* ಲಖೀಂಪುರ ಹಿಂಸಾಚಾರಕ್ಕೆ ತೀವ್ರ ಆಕ್ರೋಶ* ರೈತರ ಪರ ಧ್ವನಿ ಎತ್ತಿದ ಬಿಜೆಪಿ ಸಂಸದ* ಹೊಸ ವಿಡಿಯೋ ಬಿಡುಗಡೆ ಮಾಡಿದ ವರುಣ್ ಗಾಂಧಿ

ಲಖೀಂಪುರ(ಆ.07): ಬಿಜೆಪಿ ಸಂಸದ ವರುಣ್ ಗಾಂಧಿ(BJP MP Varun Gandhi) ಅವರು ಲಖೀಂಪುರ ಖೇರಿ(Lakhimpur Kheri) ಹಿಂಸಾಚಾರದ ಬಗ್ಗೆ ನಿರಂತರವಾಗಿ ಧ್ವನಿ ಎತ್ತಿದ್ದಾರೆ. ರೈತರ ಮೇಲೆ ಕಾರು ಹರಿಸಿರುವ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದು, ಅದನ್ನು ಅವರು ಬುಧವಾರ ಶೇರ್ ಮಾಡಿದ್ದಾರೆ. ಗುರುವಾರ, ಅವರು ಈ ಘಟನೆಯ ಮತ್ತೊಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ, ಇದು ಮೊದಲಿಗಿಂತ ಉತ್ತಮ ಗುಣಮಟ್ಟದ್ದಾಗಿದೆ. ಇದರಲ್ಲಿ ಘಟನೆ ಮತ್ತಷ್ಟು ಸ್ಪಷ್ಟವಾಗಿ ಗೋಚರಿಸುತ್ತದೆ. ಲಖೀಂಪುರ ಹಿಂಸಾಚಾರದಲ್ಲಿ ನಾಲ್ಕು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ. ಕಪ್ಪು SUV ಕೆಲವು ಪ್ರತಿಭಟನಾನಿರತ ರೈತರ ಮೇಲೆ ಹರಿದು ಹಿಂಸಾಚಾರ ನಡೆದಿದೆ. ವರುಣ್ ಗಾಂಧಿ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಮುಗ್ಧ ರೈತರ ರಕ್ತಕ್ಕೆ ನ್ಯಾಯ ಸಿಗಬೇಕಿದೆ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ವರುಣ್ ಗಾಂಧಿ(Varun Gandhi), 'ಈ ವೀಡಿಯೋ ಕನ್ನಡಿಯಂತೆ ಸ್ಪಷ್ಟವಾಗಿದೆ. ಪ್ರತಿಭಟನಾಕಾರರನ್ನು ಕೊಲ್ಲುವ ಮೂಲಕ ನೀವು ಅವರನ್ನು ಮೌನಗೊಳಿಸಲು ಸಾಧ್ಯವಿಲ್ಲ. ಮುಗ್ಧ ರೈತರ ರಕ್ತ ಚೆಲ್ಲುವ ಘಟನೆಗೆ ಯಾರು ಕಾರಣ ಎಂಂಬುವುದು ಸ್ಪಷ್ಟವಾಗಬೇಕು. ಪ್ರತಿಯೊಬ್ಬ ರೈತರ ಮನಸ್ಸಿನಲ್ಲಿ ಉಗ್ರ ಭಾವ ಮತ್ತು ನಿರ್ದಯ ಭಾವನೆ ಹುಟ್ಟಿಕೊಳ್ಳುವ ಮೊದಲು ಅವರಿಗೆ ನ್ಯಾಯ ಒದಗಿಸಬೇಕು ಎಂದಿದ್ದಾರೆ. ಇನ್ನು ಆಡಳಿತ ಪಕ್ಷದ ಸಂಸದ ವರುಣ್ ಗಾಂಧಿ ಬಹುಶಃ ಈ ಘಟನೆಯ ಬಗ್ಗೆ ಧ್ವನಿ ಎತ್ತಿದ ಏಕೈಕ ಬಿಜೆಪಿ ನಾಯಕ.

Scroll to load tweet…

ಲಖೀಂಪುರ್ ಖೇರಿಯ 45 ಸೆಕೆಂಡುಗಳ ವೀಡಿಯೋದಲ್ಲಿ, ಕಪ್ಪು ಬಾವುಟಗಳನ್ನು ಹೊತ್ತ ರೈತರು ರಸ್ತೆಯಲ್ಲಿ ದಾಗುತ್ತಿರುವುದನ್ನು ನೋಡಬಹುದಾಗಿದೆ. ಅದೇ ಸಮಯದಲ್ಲಿ ಥಾರ್ ಕಾರು ಹೊರಟು, ಅವರ ಮೇಲೆ ವೇಗವಾಗಿ ಸಾಗಿದೆ. ದಾಳಿ ಮಾಡುವ ವಾಹನದ ಜೊತೆಗೆ, ಬೆಂಗಾವಲಿನಲ್ಲಿದ್ದ ಇನ್ನೂ ಎರಡು ವಾಹನಗಳು ವೇಗವಾಗಿ ಹೋಗಿವೆ.

ವರುಣ್ ಗಾಂಧಿ ಬುಧವಾರ ಮಾಡಿದ ಟ್ವೀಟ್‌ನಲ್ಲಿ , 'ಲಖೀಂಪುರ ಖೇರಿಯಲ್ಲಿ ಉದ್ದೇಶಪೂರ್ವಕವಾಗಿ ರೈತರ ಮೇಲೆ ವೇಗವಾಗಿ ಸಾಗಿದ ವಾಹನದ ವಿಡಿಯೋ ನೋಡುಗರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಈ ಬಗ್ಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು.