Asianet Suvarna News Asianet Suvarna News

ಲಖೀಂಪುರ ಗಲ​ಭೆ : ಸುಪ್ರೀಂ ಚಾಟಿ - ಇಬ್ಬರು ಅರೆಸ್ಟ್

  • ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಬಲಿ ಪಡೆದ ಘಟನೆ
  • ಸಚಿವರ ಬೆಂಗಾವಲು ವಾಹನಗಳಲ್ಲಿ ಇದ್ದ ಇಬ್ಬ​ರು ಆರೋಪಿಗಳನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು 
2 arrested in Lakhimpur violence case snr
Author
Bengaluru, First Published Oct 8, 2021, 9:43 AM IST

ನವದೆಹಲಿ/ಲಖೀಂಪು​ರ (ಅ.08): ಉತ್ತರ ಪ್ರದೇಶದ (Uttara Pradesh) ಲಖೀಂಪುರ ಖೇರಿಯಲ್ಲಿ ನಾಲ್ವರು ರೈತರು (Farmers) ಸೇರಿದಂತೆ 8 ಮಂದಿ ಬಲಿ ಪಡೆದ ಘಟನೆಯನ್ನು ದುರದೃಷ್ಟಕರ ಎಂದಿರುವ ಸುಪ್ರೀಂ ಕೋರ್ಟ್‌ (Supreme Court), ‘ಎಷ್ಟುಜನ​ರನ್ನು ಈವ​ರೆಗೆ ಬಂಧಿ​ಸಿ​ದ್ದೀರಿ? ಏನು ಕ್ರಮ ಕೈಗೊಂಡಿ​ದ್ದೀ​ರಿ?’ ಎಂದು ಪ್ರಶ್ನಿ​ಸಿದೆ. ಈ ಘಟನೆ ಕುರಿತು ಶುಕ್ರವಾರದ ಒಳಗಾಗಿ ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ.

ಇದರ ಬೆನ್ನಲ್ಲೇ, ಈ ಹಿಂಸಾಚಾರ ಘಟನೆ ಪ್ರಕರಣದ ವೇಳೆ ರೈತರ ಮೇಲೆ ಹತ್ತಿಸಿದ ಸಚಿವರ ಬೆಂಗಾವಲು ವಾಹನಗಳಲ್ಲಿ ಇದ್ದರು ಎನ್ನಲಾದ ಇಬ್ಬ​ರು ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು (Police) ಬಂಧಿಸಿದ್ದಾರೆ. ಬಂಧಿ​ತ​ರನ್ನು ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿ​ಷ್‌ ಮಿಶ್ರಾನ (Ashish MIshra) ಆಪ್ತ​ರಾದ ಲವ​ಕುಶ ಹಾಗೂ ಆಶಿಷ್‌ ಪಾಂಡೆ ಎಂದು ಗುರು​ತಿ​ಸ​ಲಾ​ಗಿ​ದೆ.

ನಿರಾ​ಯುಧ ರೈತರ ಮೇಲೆ ಹರಿದ ಕಾರು: ಮತ್ತೊಂದು ವಿಡಿಯೋ ವೈರ​ಲ್‌!

ಈ ನಡುವೆ, ಕೇಂದ್ರ ಸಚಿವ ಅಜಯ್‌ ಕುಮಾರ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾಗೆ ಸಮನ್ಸ್‌ ನೀಡಲಾಗಿದ್ದು, ಶುಕ್ರ​ವಾರ ಬೆಳಗ್ಗೆ 10 ಗಂಟೆಗೆ ವಿಚಾ​ರ​ಣೆಗೆ ಬರಲು ಸೂಚಿ​ಸ​ಲಾ​ಗಿ​ದೆ. ಅಲ್ಲದೆ ಈ ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ತರಾತುರಿಯಲ್ಲಿ ಏಕ ವ್ಯಕ್ತಿ ನ್ಯಾಯಾಂಗ ಆಯೋಗವನ್ನು ರಚನೆ ಮಾಡಿದ್ದು, ಅದರ ಹೊಣೆಯನ್ನು ಅಲಹಾಬಾದ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಪ್ರದೀಪ್‌ ಕುಮಾರ್‌ ಶ್ರೀವಸ್ತವ ಅವರಿಗೆ ವಹಿಸಿದೆ. ಆದರೆ ಈ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi), ‘ಸುಪ್ರೀಂ ಕೋರ್ಟ್‌ ಅಥವಾ ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ಕೊಲೆ ಮಾಡಿ, ಬಾಯಿ ಮುಚ್ಚಿಸಲು ಸಾಧ್ಯವಿಲ್ಲ: ರೈತರ ಪರ ಬಿಜೆಪಿ ಸಂಸದನ ಧ್ವನಿ!

ಏತನ್ಮಧ್ಯೆ, ಈ ಬಗ್ಗೆ ಗುರುವಾರ ಪ್ರತಿಕ್ರಿಯಿಸಿದ ಲಖನೌ ಇನ್‌ಸ್ಪೆಕ್ಟರ್‌ ಜನರಲ್‌ ಲಕ್ಷ್ಮೇ ಸಿಂಗ್‌, ‘ಆ​ಶಿಷ್‌ ಮಿಶ್ರಾ ಅವರು ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ ಲಖೀಂಪುರ ಹಿಂಸಾಚಾರ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ವಿಡಿಯೋ ಮತ್ತು ಮಾಹಿತಿಗಳ ಕುರಿತೂ ತನಿಖೆ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ನ್ಯಾಯಾಲಯ ಹೇಳಿದ್ದೇನು?:

ಈ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠ, 8 ಮಂದಿಯ ಕೊಲೆಗೆ ಕಾರಣವಾದ ಈ ಘಟನೆ ದುರದೃಷ್ಟಕರ. ಆದರೆ ಈ ಘಟನೆಯಲ್ಲಿ ಭಾಗಿಯಾದ ಆರೋಪಿಗಳ್ಯಾರು? ಅವರನ್ನು ಬಂಧಿಸಲಾಗಿದೆಯೇ?. ಈ ಪ್ರಕರಣವನ್ನು ನೀವು ಸರಿಯಾಗಿ ನಿರ್ವಹಿಸಿಲ್ಲ. ಸರಿಯಾದ ಕ್ರಮದಲ್ಲಿ ಎಫ್‌ಐಆರ್‌ ಅನ್ನೂ ದಾಖಲಿಸಿಲ್ಲ. ಜೊತೆಗೆ ಈ ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ತಾಯಿ ಆಘಾತದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರ ಆಸ್ಪತ್ರೆ ವೆಚ್ಚವನ್ನು ಉತ್ತರ ಪ್ರದೇಶ ಸರ್ಕಾರವೇ ಭರಿಸಬೇಕು ಎಂದು ಸೂಚಿಸಿದೆ.

Follow Us:
Download App:
  • android
  • ios