Asianet Suvarna News Asianet Suvarna News

ದೇಶದಲ್ಲಿ 2.49 ಲಕ್ಷ ಶತಾಯುಷಿ ಮತದಾರರು: ಮುಖ್ಯ ಚುನಾವಣಾ ಆಯುಕ್ತ

ದೇಶದಲ್ಲಿ 100 ವರ್ಷಕ್ಕಿಂತ ಮೇಲ್ಪಟ್ಟ2.49 ಲಕ್ಷ ಜನ ಮತದಾರರಿದ್ದಾರೆ. ಅಲ್ಲದೇ 80 ವರ್ಷಕ್ಕಿಂತ ಮೇಲ್ಪಟ್ಟ 1.80 ಕೋಟಿ ಜನ ಮತದಾರರಿದ್ದಾರೆ ಎಂದು ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್‌ಕುಮಾರ್ ಹೇಳಿದರು.

2.49 lakh centenarian voters in country Chief Election Commissioner akb
Author
First Published Nov 10, 2022, 7:36 AM IST

ಪುಣೆ: ದೇಶದಲ್ಲಿ 100 ವರ್ಷಕ್ಕಿಂತ ಮೇಲ್ಪಟ್ಟ2.49 ಲಕ್ಷ ಜನ ಮತದಾರರಿದ್ದಾರೆ. ಅಲ್ಲದೇ 80 ವರ್ಷಕ್ಕಿಂತ ಮೇಲ್ಪಟ್ಟ 1.80 ಕೋಟಿ ಜನ ಮತದಾರರಿದ್ದಾರೆ. ಇಲ್ಲಿ ಮತದಾರರ ಸಾರಾಂಶ ಪರಿಷ್ಕರಣೆಯ ಪಟ್ಟಿ ಬಿಡುಗಡೆ ಹಾಗೂ ಮತದಾರರ ನೊಂದಣಿ ಕುರಿತು ಜಾಗೃತಿ ಮೂಡಿಸಲು ನಡೆಸಿದ ರಾಲಿಗೆ ಚಾಲನೆ ನೀಡಿ ಚುನಾವಣಾ ಆಯುಕ್ತ (Election Commissioner)ರಾಜೀವ್‌ ಕುಮಾರ್‌ (Rajeev Kumar) ಮಾತನಾಡಿ ಈ ವಿಷಯ ತಿಳಿಸಿದರು.

ನಗರ ಪ್ರದೇಶದ ಜನರು ಹೆಚ್ಚಾಗಿ ಮತದಾನ ಮಾಡುವುದಿಲ್ಲ. ಈ ಹಿನ್ನೆಲೆಯಲ್ಲಿ ನಗರ ಪ್ರದೇಶದಲ್ಲಿ ಮತದಾರರನ್ನು ಹೆಚ್ಚಿಸುವಂತೆಯೂ ಹಾಗೂ ಅವರನ್ನು ಮತ ಚಲಾಯಿಸುವಂತೆ ಪ್ರೊತ್ಸಾಹ ನೀಡಲು ಈ ಬಾರಿ ಚುನಾವಣಾ ಆಯೋಗ ಮುಂದಾಗಿದೆ ಎಂದರು. ಇತ್ತೀಚಿಗೆ ಭಾರತದ ಮೊದಲ ಮತದಾರ ಶ್ಯಾಮ ಸರನ್‌ ನೇಗಿ (Shyam Saran Negi) ನಿಧನರಾದಾಗ ಅವರಿಗೆ 106 ವರ್ಷ ವಯಸ್ಸು. ನಿಧನದ 3 ದಿನದ ಮುಂಚೆಯೂ ಶ್ಯಾಮ ನೇಗಿ ಮತದಾನ ಮಾಡಿ ತಮ್ಮ ಕರ್ತವ್ಯ ಮೆರೆದಿದ್ದಾರೆ ಎಂದು ರಾಜೀವ್‌ ಪ್ರಶಂಸಿಸಿದರು.


Gujarat Election 2022: ಗುಜರಾತ್‌ನಲ್ಲಿ ಡಿಸೆಂಬರ್‌ 1, 5ಕ್ಕೆ ಎರಡು ಹಂತದ ಮತದಾನ, 8ಕ್ಕೆ ಫಲಿತಾಂಶ!

Munugode Bypoll: ಮತ ಹಾಕದಿದ್ದರೆ ಕಲ್ಯಾಣ ಯೋಜನೆ ಇಲ್ಲ ಎಂದಿದ್ದ ಸಚಿವರಿಗೆ ಚುನಾವಣಾ ಆಯೋಗ ಶಾಕ್..!

 

Follow Us:
Download App:
  • android
  • ios