಡೆ ಅವಧಿ ವಿಸ್ತರಣೆ ಮಾಡಬೇಕು, ಕೊರೋನಾ ಕಾರಣಕ್ಕೆ ಸಂಕಷ್ಟ ಎದುರಾಗಿದ್ದು ಪ್ರಯಾಣ ದರ ಏರಿಕೆ ಮಾಡಬೇಕು ಎಂದು ಆಗ್ರಹಿಸಿ ಮುಷ್ಕರ ಆರಂಭಿಸಿದ್ದಾರೆ.

ನಕಲಿ ಆಪ್ ಬಳಸಿ ಓಲಾಗೆ ಟೋಪಿ

ನಮ್ಮ ಮನವಿಗೆ ಯಾವುದೇ ಸ್ಪಂದನೆ ಸರ್ಕಾರದಿಂದ ಸಿಗದ ಕಾರಣ ಮುಷ್ಕರಕ್ಕೆ ಅನಿವಾರ್ಯವಾಗಿ ಕರೆ ನೀಡಿದ್ದೇವೆ ಎಂದು ಸರ್ವೋದಯ ಚಾಳಕರ ಸಂಘದ ಅಧ್ಯಕ್ಷ ಕಮಲ್ ಜೀತ್ ಸಿಂಗ್ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಈಲಾ-ಊಬರ್ ಸಂಸ್ಥೆಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಕೊರೋನಾ ಲಾಕ್ ಡೌನ್ ನಿಂದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸಾಲದ ಕಂತು ಪಾವತಿ ಅಸಾಧ್ಯ. ಬ್ಯಾಂಕ್ ಗಳು ಒತ್ತಡ ಹೇರಲು ಆರಂಭಿಸಿವೆ. ಇಎಂಐ ಪಾವತಿ ಮಾಡದಿದ್ದರೆ ವಾಹನ ಜಪ್ತಿ ಮಾಡುವ ಆತಂಕವೂ ಎದುರಾಗಿದೆ ಎಂದು ಸಿಂಗ್ ಹೇಳಿದ್ದಾರೆ.

ಮಹಿಳಾ ಸುರಕ್ಷತೆಗೆ ಟ್ಯಾಕ್ಸಿ ಗಳಿಂದ ಹೊಸ ರೂಲ್ಸ್

ಚಾಲಕರಿಗೆ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಲು ಬೇರೆ ಯಾವ ಮಾರ್ಗವೂ ಗೊತ್ತಿಲ್ಲ. ವೇಗದ ಚಾಲನೆ ಆರೋಪದ ಮೇಲೆ ನೀಡಿರುವ ಇ-ಬಲನ್ ಗಳನ್ನು ಸಾರಿಗೆ ಇಲಾಖೆ ಹಿಂದಕ್ಕೆ ಪಡೆಯಬೇಕು. ಕ್ಯಾಬ್ ಕಂಪನಿಗಳು ಹೆಚ್ಚಿನ ಕಮಿಷನ್ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ಮೆಟ್ರೋ ಪ್ರಯಾಣ ಆರಂಭವಾಗಿಲ್ಲ. ಜನರು ಅನಿವಾರ್ಯವಾಗಿ ಕ್ಯಾಬ್ ನಂಬಿಕೊಂಡಿದ್ದರು. ಆದರೆ ಈಗ ಮುಷ್ಕರ ಆರಂಭವಾಗಿದ್ದು ಅಘೋಷಿತ ಲಾಕ್ ಡೌನ್ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. 

ನಮ್ಮ ಮೆಟ್ರೋ ಸೇವೆ ಪುನಾರಂಭ

"